ಸಗರ ಚೌಡಿ ಕಟ್ಟೆಯ ಮೇಲ್ಚಾವಣಿ ಕುಸಿತ,ಆತಂಕದಲ್ಲಿ ಜನತೆ
ಸಗರ ಚೌಡಿ ಕಟ್ಟೆಯ ಮೇಲ್ಚಾವಣಿ ಕುಸಿತ,ಆತಂಕದಲ್ಲಿ ಜನತೆ
ಶಹಪುರ : ತಾಲೂಕಿನ ಸಗರ ಗ್ರಾಮದ ಸಾಂಸ್ಕೃತಿಕ,ಧಾರ್ಮಿಕ ಮತ್ತು ಸಾಮಾಜಿಕ ಮಹತ್ವವನ್ನು ಹೊಂದಿರುವ ಚೌಡಿಕಟ್ಟೆಯ ಮೇಲ್ಚಾವಣಿ ದಿನದಿಂದ ದಿನಕ್ಕೆ ಕುಸಿದು ಬೀಳುತ್ತಿದ್ದು ಗ್ರಾಮದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಹಬ್ಬ ಹರಿದಿನಗಳು ಹಾಗೂ ಜಾತ್ರೆಗಳ ಸಮಯದಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡುವ ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸುವ ಪ್ರಮುಖ ತಾಣ ಇದಾಗಿದ್ದು,ಸಾರ್ವಜನಿಕರು ಆತಂಕ ಪಡುವಂತ ಸ್ಥಿತಿ ಎದುರಾಗಿದೆ. ಇಲ್ಲಿ ದಿನಾಲು ವಯೋವೃದ್ಧರು ಸಾರ್ವಜನಿಕರು ಕುಳಿತುಕೊಂಡು ವಿಶ್ರಾಂತಿ ಪಡೆಯುವ ಸ್ಥಳವಾಗಿದೆ.
ಈ ಕಟ್ಟಡ ಇತ್ತೀಚಿಗೆ ನಿರ್ಮಿಸಲಾಗಿದ್ದರು,ಕಳಪೆ ಮಟ್ಟದಿಂದ ಕೂಡಿದೆ, ಮಳೆಗಾಲದಲ್ಲಿ ಕಟ್ಟಡದ ಮೇಲೆ ಮಳೆಯ ನೀರು ಸಂಗ್ರಹವಾಗುವುದರಿಂದ,ಕೆಳಗಡೆ ತಂಪು ಹೀರಿ ಮೇಲ್ಚಾವಣಿ ಕುಸಿಯುತ್ತಿದೆ.
ಅನಾಹುತ ಸಂಭವಿಸುವುದಕ್ಕಿಂತ ಮುಂಚೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು ಅಲ್ಲದೆ ಈ ಕಟ್ಟಡವನ್ನು ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಯಾವುದೇ ರೀತಿಯ ಪ್ರಾಣ ಹಾನಿ ಹಾಗೂ ಅನಾಹುತಗಳು ಸಂಭವಿಸಿದಲ್ಲಿ ನೇರವಾಗಿ ಸಂಬಂಧ ಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸಗರ ಗ್ರಾಮದ ಸಾರ್ವಜನಿಕರು ಆಗ್ರಹಿಸಿದ್ದಾರೆ.
