ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ

ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ

ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಸನ್ಮಾನ : ದೀಪಕನಾಗ ಪುಣ್ಯಶೆಟ್ಟಿ

100 ರಷ್ಟು ಫಲಿತಾಂಶದ ಗುರಿ ಸಾಧಿಸಿದ ಸರಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಾಮಾಗ್ರಿಗಳ ಖರಿದಿಗೆ 51 ಸಾವಿರ ಧನ ಸಹಾಯ

ಚಿಂಚೋಳಿ : ಕನ್ನಡ ಶಾಲೆಗಳು ಉಳಿವಿಗೆ ಮತ್ತು ಬೆಳವಣಿಗೆ ಸಾಧಿಸಲು ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಮತ್ತು ಎಸ್ .ಎಸ್.ಎಲ್. ಸಿ ಫಲಿತಾಂಶದಲ್ಲಿ ಪ್ರಗತಿ ತರಲು ತಾಲೂಕಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ, ಸನ್ಮಾನಿಸುವ ಗುರಿ ಹೊಂದಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಅವರು ತಿಳಿಸಿದರು.

ಐನೋಳಿ ಗ್ರಾಮದ ತಮ್ಮ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಭಾಗದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಪುಣ್ಯಶೆಟ್ಟಿ ಕುಟುಂಬ ಸಹಾಯ ಹಸ್ತ ನೀಡುತ್ತಲೇ ಬಂದಿದೆ. ಅದನ್ನು ಹಾಗೇ ಉಳಿಸಿಕೊಂಡು ಮುಂದುವರೆಸಿಕೊಂಡು ಬರಲಾಗುತ್ತಿದೆ. ಜಿಲ್ಲಾ ಪಂಚಾಯತ ಅಧ್ಯಕ್ಷ ಆಡಳಿತಾವಧಿಯಲ್ಲಿ ಅನೇಕ ಸಾರ್ವಜನಿಕ ಜನ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯ ನಡೆಸಿದ್ದೆನೆ. ಮಹಾಮಾರಿ ಕರೋನಾ ಸಂದರ್ಭದಲ್ಲಿ ಬಡವರಿಗೆ 5 ಸಾವಿರ ಆಹಾರ ಕಿಟ್ ವಿತರಿಸಲಾಗಿದ್ದು, ತಂದೆ ದಿ.ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಅವರು ಐನೋಳಿ ಗ್ರಾಮದ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಸರಕಾರಿ ಶಾಲೆಗೆ ಉಚಿತವಾಗಿ ಜಮೀನು ನೀಡಿ, ಗ್ರಾಮದಲ್ಲಿ ಪ್ರೌಢ ಶಿಕ್ಷಣ ಪ್ರಾರಂಭಿಸಿ ಶೈಶಿಕ್ಷಣಿಕ ಬೂನಾದಿ ಹಾಕಿ ಕೊಟ್ಟಿದ್ದಾರೆ. ತಾಲೂಕಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ಸಾಧಿಸಲು ಮತ್ತು ಸ್ಪರ್ಧಾತ್ಮಕ ಮನೋಭಾವನೆ ವೃದ್ದಿಸಿಕೊಳ್ಳುವ ಉದ್ದೇಶದಿಂದ ಪ್ರಸಕ್ತ ಸಾಲಿನಿಂದ ಪ್ರತಿ ವರ್ಷ ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಯ ಮಕ್ಕಳಿಗೆ ಪ್ರಥಮ, ದ್ವೀತಿಯ, ತೃತೀಯ, ಚತುರ್ಥ ಹಾಗೂ ಪಂಚಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗುದು ಪುರಸ್ಕಾರ ಹಾಗೂ ಸನ್ಮಾನ ಮಾಡುವ ಗುರಿ ಟ್ರಸ್ಟ್ ಹೊಂದಿದೆ. ಇನ್ನೂ ಶೇ. 100ಕ್ಕೆ 100ರಷ್ಟು ಫಲಿತಾಂಶ ಗುರಿ ಸಾಧಿಸಿರುವ ಶಾಲೆಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮತ್ತು ಅಗತ್ಯವಾಗಿ ಬೇಕಾಗಿರುವ ಶೈಕ್ಷಣಿಕ ಸಾಮಾಗ್ರಿಗಳು ಒದಿಗಿಸಲು ನಗದು ರು 51 ಸಾವಿರ ನೀಡುವುದರ ಜೊತೆಗೆ ಶಾಲೆಯ ವಿಷಯವಾರು ಬೋಧಿಸಿರುವ ಶಿಕ್ಷಕರಿಗೆ ಮತ್ತು ಮುಖ್ಯಗುರುಗಳಿಗೆ ಪುರಸ್ಕಾರ ಟ್ರಸ್ಟ್ ನೀಡಲಿದೆ ಎಂದರು.

ಉತ್ತಮ ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಸನ್ಮಾನ 

ಪ್ರಥಮವಾಗಿ 25,000/-, ದ್ವಿತೀಯ 11,000/-, ತೃತೀಯ, ಚತುರ್ಥ ಹಾಗೂ ಪಂಚಮ ಪಡೆದ ವಿದ್ಯಾರ್ಥಿಗಳಿಗೆ 5000/- ನಗದು ಪುರಸ್ಕಾರ, ಸನ್ಮಾನದೊಂದಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ಶಶಿಧರ ನಾಗಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನೀಡಲಿದ್ದು, ಕ್ಷೇತ್ರದ ಶಿಕ್ಷಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ದೀಪಕನಾಗ ಶಶಿಧರ ಪುಣ್ಯಶೆಟ್ಟಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಲ್ಲಾವುದ್ದಿನ್ ಅನ್ಸಾರಿ, ವಿಜಯಕುಮಾರ ರೊಟ್ಟಿ, ಇಬ್ರಾಹೀಮ್ ಸಾಬ್ ದೇಗಲ್ಮಡಿ, ದಿನೇಶ ದುಗ್ಗಣಿ, ಶಿವಕುಮಾರ ಮುಲಗಿ, ಶರಣು ಪೊಪ್ಪ, ಸೈಯದ್ ಆಶಿಫ್ ಅವರು ಉಪಸ್ಥಿತರಿದು.