ಕೋರವಾರ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಅಧಿಕ ಮಾಸ ಆಚರಣೆ

ಕೋರವಾರ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಅಧಿಕ ಮಾಸ ಆಚರಣೆ

 ಕೋರವಾರ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಅಧಿಕ ಮಾಸ ಆಚರಣೆ

ಕಾಳಗಿ: ತಾಲ್ಲೂಕಿನ ಕೋರವಾರ ಕ್ಷೇತ್ರದ ಶ್ರೀ ಅಣವೀರಭದ್ರೇಶ್ವರ ದೇವಸ್ಥಾನದಲ್ಲಿ ಅಂಡಗಿ ಪ್ರತಿಷ್ಠಾನದ ವತಿಯಿಂದ ಅಧಿಕ ಮಾಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಧಿಕ ಮಾಸದಲ್ಲಿ ದಾನ ಮಾಡಿದರೆ ನೂರು ಪಟ್ಟು ಫಲ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆಯಿಂದ ೩೩ ವಿಶೇಷ ಭಕ್ತರಿಗೆ ಅಕ್ಕಿ, ಬೆಲ್ಲ, ತುಪ್ಪ ಹಾಗೂ ವಚನ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಕ್ಕಿಯಿಂದ ತಯಾರಿಸಿದ ಅನ್ನ, ಬೆಲ್ಲದಿಂದ ಮಾಡಿದ ಹೋಳಿಗೆ ಹಾಗೂ ತುಪ್ಪದ ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾದ ಪೂಜ್ಯ ಅಂಬರೀಷ ಹಿರೇಮಠ ಮಾತನಾಡಿ, ಸನಾತನ ಧರ್ಮದ ಪರಂಪರೆ, ಆಚರಣೆ ಮತ್ತು ದಾನದ ಮಹತ್ವವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಶರಣಗೌಡ ಕಿರಣಗಿ ಅವರು ಮುದ್ರಿಸಿದ ೧೦೮ ವಚನಗಳನ್ನೊಳಗೊಂಡ “ವಚನಾಮೃತ” ಪುಸ್ತಕವನ್ನು ೩೩ ಭಕ್ತರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಡಗಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಸಿದ್ರಾಮಪ್ಪ ಅಂಡಗಿ, ಅಧ್ಯಕ್ಷ ಶಿವರಾಜ ಅಂಡಗಿ, ರಾಜೇಶ್ವರಿ ಅಂಡಗಿ, ರೇಖಾ ಅಂಡಗಿ, ಶೃತಿ ಅಂಡಗಿ, ಗುಣವಂತಿ ಬಿರಾದಾರ, ಅವಿನಾಶ ಅಂಡಗಿ, ಶರಣಗೌಡ ಪಸಾರ ಕಲಗುರ್ತಿ, ಡಾ. ವಿವೇಕಾನಂದ ಬುಳ್ಳಾ, ಫಕೀರಯ್ಯ ಸ್ವಾಮಿ ಟೆಂಗಳಿ, ಬಸವರಾಜ ಘಂಟಿ, ಮಹಾರುದ್ರಪ್ಪ ಮುಗುಳನಾಗಾಂವ, ಅಣವೀರಯ್ಯ ಕಂಠಿ, ಮಹಾಂತೇಶ ಸ್ವಾಮಿ, ಪ್ರಭು ವಾಲಿ, ಚನ್ನಯ್ಯ ಮಠಪತಿ, ಸಿದ್ದು ಸಣ್ಣೂರ, ಅಯ್ಯಣ್ಣಗೌಡ ಜೇವರ್ಗಿ, ನೀಲಕಂಠಯ್ಯ ಹಿರೇಮಠ, ಶರಣು ಸರಡಗಿ, ಈರಣ್ಣ ಕೂಡಲಹಂಗರಗಿ, ಶಿವಕುಮಾರ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.