ದಿ. ಶಿವಪುತ್ರ ಶಾವಂತಗಿರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ದಿ. ಶಿವಪುತ್ರ ಶಾವಂತಗಿರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ದಿ. ಶಿವಪುತ್ರ ಶಾವಂತಗಿರಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕಲಬುರಗಿ: ನಗರದ ಡಾ. ಬಾಬು ಜಗಜೀವನ್ ರಾಮ್ ಅವರ ಮೂರ್ತಿ ಆವರಣದಲ್ಲಿ ದಿ. ಶಿವಪುತ್ರ ಶಾವಂತಗಿರಿ ಅವರ ನಿಧನರಾದ ಹಿನ್ನೆಲೆಯಲ್ಲಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡ ಮಲ್ಲಿಕಾರ್ಜುನ್ ಜಿನಕೇರಿ ಮಾತನಾಡಿ ಸಮಾಜದ ಉನ್ನತಿಗಾಗಿ ಸದಾ ಕಳಕಳಿ ಹೊಂದಿದ್ದ ಶಿವಪುತ್ರ ಶಾವಂತಗಿರಿರವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂದು ಮಾದಿಗ ಸಮಾಜಕ್ಕೆ ಸುದ್ದಿ ಅತ್ಯಂತ ದುಃಖಕರವಾಗಿದೆ.

ಅವರ ಅಗಲಿಕೆಯಿಂದ ಮಾದಿಗ ಸಮಾಜಕ ಹಾಗೂ ಸಮಸ್ತ ಸಮಾಜಕ್ಕೂ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ದಶರಥ ಕಲಗುರ್ತಿ, ಲಿಂಗರಾಜ ತಾರಫೈಲ್, ರಾಜು ಕಟ್ಟಿಮನಿ, ಬಂಡೇಶ್ ರತ್ನಡಗಿ, ಕೃಷ್ಣಪ್ಪ ತಂಗಡಗಿ ಸೇರಿದಂತೆ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು