ಸೇಡಂನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮಾವೇಶ ಹಾಗೂ ಗೀತಗಾಯನ ಸ್ಪರ್ಧೆ ಯಶಸ್ವಿ
ಸೇಡಂನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮಾವೇಶ ಹಾಗೂ ಗೀತಗಾಯನ ಸ್ಪರ್ಧೆ ಯಶಸ್ವಿ
ಸೇಡಂ, ಜು. 30: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಲಬುರ್ಗಿ ಹಾಗೂ ಸ್ಥಳೀಯ ಸಂಸ್ಥೆ ಸೇಡಂ ಇವರ ಸಂಯುಕ್ತ ಆಶ್ರಯದಲ್ಲಿ ಸಮಾವೇಶ ಹಾಗೂ ಗೀತಗಾಯನ ಸ್ಪರ್ಧೆಯನ್ನು ಉತ್ಸಾಹಭರಿತವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ಟಿ.ಪಿ.ಒ. ಸಂತೋಷ್ ಕುಲಕರ್ಣಿ, ಜಿಲ್ಲಾ ಜಂಟಿ ಕಾರ್ಯದರ್ಶಿ ರಾಜು ಮರಾಠಿ,ಜಿಲ್ಲಾ ಕಾರ್ಯದರ್ಶಿ ಪೀರಪ್ಪ ಹೂಗುಂಡ,ಸೈಯದ್ ಸರ್, ಡಿ.ಟಿ.ಸಿ. ಸುಮಂಗಲ ಕೋರಿ,ಚಂದ್ರಕಲಾ ಎಂ. ಪಾಟೀಲ್,ಡಾ. ಪ್ರಮೀಳಾ ಎಸ್. ಪಾಟೀಲ್ ಬಿಬ್ಬಳ್ಳಿ ಸೇರಿದಂತೆ ಕವಿತಾ, ಗುಂಡಮ್ಮ, ನೇತ್ರಾವತಿ, ಅನುಸೂಯ, ಭಾನುಲಕ್ಷ್ಮಿ, ಅನುಸೂಯ ಕಸ್ತೂರಿ, ಲಲಿತ, ರತ್ನಮ್ಮ, ನವೀನಾ ರೆಡ್ಡಿ ಹಾಗೂ ಅನೇಕ ಗೈಡ್ ಕ್ಯಾಪ್ಟನ್‌ಗಳು, ಸ್ಕೌಟ್ ಮಾಸ್ಟರ್‌ಗಳು ಮತ್ತು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಗೀತಗಾಯನ ಸ್ಪರ್ಧೆಯಲ್ಲಿ ಗೈಡ್ ವಿಭಾಗದಲ್ಲಿ ಆದಿತ್ಯ ಬಿರ್ಲಾ ಶಾಲೆ ಪ್ರಥಮ, ವಿದ್ಯಾಮಂದಿರ ಸಿಬಿಎಸ್‌ಇ ಶಾಲೆ ದ್ವಿತೀಯ ಹಾಗೂ ಸರಕಾರಿ ಪ್ರೌಢಶಾಲೆ ಯಡಗಾ ತೃತೀಯ ಸ್ಥಾನ ಪಡೆದುಕೊಂಡವು. ಸ್ಕೌಟ್ ವಿಭಾಗದಲ್ಲಿ ಆದಿತ್ಯ ಬಿರ್ಲಾ ಶಾಲೆ ಪ್ರಥಮ ಸ್ಥಾನ ಗಳಿಸಿತು. ಬುಲ್‌ಬುಲ್ ವಿಭಾಗದಲ್ಲಿ ವಿದ್ಯಾಮಂದಿರ ಸಿಬಿಎಸ್‌ಇ ಶಾಲೆ ಪ್ರಥಮ ಸ್ಥಾನ ಪಡೆದರೆ, ರೇಂಜರ್ ವಿಭಾಗದಲ್ಲಿ ಕುಮಾರಿ ಲಕ್ಷ್ಮಿ ಡಿಗ್ರಿ ಕಾಲೇಜು, ಸೇಡಂ ಪ್ರಥಮ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರವಾಯಿತು.
ಈ ಸಮಾರಂಭದ ವಿಶೇಷವೆಂದರೆ ಬಟಿಗೇರಾ (ಕೆ), ಆಡಿಕಿ, ಮದನಾ, ಹೂಡಾ (ಬಿ), ಯಡಗಾ, ಊಡಗಿ, ನೀಲಹಳ್ಳಿ ಹಾಗೂ ಕಿತ್ತೂರಾಣಿ ಚೆನ್ನಮ್ಮ ಸರ್ಕಾರಿ ಪ್ರೌಢಶಾಲೆ ಕೊಡ್ಲಾ ಸೇರಿದಂತೆ ಅನೇಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಗಮನಾರ್ಹವಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರಕಲಾ ಎಂ. ಪಾಟೀಲ್ ನಿರ್ವಹಿಸಿದರು.
ಶಿಕ್ಷಕರು ಮತ್ತು ಸಾಹಿತಿಗಳಾದ. ಚಂದ್ರಕಲಾ ಎಂ. ಪಾಟೀಲ್ ಪತ್ರಿಕಾ ಪ್ರಕಟಣೆ ತಿಳಿಸಿದರು.
