ಭೀಮ್ ಶಕ್ತಿ ಸಂಘಟನೆಯ ಕಲಬುರಗಿ ನಗರಾಧ್ಯಕ್ಷರಾಗಿ ಎಂ.ಡಿ. ಇಸಾಮೋದ್ದಿನ್ ನೇಮಕ
ಭೀಮ್ ಶಕ್ತಿ ಸಂಘಟನೆಯ ಕಲಬುರಗಿ ನಗರಾಧ್ಯಕ್ಷರಾಗಿ ಎಂ.ಡಿ. ಇಸಾಮೋದ್ದಿನ್ ನೇಮಕ
ಕಲಬುರಗಿ: ಭೀಮ್ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ಅಂಬಾಜಿ ಪಿ. ಮೇಟಿ ಅವರ ಆದೇಶದ ಮೇರೆಗೆ, ಕಲಬುರಗಿ ನಗರದ ವಿದ್ಯಾನಗರ ನಿವಾಸಿ ಎಂ.ಡಿ. ಇಸಾಮೋದ್ದಿನ್ ಅವರನ್ನು ಭೀಮ್ ಶಕ್ತಿ ಸಂಘಟನೆಯ ಕಲಬುರಗಿ ನಗರಾಧ್ಯಕ್ಷರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಈ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂ. ಮುಡ್ಡಿ ನೇಮಕಾತಿ ಆದೇಶ ಪತ್ರ ಹೊರಡಿಸಿದ್ದು, ನಗರ ಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯಕ್ಕೆ ಮುಂದಾಗುವAತೆ ಸೂಚಿಸಿದ್ದಾರೆ. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಸಂಘಟಿಸಿ, ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಮಾಜದ ಹಿತದೃಷ್ಟಿಯಿಂದ ಪ್ರಾಮಾಣಿಕ ಹಾಗೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ.
ಇಸಾಮೋದ್ದಿನ್ ಅವರ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿ ಭೀಮ್ ಶಕ್ತಿ ಸಂಘಟನೆ ಮತ್ತಷ್ಟು ಸದೃಢವಾಗಿ ಬೆಳೆಯಲಿದ್ದು, ಸಮಾಜಸೇವೆಯ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸವನ್ನು ಸಂಘಟನೆಯ ರಾಜ್ಯ ನಾಯಕತ್ವ ವ್ಯಕ್ತಪಡಿಸಿದೆ.

