ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ಅವಹೇಳನ: ಖಂಡನೀಯ

ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ಅವಹೇಳನ: ಖಂಡನೀಯ

ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ಅವಹೇಳನ: ಖಂಡನೀಯ

ಕಲಬುರಗಿ: ಆಳಂದದ ಲಾಡ್ಲೆ ಮಶಾಕ್ ದರ್ಗಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ‘ದ್ವೇಷ ಭಾಷಣ’ ಮಾಡಿರುವ ಆರೋಪದಡಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕನ್ನಡಪರ ಹೋರಾಟಗಾರ ಮನೋಹರಕುಮಾರ ಬೀರನೂರ ಖಂಡಿಸಿದ್ದಾರೆ.

                ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದತ್ತಾತ್ರೇಯ ಪಾಟೀಲ ರೇವೂರ ಅವರು ನೀಡಿದ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಆದರೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದವರ ವಿರುದ್ಧ ಸಮರ್ಪಕ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.

    ಅಪ್ಪುಗೌಡರ ವಿರುದ್ದ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಸರಕಾರ ಕೂಡಲೇ ಹಿಂಪಡೆಯಬೇಕು. ಮಾಜಿ‌‌ ಶಾಸಕರಾದ ದತ್ತಾತ್ರೇಯ‌ ಪಾಟೀಲ ರೇವೂರ ಅವರು ಹಳೆಯ ಘಟನೆಯ ಮೆಲುಕು ಹಾಕಿದ್ದಾರೆಯೇ ಹೊರತು ಯಾರನ್ನು‌ ನಿಂದಿಸಿಲ್ಲ.ಆದರೆ ಅವರ ವಿರುದ್ದ ಸುಳ್ಳು ಕೇಸ ಹಾಕಿ,ಅವಾಚ್ಯ ಶಬ್ದಗಳಿಂದ ನಿಂದಿಸಿ ಪೋಲಿಸ ಠಾಣೆಗೆ ನುಗ್ಗಿದ 18 ಮಂದಿ ವಿರುದ್ದ ಪೋಲಿಸರು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.