ಗುರುವಂದನೆ ನಾಳೆ
ಗುರುವಂದನೆ ನಾಳೆ
ಕಲ್ಯಾಣ ಕಹಳೆ ನರೇಗಲ್ಲ: ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನ ಜೀವನದ ಅಮೂಲ್ಯವಾದ ಕ್ಷಣಗಳನ್ನು ಮಾರ್ಗದರ್ಶನ ಮತ್ತು ಅಕ್ಷರ ಮುಖಾಂತರ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಜೂನ್ 14ರಂದು ಎಂಸಿಎಸ್ ಶಾಲಾ ಬಯಲಿನಲ್ಲಿ ಗುರುವಂದನೆ ಹಮ್ಮಿಕೊಳ್ಳಲಾಗಿದೆ ಎಂದು ವಿರೂಪಾಕ್ಷಪ್ಪ ಸಂಗನಾಳ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ, 1988-89ರಿಂದ 1995-96 ರವರೆಗೆ ಎಂಸಿಎಸ್ ಶಾಲೆಯಲ್ಲಿ ಅಧ್ಯಯನ ಮಾಡಿದ ಎಲ್ಲ ವಿದ್ಯಾರ್ಥಿಗಳೂ ಸೇರಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು. ಶಿವಕುಮಾರ ಮುಳಗುಂದ ಮಾತನಾಡಿದರು. ಗುರುವಂದನೆ ಸ್ವೀಕರಿಸಲಿರುವ ನಿವೃತ್ತ ಶಿಕ್ಷಕ ಎಂ. ಎಸ್. ಧಡೇಸೂರಮಠ ಮಾತನಾಡಿ, ಅಂದಿನ ನಮ್ಮ ಸಿಬ್ಬಂದಿಯಲ್ಲಿ ಸಮರ್ಪಣಾ ಮನೋಭಾವದ ಸೇವೆ ಇತ್ತು. ಈ ಸೇವೆಯನ್ನು ಗುರುತಿಸಿದ ಅಂದಿನ ವಿದ್ಯಾರ್ಥಿಗಳು, ಇಂದಿನ ಸಮಾಜದ ಗಣ್ಯರು ಸೇರಿ ಸಲ್ಲಿಸುತ್ತಿರುವ ಗುರುವಂದನೆಯನ್ನು ಸ್ವೀಕರಿಸಲು ಸಂತೋಷವಾಗುತ್ತಿದೆ ಎಂದರು. ಚಂದ್ರಾಮ ಗ್ರಾಮಪುರೋಹಿತ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಡಿಡಿಪಿಐ ಆರ್. ಎಸ್. ಬುರುಡಿ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎ. ಫಣಿಬಂದ ಅತಿಥಿಗಳಾಗಿದ್ದು, ನಿವೃತ್ತ ಡಿಡಿಪಿಐ ಸಂಜೀವ ಬಿಂಗೇರಿ, ನಿವೃತ್ತ ಶಿಕ್ಷಕರಾದ ವೀರಪ್ಪ ಸಂಗನಾಳ, ಕುಸುಮವ್ವ ಭೀಮನಗೌಡ್ರ, ಶರಣಬಸಪ್ಪ ಬೂದಿಹಾಳ, ಅಂದಾನಪ್ಪ ಅಣಗೌಡ್ರ, ಶಿಕ್ಷಕಿ ಎಂ.ಪಿ. ಬಸರೀಗಿಡದ, ನಿಂಗನಗೌಡ ಚಿಕ್ಕನಗೌಡ್ರ, ಬಸವನಗೌಡ ಗೌಡರ, ಸಿ.ಬಿ. ಹಿರೇಮಠ, ಗೀತಾ ಗುಜ್ಜಲ, ಮಲ್ಲವ್ವ ಸಕ್ರೋಜಿ ಗುರುಗಳು ಗುರುವಂದನೆ ಸ್ವೀಕರಿಸಲಿದ್ದಾರೆ. ಮೈಲಾರಪ್ಪ ಗೋಡಿ, ಶಿವಾನಂದ ಪದ್ಮಸಾಲಿ, 'ಉಮೇಶ ಪಾದಗಟ್ಟಿ, ಶಿವಪ್ಪ ತಳವಾರ, ಪ್ರಸನ್ನ ಗಚ್ಚಿನಮಠ, ಬಸವರಾಜ ಕುಷ್ಟಗಿ, ಮೆಹಬೂಬಸಾಬ ಮತ್ತಿತರರಿದ್ದರು.
*ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*
