ಬಿಗವಾನ್ ಕ್ಕೆ ಹರಿದು ಬಂದ ಭಕ್ತ ಸಾಗರ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ರಿಗೆ ಗುರುವಂದನೆ

ಬಿಗವಾನ್ ಕ್ಕೆ ಹರಿದು ಬಂದ ಭಕ್ತ ಸಾಗರ  ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ರಿಗೆ ಗುರುವಂದನೆ

ಬಿಗವಾನ್ ಕ್ಕೆ ಹರಿದು ಬಂದ ಭಕ್ತ ಸಾಗರ

ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ರಿಗೆ ಗುರುವಂದನೆ

ಪುಣೆ: ದೇಶದಾದ್ಯಂತ ಲಕ್ಷಾಂತರ ಭಕ್ತ ಸಮೂಹ ಹೊಂದಿರುವ ಪರಮ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ನಿರಗುಡಿ‌ ಮುತ್ಯಾ ಅವರಿಗೆ ಗುರು ಪೂರ್ಣಿಮೆ ಅಂಗವಾಗಿ ಗುರುವಂದನೆ ಸಲ್ಲಿಸಲು ಭಕ್ತ ಸಾಗರವೇ ಆಗಮಿಸಿತು. 

ಪುಣೆ ಸಮೀಪದ ಬಿಗವಾನ್ ದ ಭಕ್ತಿಲಿಂಗ ಆಶ್ರಮದಲ್ಲಿ ಪೂಜ್ಯರಿಗೆ ಭಕ್ತರು ಗುರುವಂದನೆ ಸಲ್ಲಿಸಿದರು. ಬುಧವಾರ ಬೆಳಿಗ್ಗೆ ಯಿಂದಲೇ ತಾಸುಗಟ್ಟಲೇ ಸರದಿಯಲ್ಲಿ ನಿಂತು ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ರ ದರ್ಶನ ಪಡೆದರು.‌

 ಮಂಗಳವಾರ ಸಂಜೆಯಿಂದಲೇ ಬಿಗವಾನ್ ಕ್ಕೆ ಆಗಮಿಸಿದ ಭಕ್ತರು ಬುಧವಾರ ಬೆಳಿಗ್ಗೆ ಜರುಗಿದ ಪಲ್ಲಕ್ಕಿ ಮಹೋತ್ಸವ ಹಾಗೂ ಆರತಿಯಲ್ಲಿ ಪಾಲ್ಗೊಂಡು, ತದನಂತರ ಪೂಜ್ಯರ ದರ್ಶನ ಪಡೆದರು. ಪೂಜ್ಯರು ದಿನವೀಡಿ ಭಕ್ತರಿಗೆ ದರ್ಶನ ನೀಡಿದರು. 

ಗುರುವಿನ ಮಹತ್ವ ಪ್ರತಿಯೊಬ್ಬರು ಅರಿತು ಮುನ್ನೆಡದರೆ ಅದರಲ್ಲೂ ಧಾರ್ಮಿಕ ಗುರುಗಳ ಮಾರ್ಗದರ್ಶನ ಪಾಲಿಸಿದರೆ ಬದುಕಿಗೆ ಹೆಚ್ಚಿನ ಅರ್ಥ ಬರುತ್ತದೆ ಎಂದು ಪೂಜ್ಯರು ಭಕ್ತರಿಗೆ ತಿಳಿ ಹೇಳಿದರು. 

ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ವಕ್ತಾರ ನ್ಯಾಯವಾದಿ ವೈಜನಾಥ ಪಾಟೀಲ್ ಝಳಕಿ ಅವರು, ಪರಮ ಪೂಜ್ಯ ಹವಾ ಮಲ್ಲಿನಾಥ ಮಹಾರಾಜ್ ರು ಲಕ್ಷಾಂತರ ಜನರ ಹೃದಯಲ್ಲಿ‌ ಮನೆ‌ ಮಾಡಿದ್ದಾರೆ.‌ ಅವರ ನಡೆ ನುಡಿಗೆ ಇಂದು ಸೇರಿದ ಜನ‌ಸಾಗರವೇ ಹಿಡಿದ ಸಾಕ್ಷಿ ಎಂದು ಹೇಳಿದರು.

ಬಂದ ಭಕ್ತಾಧಿಗಳಿಗೆ ದರ್ಶನ ಅವಕಾಶ ಹಾಗೂ ಇತರ ಧಾರ್ಮಿಕ ಕಾರ್ಯಗಳನ್ನು ಪೂಜ್ಯರ ಭಕ್ತ ಪಡೆಯು ಅತ್ಯಂತ ಸೂಕ್ತವಾಗಿ ನಿಭಾಯಿಸಿರುವುದು ಕಂಡು ಬಂತು.