ಖರ್ಗೆ ಯವರಿಗೆ ಡಿಸಿಎಂ ಹಾಗೂ ಗೃಹ ಖಾತೆ ನೀಡಿ :..ಅನ್ವರ ಪಾಷಾ ಮನವಿ.

ಖರ್ಗೆ ಯವರಿಗೆ ಡಿಸಿಎಂ ಹಾಗೂ ಗೃಹ ಖಾತೆ ನೀಡಿ :..ಅನ್ವರ ಪಾಷಾ ಮನವಿ.

ಖರ್ಗೆ ಯವರಿಗೆ ಡಿಸಿಎಂ ಹಾಗೂ ಗೃಹ ಖಾತೆ ನೀಡಿ :..ಅನ್ವರ ಪಾಷಾ ಮನವಿ.

ನಾಗರಾಜ್ ದಂಡಾವತಿ ವರದಿ ಶಹಾಬಾದ : - ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿರುವ ಮುಂಬರುವ ಹೊಸ ಕಾಂಗ್ರೆಸ್ ಸರ್ಕಾರದಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಹಾಗೂ ಗೃಹ ಸಚಿವ ಸ್ಥಾನವನ್ನು ನೀಡಬೇಕೆಂದು ಶಹಾಬಾದ ನಗರ ಸಭೆಯ ಮಾಜಿ ಸದಸ್ಯ, ಅಲ್ಪಸಂಖ್ಯಾತರ ಯುವ ನಾಯಕ ಅನ್ವರ ಪಾಷಾ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಲ್ಲಿ ಒತ್ತಾಯಿಸಿ, ಮನವಿ ಮಾಡಿದ್ದಾರೆ.

ಈ ಕುರಿತು ಮಾದ್ಯಮದ ಜೊತೆ ಅವರು ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರು ಸದಾ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಆ ಸಮುದಾಯದ ಏಳಿಗೆಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಧೀಮಂತ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿ ತೋಟವನ್ನು ಮರುಸ್ಥಾಪಿಸಲು ಮತ್ತು ಎಲ್ಲಾ ಜಾತಿ, ಧರ್ಮದ ಜನರನ್ನು ಸಮಾನವಾಗಿ, ಒಟ್ಟಾಗಿ ಕೊಂಡೊಯ್ಯುವ ಅದ್ಭುತ ನಾಯಕತ್ವದ ಗುಣ ಅವರಿಗಿದೆ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಅಲ್ಪಸಂಖ್ಯಾತರು ಹಾಗೂ ಶೋಷಿತ ವರ್ಗದವರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಿಯಾಂಕ್ ಖರ್ಗೆ ಅವರಂತಹ ಸಮರ್ಥ ನಾಯಕರ ಅಗತ್ಯವಿದೆ. ಆದ್ದರಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯದ ಹಿರಿಯ ನಾಯಕರು ಈ ಮನವಿಯನ್ನು ಪುರಸ್ಕರಿಸಿ, ಮುಂಬರುವ ಸಂಪುಟದಲ್ಲಿ ಅವರಿಗೆ ಗೃಹ ಸಚಿವ ಸ್ಥಾನದ ಜವಾಬ್ದಾರಿಯೊಂದಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕು ಎಂದರು.

ಪ್ರಿಯಾಂಕ್ ಖರ್ಗೆ ಅವರಿಗೆ ಈ ಉನ್ನತ ಜವಾಬ್ದಾರಿಗಳನ್ನು ನೀಡುವುದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ದೊಡ್ಡ ಶಕ್ತಿ ಬಂದಂತಾಗುತ್ತದೆ ಎಂದು ಅನ್ವರ ಪಾಷಾ ಅವರು ಈ ಸಂದರ್ಭದಲ್ಲಿ ಹೈಕಮಾಂಡ್‌ಗೆ ಒತ್ತಾಯಿಸಿ, ಮನವಿ ಮಾಡಿದ್ದಾರೆ.