ಮೋದಿ ಸರ್ಕಾರದ ಯೋಜನೆಗಳು ಸಮಾಜಮುಖಿಯಾಗಿವೆ.
ಮೋದಿ ಸರ್ಕಾರದ ಯೋಜನೆಗಳು ಸಮಾಜಮುಖಿಯಾಗಿವೆ.
ಶಹಾಪುರ : ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಆಡಳಿತದ ಕಾರ್ಯವೈಕರಿ ಹಾಗೂ ವಿವಿಧ ಯೋಜನೆಗಳು ಸಮಾಜಮುಖಿಯಾಗಿರುವುದರ ಜೊತೆಗೆ ಪಾರದರ್ಶಕತೆಯಿಂದ ಕೂಡಿರುತ್ತವೆ ಎಂದು ಭಾರತೀಯ ಜನತಾ ಪಕ್ಷದ ಯಾದಗಿರಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಹೇಳಿದರು.
ತಾಲೂಕಿನ ಶಿರವಾಳ ಗ್ರಾಮದಲ್ಲಿ ಮಹಾಶಕ್ತಿ ಕೇಂದ್ರದ ಭವ್ಯ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ 127ನೇ ಮನ್ ಕೀ ಬಾತ್ ಕಾರ್ಯಕ್ರಮ ನಂತರ ಆತ್ಮ ನಿರ್ಬರ ಭಾರತ ಕುರಿತು ಮಾಹಿತಿ ನೀಡುತ್ತಾ ಮಾತನಾಡಿದರು.
ಬಿಜೆಪಿ ಯುವ ಮುಖಂಡ ತಿರುಪತಿ ಹತ್ತಿಕಟಗಿ ಮಾತನಾಡಿ ಸ್ವದೇಶಿ ವಸ್ತುಗಳ ಬಳಕೆ ಮಾಡುವುದರಿಂದ ಪೋಲಾಗುವ ತೆರಿಗೆ ಹಣ ಉಳಿಸುವುದರ ಜೊತೆಗೆ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಭಾಜಪ ಜಿಲ್ಲಾ ಉಪಾಧ್ಯಕ್ಷರಾದ ದೇವೇಂದ್ರಪ್ಪ ಕೋನೆರ,ರಂಗಣ್ಣ ಜಿರ್ಲೆ, ಹನುಮಂತ್ರಾಯ ಗುರಿಕಾರ, ವರದರಾಜ ಕುಲಕರ್ಣಿ,ಶರಣಗೌಡ ಅಣಬಿ,ರಾಘವೇಂದ್ರ ಕುಲಕರ್ಣಿ, ನಾಗಣ್ಣ ಚಿಂತಿ,ಬಸವರಾಜ ಮಾಡ್ನಾಳ,ಚನ್ನವೀರಯ್ಯ ಸ್ವಾಮಿ, ಮಹಾಂತೇಶ್ ಮುಡಬೋಳ, ಬಂದು ಪ್ಯಾಟಿ,ಸಾಯಿಬಣ್ಣ ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
