ರಾಜ್ಯ ವಕೀಲರ ಪರಿಷತ್ ಮಹಿಳಾ ಘಟಕದ ಸದಸ್ಯೆಯಾಗಿ ವಿದ್ಯಾರಾಣಿ ಭಟ್ ಆಯ್ಕೆ
ರಾಜ್ಯ ವಕೀಲರ ಪರಿಷತ್ ಮಹಿಳಾ ಘಟಕದ ಸದಸ್ಯೆಯಾಗಿ ವಿದ್ಯಾರಾಣಿ ಭಟ್ ಆಯ್ಕೆ
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಕಲಬುರಗಿಯ ವಕೀಲೆ ವಿದ್ಯಾರಾಣಿ ಭಟ್ ಅವರು ಮಹಿಳಾ ಘಟಕದ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಚುನಾವಣಾಧಿಕಾರಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ಸುಭಾಷ್ ಬಿ. ಆದಿ ಅವರು ವಿದ್ಯಾರಾಣಿ ಭಟ್ ಅವರಿಗೆ ಆಯ್ಕೆಯ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಅಜಿತ್ ಜೆ. ಗುಂಜಾಲ್ ಹಾಗೂ ಕರ್ನಾಟಕದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
