ಕಲಬುರಗಿಯಲ್ಲಿ ಸಂಚಾರ ನಿಯಂತ್ರಣ: ಬಂಡಿ ವ್ಯಾಪಾರಿಗಳಿಗೆ ಎಚ್ಚರಿಕೆ, ಸಾರ್ವಜನಿಕರಲ್ಲಿ ಜಾಗೃತಿ

ಕಲಬುರಗಿ: ಎಸಿಪಿ ಸುಧಾ ಆದಿ ಸಂಚಾರ ಉಪ ವಿಭಾಗ ಹಾಗೂ ಪಿಐ ಶಕೀಲ್ ಅಂಗಡಿ ಸಂಚಾರ ಪೊಲೀಸ್ ಠಾಣೆ 1 ರವರ ನೇತೃತ್ವದಲ್ಲಿ ರೈಲ್ವೆ ಸ್ಟೇಷನ್ ಹತ್ತಿರ ರಸ್ತೆ ಮೇಲೆ ನಿಂತು ವ್ಯಾಪಾರ ಮಾಡುತ್ತಿರುವ ಬಂಡಿ ವ್ಯಾಪಾರಿಗಳಿಗೆ ರಸ್ತೆಯ ಮೇಲೆ ನಿಂತು ಸಂಚಾರಕ್ಕೆ ಅಡೆತಡೆ ಉಂಟು ಮಾಡದಂತೆ ಸೂಚಿಸಿದರು.ಸಂಚಾರಿ ಠಾಣೆ ಎಎಸ್‌ಐ ನಿಂಗಪ್ಪ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಮತ್ತು ರೈಲ್ವೆ ಸ್ಟೇಷನ್ ದಿಂದ ಎಸ್ ವಿ ಪಿ ವೃತ್ತದವರೆಗೆ ಸಾರ್ವಜನಿಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಸಮ ಮತ್ತು ಬೆಸ ಸಂಖ್ಯೆಯ ಪಾಕಿರ್‌ಂಗ್ ಕುರಿತು ಜಾಗೃತಿ ಮೂಡಿಸಲಾಯಿತು.