ಹೀರಾಪೂರ ಅಭಿವೃದ್ಧಿಗೆ ₹1 ಕೋಟಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ
ಹೀರಾಪೂರ ಅಭಿವೃದ್ಧಿಗೆ ₹1 ಕೋಟಿ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ
ಕಲಬುರಗಿ : ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಬುಧವಾರ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಹೀರಾಪೂರ ಗ್ರಾಮದಲ್ಲಿ ₹1 ಕೋಟಿ (ರೂ.100 ಲಕ್ಷ) ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಯೋಜನೆಯಡಿ ಹೀರಾಪೂರದಲ್ಲಿ ಸಿಸಿ ಒಳ ರಸ್ತೆಗಳ ನಿರ್ಮಾಣ ಹಾಗೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮುಖ್ಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಗುದ್ದಲಿ ಪೂಜಾ ಸಮಾರಂಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಮಗಾರಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಲಿಂಗರಾಜ ಕಣ್ಣಿ, ಶಿವಯೋಗಿ ದೊಡ್ಮನಿ, ಸುನಿಲ್ ಇನಾಮ್ದಾರ್, ಪರಮೇಶ್ವರ್ ಮೇಲಿನಮನಿ, ಉದಯಕುಮಾರ್ ಡಿಪ್ಟಿ, ಜಗನ್ನಾಥ್ ದಿಕ್ಸಂಗಿ, ಸಂತೋಷ್ ಮಿಲಿಮನಿ, ರಣಜಿ ಡಿಪ್ಟಿ, ಲಕ್ಷ್ಮಣ್ ಅಷ್ಟಗಿ, ಲಕ್ಷ್ಮಣ್ ಹತ್ತರಗಿ, ಅಶೋಕ್ ಸರಡಗಿ, ಸಿದ್ದಾರ್ಥ ದಿಕ್ಸಂಗಿ, ಮಹೇಶ್ ಕೆಲ್ಲೂರ್ಕರ್, ಅಶೋಕ್ ಮೇಲಿನಮನಿ, ಶರಣಗೌಡ ಬಿರಾದಾರ್, ಹನುಮಂತ ನಿಂಬರ್ಗಾ, ಸೂರ್ಯಕಾಂತ್ ಕಡೆಗಂಚಿ, ಸುನಿಲ್ ದಿಕ್ಸಂಗಿ, ಕುಸಮಾಕರ್ ಆರ್., ನಿಖಿಲ್ ನಾಗ, ತಿಲಕ್ ದೇವನೂರು, ಈರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
