ಸೇವಾ ಕಾರ್ಯಗಳ ಮೂಲಕ‌ ಜನ್ಮದಿನ ಆಚರಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ :.. ಹೊಸಮನಿ.

ಸೇವಾ ಕಾರ್ಯಗಳ ಮೂಲಕ‌ ಜನ್ಮದಿನ  ಆಚರಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ :.. ಹೊಸಮನಿ.

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ 78ನೇ ಜನ್ಮದಿನದ ಸಂಭ್ರಮ.

ಸೇವಾ ಕಾರ್ಯಗಳ ಮೂಲಕ‌ ಜನ್ಮದಿನ ಆಚರಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ :.. ಹೊಸಮನಿ.

ನಾಗರಾಜ್ ದಂಡಾವತಿ ವರದಿ ಶಹಾಬಾದ : - ಕರ್ನಾಟಕ ರಾಜ್ಯ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಹಿರಿಯ ನಾಯಕರಾದ ಕೆ. ಎಸ್. ಈಶ್ವರಪ್ಪನವರ 78ನೇ ಜನ್ಮದಿನದ ಅಂಗವಾಗಿ ಕುರುಬ ಸಮಾಜ ಹಾಗೂ ಅವರ ಅಭಿಮಾನಿ ಬಳಗದ ವತಿಯಿಂದ ಅತ್ಯಂತ ಅರ್ಥಪೂರ್ಣವಾಗಿ ವಿವಿಧ ಸಮಾಜಮುಖಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಶುಭ ಸಂದರ್ಭದಲ್ಲಿ ರೋಗಿಗಳಿಗೆ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಹಲವು ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಬೆಳಿಗ್ಗೆ ಡಿಸಿ ಹೊಸಮನಿ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅಭಿಮಾನಿಗಳು ಮತ್ತು ಕುರುಬ ಸಮಾಜದ ಮುಖಂಡರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ, ರೋಗಿಗಳಿಗೆ ಶೀಘ್ರ ಗುಣಮುಖರಾಗಲೆಂದು ಹಾರೈಸಿ ಹಣ್ಣು-ಹಂಪಲು, ಬ್ರೆಡ್ ಹಾಗೂ ಬಿಸ್ಕೆಟ್‌ಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳ ಕುಟುಂಬಸ್ಥರು ಈ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕುರುಬ ಸಮಾಜ ಮತ್ತು ಬಿಜೆಪಿ ಹಿರಿಯ ಮುಖಂಡ ಡಿ.ಸಿ ಹೊಸಮನಿ ಮಾತನಾಡಿ, ಕೆ. ಎಸ್. ಈಶ್ವರಪ್ಪನವರು ರಾಜ್ಯದ ಅಭಿವೃದ್ಧಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ನೀಡಿರುವ ಕೊಡುಗೆ ಅಪಾರ, ಅವರ 78ನೇ ಜನ್ಮದಿನವನ್ನು ಕೇವಲ ಆಡಂಬರದ ಆಚರಣೆಯನ್ನಾಗಿ ಮಾಡದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಹ ಸೇವಾ ಕಾರ್ಯಗಳ ಮೂಲಕ ಆಚರಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದರು.

ಈ ಸಮಾಜಮುಖಿ ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ಯಲ್ಲಾಲಿಂಗ ಹೈಯಾಳಕರ, ಡಾ. ಅಶೋಕ ಜಿಂಗಾಡೆ, ಭೀಮರಾಯ ಜಂಗಲಗೌಡಿ, ರಾಚಯ್ಯ ಹಿರೇಮಠ, ಗುಂಡಪ್ಪ ಹೊಸ್ಮನಿ, ಯಲ್ಲಾಲಿಂಗ ಪೂಜಾರಿ, ನಿಂಗಪ್ಪ ಕನಗನಳ್ಳಿ, ಮಹೇಶ ಹಲ್ಕಟ್ಟಿ, ದೇವಿಂದ್ರ ಹೊಸಮನಿ, ಆಕಾಶ ಯರಗಲ, ಯಲ್ಲಪ್ಪ ಯನಗುಂಟಿ, ಬಾಗೇಶ ಮರ್ತೂರ, ಸುಭಾಷ್ ಜಾಪುರ, ದತ್ತಾ ಫಂಡ, ಸುನೀಲ ಪೂಜಾರಿ ಸೇರಿದಂತೆ ಅನೇಕ‌ ಜನ ಪಾಲ್ಗೊಂಡು, ಮಾಜಿ ಉಪ ಮುಖ್ಯಮಂತ್ರಿಗಳಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಸಿಗಲೆಂದು ಹಾರೈಸಿದರು.