ಸಮಯ ಹಾಗೂ ಆಹಾರಕ್ಕೆ ಆದ್ಯತೆ ನೀಡಿದರೆ ಪ್ರವಾಸ ಸುಖಕರ: ಶಿವರಾಜ ಅಂಡಗಿ

ಸಮಯ ಹಾಗೂ ಆಹಾರಕ್ಕೆ ಆದ್ಯತೆ ನೀಡಿದರೆ ಪ್ರವಾಸ ಸುಖಕರ: ಶಿವರಾಜ ಅಂಡಗಿ

ಸಮಯ ಹಾಗೂ ಆಹಾರಕ್ಕೆ ಆದ್ಯತೆ ನೀಡಿದರೆ ಪ್ರವಾಸ ಸುಖಕರ: ಶಿವರಾಜ ಅಂಡಗಿ

ಕಲಬುರಗಿ: ಯಾತ್ರೆಯ ಸಂದರ್ಭದಲ್ಲಿ ಸಮಯಪಾಲನೆ ಹಾಗೂ ಮಿತಾಹಾರಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಪ್ರವಾಸ ಸುಖಕರವಾಗುತ್ತದೆ ಎಂದು ಅಂಡಗಿ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಜ ಅಂಡಗಿ ಹೇಳಿದರು.

ಇತ್ತೀಚೆಗೆ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಕಾಸಿ, ಅಯೋಧ್ಯೆ ಹಾಗೂ ಪ್ರಯಾಗ್ ರಾಜ್ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳುತ್ತಿರುವ ಯಾತ್ರಿಕರಿಗೆ ಹಿಂದೂ ಧರ್ಮದ ಸನಾತನ ಸಂಸ್ಕೃತಿಯ ಪ್ರತೀಕವಾದ ಕೆಸರಿ ಬಾವುಟವನ್ನು ನೀಡಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಯಾತ್ರಿಕರ ಬಳಗದ ಹಿರಿಯರಾದ ಮಲ್ಲಿನಾಥ ದೇಶಮುಖ ಹಾಗೂ ಬಮ್ಮಲಿಂಗಪ್ಪ ದೇಶಮುಖ ಅವರಿಗೆ ಬಾವುಟ ನೀಡಿ ಪ್ರಯಾಣಕ್ಕೆ ಚಾಲನೆ ನೀಡಿದರು.

ಕಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ಮುಂತಾದ ಧಾರ್ಮಿಕ ಕ್ಷೇತ್ರಗಳಲ್ಲಿ ಲಕ್ಷಾಂತರ ಭಕ್ತರು ಸೇರುವ ಹಿನ್ನೆಲೆಯಲ್ಲಿ ಯಾತ್ರಿಕರು ಮುಂಜಾಗ್ರತೆ ವಹಿಸುವುದು ಅತ್ಯಂತ ಅಗತ್ಯವಾಗಿದೆ. ದರ್ಶನ ಹಾಗೂ ಪ್ರಯಾಣದ ಸಮಯದಲ್ಲಿ ಸಮಯಪಾಲನೆ ಮುಖ್ಯವಾಗಿದ್ದು, ಜೊತೆಗೆ ಮಿತಾಹಾರ ಪಾಲಿಸಿದರೆ ಯಾತ್ರೆ ಸುಗಮವಾಗುತ್ತದೆ ಎಂದು ಅವರು ತಿಳಿಸಿದರು.

ಬಾಲಾಜಿ ಟೂರ್ & ಟ್ರಾವೆಲ್ಸ್ ವತಿಯಿಂದ ಆಯೋಜಿಸಲಾದ ಈ ಯಾತ್ರೆಗೆ ಹೊರಡುವ ಮುನ್ನ ಭಕ್ತರು ಶರಣಬಸವೇಶ್ವರರ ದರ್ಶನ ಪಡೆದು ಬಳಿಕ ಬಸ್ಸಿನ ಮೂಲಕ ಪ್ರಯಾಣ ಆರಂಭಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ವಿನೋದಕುಮಾರ ಜನೇವರಿ, ಶಿವಾ ಮುಕರಂಬಿ, ವಿದ್ಯಾಧರ ಬೆಳಮಗಿ, ಶರಣ ಪಾಟೀಲ, ಸಂಗಮೇಶ ಪಾಟೀಲ, ಗೌರಮ್ಮ ಪಾಟೀಲ, ರೂಪಾ ಅಡಕಿ, ಕಲಾವತಿ ಗಂಗಮ್ಮ, ಸಿದ್ರಾಮ ರಟಕಲ್, ಮುರುಗೇಶ, ಜಗನಾಥ ಅಡಕಿ, ಬಸವರಾಜ ಮುಕರಂಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.