ಶಾಸಕ ಅಲ್ಲಮಪ್ರಭು ಪಾಟೀಲ ವಿರುದ್ಧ ಅಪ್ಪುಗೌಡ ಪಾಟೀಲ ರೇವೂರ ಬೆಂಬಲಿಗರಿಂದ ಸುಳ್ಳು ಆರೋಪ

ಶಾಸಕ ಅಲ್ಲಮಪ್ರಭು ಪಾಟೀಲ ವಿರುದ್ಧ ಅಪ್ಪುಗೌಡ ಪಾಟೀಲ ರೇವೂರ ಬೆಂಬಲಿಗರಿಂದ ಸುಳ್ಳು ಆರೋಪ

ಶಾಸಕ ಅಲ್ಲಮಪ್ರಭು ಪಾಟೀಲ ವಿರುದ್ಧ ಅಪ್ಪುಗೌಡ ಪಾಟೀಲ ರೇವೂರ ಬೆಂಬಲಿಗರಿಂದ ಸುಳ್ಳು ಆರೋಪ

ಕಲಬುರಗಿ: ಕಳೆದ 20 ವರ್ಷಗಳಿಂದ ಚಂದ್ರಶೇಖರ ಪಾಟೀಲ ರೇವೂರು ಕುಟುಂಬದ ಆಡಳಿತವನ್ನು ತಿರಸ್ಕರಿಸಿ ಅಭಿವೃದ್ದಿಯತ್ತ ಸಾಗುತ್ತಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಬೆಂಬಲಿಗರು ನಡೆಸಿದ ಹೋರಾಟ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ ಆರೋಪಿಸಿದರು.

   ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ತಮ್ಮ ನಾಯಕರ ರಾಜಕೀಯ ಅಸ್ತಿತ್ವದ ಉಳಿವಿಗಾಗಿ, ಜನ ಹಿತವನ್ನು ಬದಿಗೊತ್ತಿ ಅವರು ಪ್ರತಿಭಟನೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.ಕಳೆದ ಎರಡು ದಶಕಗಳ ಕಾಲ ಭಾವನಾತ್ಮಕ ಹಾಗೂ ಮತೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಗೆಲುವು ಸಾಧಿಸುತ್ತಿದ್ದವರಿಗೆ, 2023ರ ನಂತರ ಕ್ಷೇತ್ರದಲ್ಲಿ ಆರಂಭವಾಗಿರುವ 'ನಿಜವಾದ ಅಭಿವೃದ್ಧಿ'ಯನ್ನು ಕಂಡು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

   ಶಾಸಕ ಅಲ್ಲಮಪ್ರಭು ಪಾಟೀಲ ಅವರು ಕಲಬುರಗಿ ಜಿಲ್ಲೆಗೆ ನಾಲ್ಕು ಚತುಷ್ಪದ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದಾರೆ.ಹಾಗೂ ಸದಾ ರೈತರ ಪರವಾಗಿ ನಿಲ್ಲುವ ನಾಯಕರಾಗಿದ್ದಾರೆ.ಮತ್ತು 24*7 ಜನ ಸೇವೆ ಹಾಗೂ ಜನ ಸಂಪರ್ಕದಲ್ಲಿ ನಿತ್ಯ ನಿರತರಾಗಿದ್ದಾರೆ. ಮತ್ತು ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ‌.ಇಷ್ಟೆಲ್ಲಾ ಕೂಡಾ ಅಭಿವೃದ್ದಿ ಮಾಡಿದರು ಶಾಸಕ ಅಲ್ಲಮಪ್ರಭು ಪಾಟೀಲ ಅವರ ವಿರುದ್ಧ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ಬೆಂಬಲಿಗರು ಮಾಡುತ್ತಿರುವ ಆರೋಪವು ಸುಳ್ಳಾಗಿವೆ.ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ ಒಳಪಡುವ ಗ್ರಾಮಗಳಿಗೆ ಹೆಚ್ಚಿನ ಒತ್ತು‌ ನೀಡಿದ್ದಾರೆ.ವಿಶೇಷವಾಗಿ ಅವರು ತಮ್ಮ ಅನುದಾನದ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ವಿಶೇಷವಾಗಿದೆ.

             ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಶಾಸಕರಿದ್ದಾಗ ದಕ್ಷಿಣ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಆಗಿಲ್ಲ.ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅಭಿವೃದ್ದಿ ಕಡೆ ಗಮನ ಹರಿಸುವುದರಿಂದ ರೇವೂರ ಬೆಂಬಲಿಗರಿಗೆ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.