ಕೃತಕ ಬುದ್ಧಿಮತ್ತೆ ಭಾರತಕ್ಕೆ ಕಳಂಕ. ಪ್ರೊ. ಶಿವರಾಜ್ ಪಾಟೀಲ್
ಕೃತಕ ಬುದ್ಧಿಮತ್ತೆ ಭಾರತಕ್ಕೆ ಕಳಂಕ. ಪ್ರೊ. ಶಿವರಾಜ್ ಪಾಟೀಲ್
ಭಾರತ ದೇಶವು ನೈಜ ಹಾಗೂ ವಾಸ್ತವಿಕ ಮತ್ತು ಸತ್ಯ ಸಂಗತಿಯ ಮೇಲೆ ಬೆಳಕು ಚೆಲ್ಲಿ ತನ್ನ ಬುದ್ಧಿಶಕ್ತಿಯನ್ನು ಪ್ರದರ್ಶಿಸಿ ವಿಶ್ವಕ್ಕೆ ಗುರುವಾಗಿದೆ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೃತಕ ಬುದ್ಧಿಮತ್ತೆಗೆ ಗುರುವಾದದ್ದು ವಿಪರ್ಯಾಸದ ಸಂಗತಿ ಯಾಗಿದೆ ಎಂದರೆ ಇದೊಂದು ಹಾಸ್ಯಸ್ಪದ ವಿಷಯವಾಗಿದೆ ಕೃತಕ ಬುದ್ಧಿಮತ್ತೆಗೆ ಭಾರತ ವಿಶ್ವಗುರುವಾಗುತ್ತಿರುವುದು ದೇಶಕ್ಕೆ ಅಂಟಿದ ಕಳಂಕವಾಗಿದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೃತಕ ಬುದ್ಧಿಮತ್ತೆ ಶೃಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಈ ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯನ್ನು ಕುರಿತು ಅತ್ಯಂತ ಹೆಮ್ಮೆ ಮತ್ತು ಅಭಿಮಾನದಿಂದ ಮಾತನಾಡಿದ್ದು ಇದರ ಅವಶ್ಯಕತೆಯನ್ನು ಒತ್ತಿ ಹೇಳಿದ್ದು ದುರಂತದ ಸಂಗತಿ ಆಗಿದೆ ಭಾರತ ಸತ್ಯ ನ್ಯಾಯ ಪ್ರಾಮಾಣಿಕತೆಗೆ ಮತ್ತು ಅದಕ್ಕಿಂತ ಹೆಚ್ಚಾಗಿ ನೈಜ ಬುದ್ಧಿಮತ್ತೆಗೆ ತಾತ್ವಿಕ ಹಾಗೂ ಸೈದಾಂತಿಕ ಭಾವನಾತ್ಮಕ ಪ್ರತಿಭಾವಂತ ಶಕ್ತಿಗೆ ಚಾಣಾಕ್ಷತ್ತೆಗೆ ಹೆಸರುವಾಸಿಯಾದದ್ದು ಇಲ್ಲಿ ಚಾಣಕ್ಯ ನೀತಿ ಹಾಗೂ ಅರ್ಥಶಾಸ್ತ್ರದ ಮೇಲೆ ವಿಜ್ಞಾನೇಶ್ವರ ನ್ಯಾಯಶಾಸ್ತ್ರದ ಮೇಲೆ ಸತ್ಯ ಮಹಾಭಾರತದ ವಿದುರ ನೀತಿ ಹಾಗೂ ಪ್ರಾಮಾಣಿಕತೆಯ ಮೇಲೆ ತಮ್ಮ ನೈಜ ಬುದ್ಧಿವಂತಿಕೆಯನ್ನು ತೋರಿಸಿ ಇತಿಹಾಸ ದಾಖಲಾಗಿದ್ದಾರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತದ ತುಂಬಾ ಜ್ಞಾನಿಗಳು ವಿಜ್ಞಾನಿಗಳು ತತ್ವಜ್ಞಾನಿಗಳು ವಾದ ವಿವಾದ ಮಂಡನ ಖಂಡನ ಮಾಡಿ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ ದೇಶ ಸಭೆ ಸಮಾರಂಭ ಸಮ್ಮೇಳನಗಳಲ್ಲಿ ಚರ್ಚೆ ಗೋಷ್ಠಿಗಳನ್ನು ನಡೆಸಿ ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲಿದ ದೇಶ ದುರ್ದೈವದ ಸಂಗತಿ ಎಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೃತಕ ಬುದ್ಧಿಮತ್ತೆಯನ್ನು ಸ್ವಾಗತಿಸಿರುವುದು ಮತ್ತು ಅದನ್ನು ಅದ್ಭುತ ಸಾಧನೆ ಎಂದು ಪ್ರಶಂಸಿರುವುದು ವಿಶ್ವಕ್ಕೆ ಇದು ಕೊಡುಗೆ ಎಂದು ಮಾತನಾಡಿರುವುದು ಅತ್ಯಂತ ಅವಮಾನಕರ ಸಂಗತಿಯಾಗಿದೆ ಭಾರತ ನಯವಂಚಕತನ ಕೃತಕ ಬುದ್ಧಿಮತ್ತೆ ಮೋಸ ಡಾಂಬಿಕತೆ ಮುಖ ಮತ್ತು ಮುಖವಾಡ ಇವುಗಳ ಮಧ್ಯೆ ಬದುಕುವುದನ್ನು ತಿರಸ್ಕರಿಸಿದೆ ಹೇಳುವದೊಂದು ಮಾಡುವದೊಂದು ತೋರಿಸುವುದು ಒಂದು ಬದುಕುವದೊಂದು ಎಂಬ ವಿಚಾರಗಳಿಗೆ ಈ ದೇಶ ತಿಲಾಂಜಲಿ ನೀಡಿದೆ ಅಂತರಂಗ ಬಹಿರಂಗ ಶುದ್ಧ ಇಲ್ಲದವರ ನೆಂತು ನಂಬುವೆ ಕೂಡಲಸಂಗ ಎಂದು ಬಸವಣ್ಣನವರು ಕೆಳಿದ್ದಾರೆ ಅದನ್ನು ಇಲ್ಲಿ ವಾಸ್ತವಿಕತೆಗೆ ಮತ್ತು ಪಾರದರ್ಶಕತೆಗೆ ಬಹಳಷ್ಟು ಬೆಲೆ ಇದೆ ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿ ಯಂತೆ ಇರಬೇಕು ನುಡಿದರೆ ಸ್ಪಟಿಕದ ಶಲಾಕೆ ಎಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಹೌದೌದೇನಬೇಕು ಎಂಬ ಸಿದ್ದಾಂತ ಭಾರತದಾಗಿದೆ ಇಲ್ಲಿ ಕೃತಕತೆಗೆ ಕೃತಕ ಬುದ್ಧಿಮತ್ತೆಗೆ ಬೆಲೆ ಇಲ್ಲ ಏನಿದ್ದರೂ ಮೂಲಭೂತವಾಗಿರಬೇಕು ವಾಸ್ತವವಾಗಿರಬೇಕು ಸತ್ಯವಾಗಿರಬೇಕು ಅಷ್ಟೇ ಅಲ್ಲ ಪಾರದರ್ಶಕವಾಗಿರಬೇಕು ಒಳಗೊಂದು ಹೊರಗೊಂದು ಇರಬಾರದು ಅದು ಭಾರತ ಎಂದು ಒಪ್ಪಿಲ್ಲ ಒಪ್ಪುವುದು ಇಲ್ಲ ಆದರೆ ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಮೋಸ ವಂಚನೆಯಿಂದ ಕೂಡಿರುವ ವಾಟ್ಸಾಪ್ ಮೆಸೇಜ್ ಗಳು ಇನಸ್ಟ ಗ್ರಾಂ ವಿಷಯಗಳು ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನಲ್ ಗಳು ಇಂದು ಅಪರಾಧ ದಾರಿಯಲ್ಲಿ ಮುನ್ನಡೆಯುತ್ತಿವೆ ಸೈಬರ್ ಅಪರಾಧಗಳು ದೇಶದ ತುಂಬಾ ದಿನೇ ದಿನೇ ಹೆಚ್ಚಿಗೆ ನಡೆಯುತ್ತಿವೆ ಇವುಗಳ ಮೇಲೆ ನಿಗಾ ಇಡುವ ಕೆಟ್ಟ ಪರಿಸ್ಥಿತಿ ಬಂದಿದೆ ಇದರಲ್ಲಿ ಯಾವುಡೂ ವಾಸ್ತವಿಕತೆ ಇಲ್ಲ ಇಂಥದರಲ್ಲಿ ಮತ್ತೆ ಕೃತಕ ಬುದ್ಧಿಮತ್ತೆಯನ್ನು ಕುರಿತು ವ್ಯಾಪಕ ಪ್ರಚಾರ ನೀಡಿರುವುದು ಮತ್ತು ಅದನ್ನು ಒಪ್ಪಿಕೊಂಡಿರುವುದು ಭಾರತದ ದುರಂತ ವಾಗಿದೆ ಮತ್ತು ಭಾರತಕ್ಕೆ ಅಂಟಿದ ಕಳಂಕವಾಗಿದೆ ಎಂದು ಸ್ಪಷ್ಟವಾಗುತ್ತದೆ ನಮ್ಮ ದೇಶದಲ್ಲಿ ಬುದ್ಧಿಮತ್ತೆಗೆ ಕೊರತೆ ಇಲ್ಲ ಋಷಿ ಮುನಿಗಳು ವಿಜ್ಞಾನಿ ತತ್ವಜ್ಞಾನಿಗಳು ಪಂಡಿತ ಪಾಮರರು ವಿಷಯ ಪರಿಣತರು ನೈಜ ಹಾಗೂ ವಾಸ್ತವಿಕ ಬುದ್ಧಿವಂತಿಕೆ ಬ್ರದರ್ ಸಿಸಿ ಅದರ ಮೇಲೆ ಚರ್ಚೆ ವಿಚಾರ ಸಂಕೀರ್ಣ ಗೋಷ್ಠಿಗಳು ಮತ್ತು ಅನುಭವ ಮಂಟಪಗಳು ಏರ್ಪಡಿಸಿ ವ್ಯಾಪಕವಾದ ಚರ್ಚೆ ನಡೆಸಿ ಸಭೆ ಸಮಾರಂಭಗಳನ್ನು ಮಾಡಿ ಸಮ್ಮೇಳನಗಳ ಮೂಲಕ ನಿರ್ಣಯಗಳನ್ನು ತೆಗೆದುಕೊಂಡು ವಾಸ್ತವಿಕ ಜ್ಞಾನ ತತ್ವ ಜ್ಞಾನ ವಿಚಾರಗಳ ಕೊಡುಗೆ ನೀಡುವಾಗ ಅತ್ಯಂತ ಬುದ್ಧಿವಂತಿಕೆ ಮತ್ತು ಜಾಣ್ಮೆಯನ್ನು ಪ್ರದರ್ಶಿಸುವ ಪದ್ಧತಿ ಈ ದೇಶದಲ್ಲಿದೆ ಹಿಗಿರುವಾಗ ಕೃತಕ ಬುದ್ಧಿಮತ್ತೆಗೆ ಭಾರತ ಇಂದು ಶರಣು ಹೋಗಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಈ ಕೃತಕ ಬುದ್ಧಿಮತ್ತೆಯ ಶೃಂಗ ಸಭೆ ಸಮ್ಮೇಳನ ಇತ್ತೀಚಿಗೆ ನಡೆದಿದ್ದು ಅದರಲ್ಲಿ ಎರಡು ದಿನಗಳ ಗೋಷ್ಠಿ ಹಾಗೂ ವಿಚಾರ ಸಂಕಿರಣ ನಡೆದದ್ದು ಸಮ್ಮೇಳನ ಯಶಸ್ವಿಯಾಗಿದೆ ಎಂದು ಹೇಳುವುದು ಅತ್ಯಂತ ಹಾಸ್ಯಸ್ಪದ ಸಂಗತಿ ಮತ್ತು ಇದು ದೇಶವನ್ನು ಹಾಳು ಮಾಡುತ್ತದೆ ಬುದ್ಧಿವಂತರು ಜ್ಞಾನಿಗಳು ವಿಜ್ಞಾನಿಗಳು ಇಲ್ಲದ ದೇಶದಲ್ಲಿ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳಬಹುದು ಇದು ಭಾರತಕ್ಕೆ ಸೂಕ್ತವಲ್ಲ ಇದನ್ನು ಒಪ್ಪಿಕೊಳ್ಳಬಾರದು ಮತ್ತು ಇದನ್ನು ಭಾರತದ ಪ್ರಧಾನಿ ಪ್ರೋತ್ಸಾಹಿಸಬಾರದು ಅಲ್ಲದೆ ವಿಶಾಲವಾದ ಪ್ರಚಾರ ನೀಡಬಾರದು ಇದು ದೇಶಕ್ಕೆ ಒಂದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂಬುದು ನನ್ನ ಅಭಿಪ್ರಾಯ ಪ್ರೋ ಶಿವರಾಜ್ ಪಾಟೀಲ್ ಚಿಂತಕರು
