ಜಕ್ಕಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ: ಶ್ರದ್ಧಾ ಭಕ್ತಿಯಿಂದ ಮಹರ್ಷಿ ವೇದವ್ಯಾಸರ ಸ್ಮರಣೆ

ಜಕ್ಕಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ: ಶ್ರದ್ಧಾ ಭಕ್ತಿಯಿಂದ ಮಹರ್ಷಿ ವೇದವ್ಯಾಸರ ಸ್ಮರಣೆ

ಜಕ್ಕಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ: ಶ್ರದ್ಧಾ ಭಕ್ತಿಯಿಂದ ಮಹರ್ಷಿ ವೇದವ್ಯಾಸರ ಸ್ಮರಣೆ

ಜಕ್ಕಲಿ (ರೋಣ): ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರದಂದು ಗುರು ಪೂರ್ಣಿಮೆ ಆಚರಣೆಯನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಹಾಗೂ ಮಹರ್ಷಿ ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ದೀಪ ಬೆಳಗಿಸುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಹೆಣ್ಣುಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಬಿ ಗವಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ತಂದೆ-ತಾಯಿ ಜನ್ಮ ನೀಡಿದರೆ ಗುರುಗಳು ನಮಗೆ ಉತ್ತಮ ಜೀವನ ರೂಪಿಸಲು ಜ್ಞಾನದ ದಾರಿ ತೋರುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರುಗಳ ಬಗ್ಗೆ ಗೌರವ ಮತ್ತು ವಿನಯ ಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಾಲಕರ ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಎಸ್. ಬಿಂಗಿ ಅವರು ಮಾತನಾಡಿ, ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವರೇ ಗುರುಗಳು. ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸಿಗೆ ಗುರುಗಳ ಮಾರ್ಗದರ್ಶನವೇ ಮೂಲ ತಡಿಹದಿ ಎಂದು ಗುರು ಪೂರ್ಣಿಮೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳಿಗೆ ಗೌರವ ನಮನಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದುಕೊಂಡರು.

ಈ ಶುಭ ಸಮಾರಂಭದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕ ವೃಂದದವರಾದ ಶ್ರೀ ಎಸ್.ಎ. ಪಲ್ಲೆದ್, ಶ್ರೀ ಎಂ.ವಿ. ತಾಳಿಕೋಟಿ, ಶ್ರೀಮತಿ ಪಿ.ಜಿ. ಹುಯಿಲಗೋಳ, ಶ್ರೀಮತಿ ಎ.ಪಿ. ಶೆಟ್ಟರ್, ಶ್ರೀ ಎಸ್. ಘೋಡೆಸವಾರ, ಶ್ರೀ ಎ.ಎಂ. ಸೂರ್ಯಭಟ್, ಶ್ರೀಮತಿ ಸಾವಿತ್ರಿ ಬಡಿಗೇರ್, ಶ್ರೀಮತಿ ಸಿ.ಎಸ್. ಬೆಳ್ಳಟ್ಟಿ ಸೇರಿದಂತೆ ಮೂರೂ ಶಾಲೆಗಳ ಸಮಸ್ತ ಶಿಕ್ಷಕ-ಶಿಕ್ಷಕಿಯರ ಬಳಗ, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ