ಡಾ. ವಿಷ್ಣುವರ್ಧನ್ ರವರ 16ನೇ ಪುಣ್ಯ ಸ್ರಮರಣೆಯಲ್ಲಿ ಬಾಲ ಕಲಾವಿದರಿಗೆ ಸನ್ಮಾನ

ಡಾ. ವಿಷ್ಣುವರ್ಧನ್ ರವರ 16ನೇ ಪುಣ್ಯ ಸ್ರಮರಣೆಯಲ್ಲಿ ಬಾಲ ಕಲಾವಿದರಿಗೆ ಸನ್ಮಾನ

ಡಾ. ವಿಷ್ಣುವರ್ಧನ್ ರವರ 16ನೇ ಪುಣ್ಯ ಸ್ರಮರಣೆಯಲ್ಲಿ ಬಾಲ ಕಲಾವಿದರಿಗೆ ವಿಎಸ್‌ಎಸ್ ತಾಲ್ಲೂಕಾಧ್ಯಕ್ಚ ಬಸವರಾಜ ಬಾಗೇವಾಡಿ ನೇತೃತ್ವದಲ್ಲಿ ವಿಶೇಷ ಸನ್ಮಾನ 

ಕಲಬುರಗಿ: ಜೇವರ್ಗಿ ಪಟ್ಟಣದ ಹಂಸವಾಹಿನಿ ಸಂಗೀತ ವಿದ್ಯಾಲಯ, ಹಾಗೂ ಎಂಜೆ ಡಾನ್ಸ್ ಅಕಾಡೆಮಿ, ಪ್ರೊಡಕ್ಷನ್ ಸಂಸ್ಥೆಯ ಕಾರ್ಯಾಲಯದಲ್ಲಿ ಕರ್ನಾಟಕ ರತ್ನ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ 16ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಬಾಲ ಕಲಾವಿದರಿಗೆ ಡಾ.ವಿಷ್ಣು ಸೇನಾ ಸಮೀತಿ ತಾಲೂಕ ಅಧ್ಯಕ್ಷರಾದ ಬಸವರಾಜ್ ಬಾಗೇವಾಡಿ ರವರ ನೇತೃತ್ವದಲ್ಲಿ ವಿಶೇಷ ಸನ್ಮಾನಿಸಲಾಯಿತು. 

ಪೋಟೋ ಪುಜ್ಯ ನೆರವೇರಿಸಿ ಬಸವರಾಜ ಬಾಗೇವಾಡಿ ಅವರು ಡಾ. ವಿಷ್ಣುವರ್ಧನ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಸರ್ಕಾರಕ್ಕೆ ಅಭಿನಂದಿಸಿ, ರಾಜ್ಯ ಸರಕಾರ ವಿಷ್ಣು ಸರ್ ರವರಿಗೆ ನೀಡುವ ಕರ್ನಾಟಕ ರತ್ನ ಸಮಾರಂಭ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಭವ್ಯವಾದ ಕಾರ್ಯಕ್ರಮ ನಡೆಸಬೇಕು ಆ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದರು, ಸಾಹಿತ್ಯಿಗಳು, ಪಕದ ರಾಜ್ಯದ ಗಣ್ಯಮಾನ್ಯರಿಗೆ ಆಹ್ವಾನಿಸಬೇಕು, ವಿಷ್ಣುವರ್ಧನ್ ರವರ ಪುಣ್ಯ ಭೂಮಿ ಜಾಗದ ವಿಷಯದಲ್ಲಿ ರಾಜ್ಯ ಸರಕಾರ ಮಧ್ಯಸ್ತಿಕೆ ವಹಿಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸಬೇಕೆಂದು ಮನವಿ ಮಾಡಿದರು, ಹಾಗೆ ಕೇಂದ್ರ ಸರಕಾರವು ಕೂಡ ಡಾ. ವಿಷ್ಣುವರ್ಧನ್ ರವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು. ಇದೆ ಸಂಧರ್ಭದಲ್ಲಿ ಪ್ರಸ್ತವಿಕವಾಗಿ ಮಾತನಾಡಿದ ಅನಿಲ್ ಪವಾರ್ ಡಾ. ವಿಷ್ಣುವರ್ಧನ್ ರವರ ಆದರ್ಶ, ನಡೆ ನುಡಿಗಳು ಪಾಲಿಸಿ ಮುಂಬರುವ ದಿನಗಳಲ್ಲಿ ಬಾಲ ಕಲಾವಿದರು ಮತ್ತು ಪಾಲಕರು ತಮ್ಮ ಮಕ್ಕಳಿಗೆ ವಿಷ್ಣು ಸರ್ ರವರ ಜೀವವನ್ನು ಅಳವಡಿಸಲು ಹೇಳಿದರು, ಗಿರೀಶ್ ತುಂಬಗಿ ರವರು ಯಜಮಾನ ಚಿತ್ರದಿಂದ ಹಲವಾರು ಕುಟುಂಬಗಳು ಒಂದಾಗಿವೆ ಎಂದು ಜೀವಂತ ಉದಾಹರಣೆ ಆಗಿವೆ ಎಂದರು.

ಈ ಸಂಧರ್ಭದಲ್ಲಿ ಕರ್ನಾಟಕ ಕಲಾ ಸಂಶೋಧನ ಸಂಸ್ಥೆಯ ಡಿಕೆಡಿ 3ನೇ ರೌಂಡ್ ಗಿಚ್ಚ್ ಗಿಲಿಗಿಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲ ಕಲಾವಿದ ವಿದ್ಯಾರ್ಥಿಗಳಾದ, ಅಕ್ಷರಾ ದೊಡ್ಡಪ್ಪಗೌಡ ಮಾಲಿಪಾಟೀಲ್, ಅನುಶ್ರೀ ಅಖಂಡಪ್ಪ ಶಿವಾಣ್ಣಿ, ಅಕ್ಷರಾ ಸೂರ್ಯಕಾಂತ್ ರಾಠೋಡ್ ಮತ್ತು ಹಂಸವಾಹಿನಿ ಸಂಗೀತ ಅಕಾಡೆಮಿ ಜೇವರ್ಗಿ ವಿದ್ಯಾಲಯದ ವಿದ್ಯಾರ್ಥಿಗಳಾದ ಗುರುರಾಜ್, ಲಕ್ಷ್ಮೀ, ಸಂಸ್ಕೃತಿ, ಸಂಜೀವಿನಿ, ಹಾಗೂ ಕಲಬುರಗಿ ವಿಶ್ವ ವಿದ್ಯಾಲಯ ಮಟ್ಟದಲ್ಲಿ ಹಿಂದೂಸ್ತಾನಿ ಸಂಗೀತ ದಲ್ಲಿ ಪ್ರಥಮ ಬಹುಮಾನ ಪಡೆದ ಭುವನಕುಮಾರ್ ಅವರಿಗೆ ಮತ್ತು ಎಂಜೆ ಡಾನ್ಸ್ ಅಕಾಡೆಮಿ ವಿದ್ಯಾರ್ಥಿಗಳಾದ ಭಾಗೇಶ್, ಮಹೇಶ್, ಅಧಿತಿ, ಛಾಯಾ ಚಿತ್ರ ಕಲಾವಿದರಾದ ಸಿದ್ದು ಮಾಸ್ಟರ್, ಚಿತ್ರ ಕಲಾವಿದರಾದ ಪ್ರಶಾಂತ್ ದೊಡ್ಡಮನಿ, ಪತ್ರಕರ್ತರಿಗೆ, ಕನ್ನಡ ಪರ, ರೈತ ಪರ, ಸಾಮಾಜಿಕ ಹೋರಾಟಗಾರ ಅಧ್ಯಕ್ಷರು ಗಳಿಗೆ, ಹಂಸವಾಹಿನಿ ಸಂಗೀತ ಅಕಾಡೆಮಿ ನಿರ್ದೇಶಕ ಸಿದ್ದಲಿಂಗ ಮಾಹೂರ, ಎಂಜೆ ಡಾನ್ಸ್ ಅಕಾಡೆಮಿ ನಿರ್ದೇಶಕರಾದ ಎಂಜೆ ಪ್ರಜ್ವಲ್, ಕರ್ನಾಟಕ ಕಲಾ ಸಂಶೋಧನ ನಿರ್ದೇಶಕ ಅನಿಲ್ ಪವಾರ ರವರಿಗೆ ಸನ್ಮಾನಿಸಿ ಗೌರವಿಸಿ, ಬಾಲ ಕಲಾವಿದರ ಮುಂದಿನ ಭವಿಷ್ಯ ಮತ್ತು ಅವರ ಕಲೆ ಸಂಸ್ಕೃತಿ ಇನ್ನೂ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಲೇಂದು ಡಾ.ವಿಷ್ಣು ಸೇನಾ ಸಮಿತಿಯಿಂದ ಶುಭ ಹಾರೈಸಿತು.

ಈ ಕಾರ್ಯಕ್ರಮದಲ್ಲಿ ಸಿದ್ದು ಪೂಜಾರಿ, ಮರೆಪ್ಪ ಬೇಗಾರ್, ಸುರೇಶ ಹಿರೇಮಠ,ಮಲ್ಲಪ್ಪ ನೆಲೋಗಿ, ಹರೀಶ್ ಬಾರಿಗಿಡ,ಭುವನ್ ಕುಮಾರ್, ಮರೆಪ್ಪಾ ಬಿಲ್ಲರ್, ದರ್ಶನ್, ಶರಣು, ರವಿ ರಾಠೋಡ್, ಸಿದ್ದು ಮಾಸ್ಟರ್, ಪ್ರಶಾಂತ್ ದೊಡಮನಿ,ಗುರುರಾಜ್, ಲಕ್ಷ್ಮೀ, ಭಾಗೇಶ್, ಚಿಂಟು, ಮಹೇಶ್, ಅದಿತಿ ಹಾಗೂ ಡಾ. ವಿಷ್ಣುವರ್ಧನ್ ರವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು

.