ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಣೆ
ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಣೆ
ಕಮಲನಗರ : ಹೊಸ ವರ್ಷ ಆರಂಭದಲ್ಲಿ ಬರುವ ಹಬ್ಬ ಇದಾಗಿದ್ದು ಭಾರತದ ಎಲ್ಲಾ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಮಹತ್ವ ಒಂದೇ ಆಗಿದ್ದರು ಹಲವೆಡೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ ಎಂದು ಶಿವಣಕರ ನುಡಿದರು.
ತಾಲೂಕಿನ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ಹಮ್ಮಿಕೊಳಲಾಯಿತು.
ಕ್ರಾಯಕ್ರಮದಲ್ಲಿ ಐದು ಜನ ದಂಪತಿಗಳಿಗೆ ಆಹ್ವಾನಿಸಲಾಗಿತ್ತು ಮತ್ತು ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜ್ರಂಬಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದ ಅತಿಥಿಗಳಾದ ಶಿವಕುಮಾರ ಶಿವಣಕರ ಮಕ್ಕಳನ್ನು ಉದ್ದೇಶಿಸಿ ಈ ಭಾಗದಲ್ಲಿ ಮಕರ ಸಂಕ್ರಾಂತಿಯನ್ನು ಈ ರೀತಿ ಆಚರಿಸುವುದು ಡಾ|| ಚನ್ನಬಸವ ಪಟ್ಟದೇವರ ಗುರಿಯನ್ನು ಕಾರ್ಯಗತಗೊಳಿಸುವಂತ ಬುನಾದಿಯನ್ನು ಚನ್ನಬಸವ ಘಾಳೆರವರು ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಪರಮ ಪೂಜ್ಯರ ಆಶಯದಂತೆ ಮಕ್ಕಳಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ನಾವು ಬದುಕಬೇಕಾಗಿದೆ ಎಂದು ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಚನ್ನಬಸವ ಘಾಳೆ ಕಾರ್ಯಕರ್ಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಮೀರಾ ಮಹಾಜನ ಮತ್ತು ಶ್ರೀ ಲಿಂಗಾನಂದ ಮಹಾಜನ ದಂಪತಿಗಳು ನೆರವೇರಿಸಿ ಕೊಟ್ಟರು.
ಕಾರ್ಯಕ್ರಮದಲ್ಲಿ ಶ್ರೀಮತಿ ನೀಲಮಾ ವಡ್ಡೆ ಮತ್ತು ಶ್ರೀ ಶಿವಾನಂದ ವಡ್ಡೆ ರವರು ಬಸವಣ್ಣವರ ಭಾವಚಿತ್ರಕ್ಕೆ ಪೂಜೆಯನ್ನು ಮಾಡಿದರು.
ಅದೇ ರೀತಿ ಬೋಗಿ ಪ್ರಜ್ವಲಿಸುವುದನ್ನು ಶ್ರೀಮತಿ ಉಮಾದೇವಿ ಶಿವಣಕರ ಮತ್ತು ಶ್ರೀ ಶಿವಕುಮಾರ ಶಿವಣಕರ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಜೈಶ್ರೀ ತೆಲಂಗೆ ಮತ್ತು ಶ್ರೀ ಬಾಲಾಜಿ ತೆಲಂಗೆ ಹಾಗೂ ಶ್ರೀಮತಿ ಡಾ|| ಆರತಿ ಟೊಣ್ಣೆ ಮತ್ತು ಶ್ರೀ ಡಾ|| ಕೈಲಾಸ ಟೊಣ್ಣೆ ಭಾಗ ವಹಿಸಿದ್ದರು
ಶಾಲೆಯ ಪ್ರಾಂಶುಪಾಲರಾದ ಶ್ರೀಧರ ರಡ್ಡಿರವರು ಸ್ವಾಗತ ಮಾಡಿದರು.
ಕಾರ್ಯಕ್ರಮದಲ್ಲಿ ನಿರೂಪಣೆ ಶಾಲೆಯ ಮಕ್ಕಳಾದ ಮೇಘನಾ ಸುತಾರ ಮತ್ತು ವಿಗ್ನೇಶ ಹಾಗೂ ಶಾಲೆಯ ಶಿಕ್ಷಕಿಯಾದ ಚಂದ್ರಕಲಾ, ರುಹಿನಾರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಮಾಕ್ಷಿ ಸುತಾರ, ಸುಗುಣಸುಂದರಿ, ರೇಖಾ ಕೊಡ್ಡಿಕರ, ಸೃಷ್ಟಿ, ದೀಪಿಕಾ, ಸಂದ್ಯಾರಾಣಿ, ಯಸ್ತರ್‌ರಾಣಿ, ಸೌಂದರ್ಯ, ಶೇಖರ, ನಾಮದೇವ, ಶರಣಬಸಪ, ಗ್ರೆಸ್, ಜೈಶ್ರೀ ಕಾರ್ಯಕ್ರಮದಲ್ಲಿ ಉಪಸ್ಥಿತರಿದರು.