ಎಸ್‌ಐಆರ್ ಅಭಿಯಾನ ಯಶಸ್ವಿಗೊಳಿಸಿ: ಶಾಸಕ ಪ್ರಭು ಚವ್ಹಾಣ ಕರೆ
ಎಸ್‌ಐಆರ್ ಅಭಿಯಾನ ಯಶಸ್ವಿಗೊಳಿಸಿ: ಶಾಸಕ ಪ್ರಭು ಚವ್ಹಾಣ ಕರೆ
ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ) ಅಭಿಯಾನವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಸಹಕರಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಔರಾದ(ಬಿ) ಮಂಡಲದ ವತಿಯಿಂದ ಜೂನ್ 12ರಂದು ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಎಸ್‌ಐಆರ್ ಕೇವಲ ಸಾಮಾನ್ಯ ಯೋಜನೆಯಲ್ಲ. ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಅಭಿಯಾನವಾಗಿದೆ. ಮತದಾರರ ಪಟ್ಟಿಯ ಶುದ್ದೀಕರಣ, ಅರ್ಹ ಮತದಾರರ ಹೆಸರು ಸೇರ್ಪಡೆ, ನಕಲಿ ಹಾಗೂ ಅನರ್ಹ ಹೆಸರುಗಳ ತೆರವು ಮತ್ತು ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ವಿಶ್ವಾಸಾರ್ಹವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಶಕ್ತ ಭಾರತ ನಿರ್ಮಾಣದ ಸಂಕಲ್ಪದೊAದಿಗೆ ಸೇವೆ ಸಲ್ಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ರಾಜಕೀಯ ಇತಹಾಸದಲ್ಲಿ ಅತಿ ಹೆಚ್ಚು ಅವಧಿಯ ಪ್ರಧಾನಿಯಾದ ದಾಖಲೆಯನ್ನು ಮುರಿದಿದ್ದಾರೆ. ಅವರ 12 ವರ್ಷಗಳ ಸೇವೆಯಲ್ಲಿ ಭಾರತ ಸಾಕಷ್ಟು ಸುಧಾರಣೆ ಕಂಡಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಉಗ್ರರನ್ನು ಮಟ್ಟ ಹಾಕಿದ್ದಾರೆ. ಪದೇ ಪದೇ ಜಗಳಕ್ಕೆ ಕಾಲು ಕೆರೆದುಕೊಂಡು ಬರುತ್ತಿದ್ದ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟೆçöÊಕ್ ಮೂಲಕ ಪಾಠ ಕಲಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಸಂಬAಧಿಸಿದAತೆ ಆರ್ಟಿಕಲ್ 370 ರದ್ದುಗೊಳಿಸಿ ಐತಿಹಾಸಿಕ ಕೆಲಸ ಮಾಡಿದ್ದಾರೆ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಜನಧನ್ ಯೋಜನೆಯಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದೇಶ ಕಂಡ ಅಪರೂಪದ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ ಎಂದರು.
ಪ್ರಜಾಪ್ರಭುತ್ವವನ್ನು ಬಲಪಡಿಸಬೇಕೆಂಬ ಉದ್ದೇಶದಿಂದ ಮತದಾರರ ಪಟ್ಟಿಯ ಶುದ್ದೀಕರಣಕ್ಕೆ ಮುಂದಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದ್ದು, ತಮ್ಮ ಗ್ರಾಮದಲ್ಲಿ ಮತದಾರರ ಪಟ್ಟಿಯಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಲು ಅವಕಾಶ ನೀಡಿದ್ದಾರೆ. ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಮಾತನಾಡಿ, ಎಸ್‌ಐಆರ್ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಗ್ರಾಮಸ್ಥರಲ್ಲಿ ಯಾರಾದರೂ ತೀರಿಕೊಂಡರೆ ಅನೇಕ ವರ್ಷಗಳ ವರೆಗೆ ಅವರ ಹೆಸರು ರದ್ದುಪಡಿಸುವುದೇ ಇಲ್ಲ. ಅನೇಕರ ಹೆಸರುಗಳು ತಪ್ಪು ತಪ್ಪಾಗಿ ಮುದ್ರಣಗೊಂಡಿರುತ್ತವೆ. ಕೆಲವರು ತಮ್ಮ ವಾಸಸ್ಥಳವನ್ನು ಬದಲಾಯಿಸಿರುತ್ತಾರೆ. ಇವುಗಳನ್ನು ಸರಿಪಡಿಸಲು ಪ್ರಾಧಾನಿಯವರು ಉತ್ತಮ ಅವಕಾಶ ನೀಡಿದ್ದಾರೆ ಎಂದರು. ಮುಖಂಡರಾದ ಬಾಬುರಾವ ಕಾರಬಾರಿ, ಸಂಜಯ ನಿಷ್ಕಿನ್, ಶಿವರಾಜ ಗಂದಗೆ ಅವರು ಮಾತನಾಡಿ ಪಕ್ಷವನ್ನು ಸಂಘಟಿಸಲು ಕಾರ್ಯಕರ್ತರ ಪಾತ್ರದ ಬಗ್ಗೆ ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಅರಹಂತ ಸಾವಳೆ, ಸುಭಾಷ ಬಿರಾದಾರ, ರಾಜಶೇಖರ ನಾಗಮೂರ್ತಿ, ವಸಂತ ಬಿರಾದಾರ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಸುರೇಶ ಭೋಸ್ಲೆ, ಸತೀಷ ಪಾಟೀಲ, ಪ್ರವೀಣ್ ಕಾರಬಾರಿ, ಖಂಡೋಬಾ ಕಂಗಟೆ, ಪ್ರತೀಕ ಚವ್ಹಾಣ, ವಿಜಯಲಕ್ಷ್ಮಿ ಕೌಟಗೆ, ನಿಲೇಷ ರಕ್ಷಾಳೆ, ಬಸವರಾಜ ಪಾಟೀಲ, ರಮೇಶ ಉಪಾಸೆ, ಖಾಜಾಮಿಯ್ಯಾ, ಝಾಕೀರ ಹುಸೇನ್, ರಾಜಕುಮಾರ ಶೆಳ್ಕೆ, ಮಾರುತಿರೆಡ್ಡಿ ಪಟ್ನೆ, ಅಶೋಕ ಅಲ್ಮಾಜೆ, ಬಸವರಾಜ ಹಳ್ಳೆ, ದಯಾನಂದ ಘೂಳೆ, ಸಂತೋಷ ಪೋಕಲವಾರ, ಸಂಜು ವಡೆಯಾರ, ಚೇತನ ಕಪ್ಪಿಕೇರೆ, ಯಾದು ಮೇತ್ರೆ, ಪ್ರಕಾಶ ಜೀರ್ಗೆ, ಬಂಟಿ ರಾಂಪೂರೆ, ರವೀಂದ್ರ ರೆಡ್ಡಿ, ಸಚಿನ ಬಿರಾದಾರ, ಸಂಜು ಮುರ್ಕೆ, ಉದಯ ಸೋಲಾಪೂರೆ, ರಾಜಕುಮಾರ ಸೋರಾಳೆ, ಪ್ರದೀಪ ಪವಾರ, ಧನಾಜಿ ರಾಠೋಡ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದರು.
