ರಾಜಾಪುರ ಕೊಳಚೆ ಪ್ರದೇಶದಲ್ಲಿ 184 ಜನರಿಗೆ ಉಚಿತ ಕನ್ನಡಕ ವಿತರಣೆ
ರಾಜಾಪುರ ಕೊಳಚೆ ಪ್ರದೇಶದಲ್ಲಿ 184 ಜನರಿಗೆ ಉಚಿತ ಕನ್ನಡಕ ವಿತರಣೆ
ಕಲಬುರಗಿ : ನಗರದ ರಾಜಾಪುರ ಕೊಳಚೆ ಪ್ರದೇಶದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಕಲಬುರಗಿ ಹಾಗೂ ಸ್ಲಂ ಜನರ ಸಂಘಟನೆ–ಕರ್ನಾಟಕ, ಕಲಬುರಗಿ ಜಿಲ್ಲಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬಡ ಜನರಿಗಾಗಿ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳಾದ ಡಾ. ರವಿಕಾಂತಿ ಎಸ್. ಕ್ಯಾತನಾಳ ಅವರು ಉಚಿತ ಕನ್ನಡಕಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಣ್ಣಿನ ಆರೋಗ್ಯದ ಬಗ್ಗೆ ಸಾರ್ವಜನಿಕರು ಹೆಚ್ಚಿನ ಕಾಳಜಿ ವಹಿಸಬೇಕು ಹಾಗೂ ಅಗತ್ಯವಿರುವವರು ಇಂತಹ ಆರೋಗ್ಯ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಲಂ ಜನರ ಸಂಘಟನೆ–ಕರ್ನಾಟಕ, ಕಲಬುರಗಿ ಜಿಲ್ಲಾ ಸಮಿತಿಯ ಮಹಿಳಾ ಮುಖಂಡರಾದ ಶ್ರೀಮತಿ ಜಯಶ್ರೀ ಹನೂರ್, ಬ್ರಹ್ಮಾನಂದ ಮಿಂಚಾ, ಅಲ್ಲಮಪ್ರಭು ನಿಂಬರ್ಗಾ. ಕರಣಕುಮಾರ್ ಬಂದರವಾಡ ಶಿವಕುಮಾರ್ ಚಿಂಚೋಳಿ ವಿಕಾಸ್ ಸಾವರೆೇಕರ್ ಮತ್ತು ಪ್ರಭಾಕರ್ ನಿಂಬರ್ಗಾ ರಾಜಾಪುರ ಬಡಾವಣೆಯ ಸಾರ್ವಜನಿಕರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 184 ಫಲಾನುಭವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು.

