ಚಿತ್ರಕಲಾವಿದ ಸತೀಶ ಕೇಮಶೆಟ್ಟಿಗೆ “ಸಂಸ್ಕಾರ ರತ್ನ” ಪ್ರಶಸ್ತಿ

ಚಿತ್ರಕಲಾವಿದ ಸತೀಶ ಕೇಮಶೆಟ್ಟಿಗೆ “ಸಂಸ್ಕಾರ ರತ್ನ” ಪ್ರಶಸ್ತಿ

ಚಿತ್ರಕಲಾವಿದ ಸತೀಶ ಕೇಮಶೆಟ್ಟಿಗೆ “ಸಂಸ್ಕಾರ ರತ್ನ” ಪ್ರಶಸ್ತಿ

ದೇವರಹಿಪ್ಪರಗಿ: ತಾಲೂಕಿನ ಯಾಳವಾರ ಗ್ರಾಮದಲ್ಲಿರುವ ಸಂಸ್ಕಾರಧಾಮ ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ನಡೆಯಲಿರುವ ಸಂಸ್ಕಾರ ಉತ್ಸವ ಹಾಗೂ 14ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಯಾಳವಾರ ಗ್ರಾಮದ ಪ್ರತಿಭಾವಂತ ಚಿತ್ರಕಲಾವಿದ, ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ) ವಿಜಯಪುರದ ಅಧ್ಯಕ್ಷರಾದ ಸತೀಶ ಕೇಮಶೆಟ್ಟಿ ಅವರಿಗೆ “ಸಂಸ್ಕಾರ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗುತ್ತಿದೆ.

ಕಾರ್ಯಕ್ರಮವು ದಿನಾಂಕ 13 ಮಾರ್ಚ್ 2026 ಶುಕ್ರವಾರ ಸಂಜೆ 5 ಗಂಟೆಗೆ ಯಾಳವಾರ ಗ್ರಾಮದ ಸಂಸ್ಕಾರಧಾಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ರಾಜುಗೌಡ ಭೀ. ಪಾಟೀಲ ಅವರು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದೇವರಹಿಪ್ಪರಗಿ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸೋಮನಗೌಡ ಪಾಟೀಲ, ವಿಜಯಪುರದ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞರಾದ ಡಾ. ಪ್ರಭುಗೌಡ ಲಿಂಗದಳ್ಳಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮ ವಿಶೇಷ ಸಾಧನೆಗಳ ಮೂಲಕ ಗುರುತಿಸಿಕೊಂಡಿರುವ ಸತೀಶ ಕೇಮಶೆಟ್ಟಿ ಅವರು ಕಲಾ ಪ್ರಚಾರ ಹಾಗೂ ಯುವ ಪ್ರತಿಭೆಗಳ ಉತ್ತೇಜನಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದು ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯವರು ತಿಳಿಸಿದ್ದಾರೆ.