ಖರ್ಗೆ ಯವರಿಗೆ ಡಿಸಿಎಂ : ರುದ್ರಪ್ಪ ಲಮಾಣಿ ಗೆ ಸಚಿವ ಸ್ಥಾನ ನೀಡಿ : ಬಂಜಾರ ಸಮಾಜ ಅಗ್ರಹ
ಖರ್ಗೆ ಯವರಿಗೆ ಡಿಸಿಎಂ : ರುದ್ರಪ್ಪ ಲಮಾಣಿ ಗೆ ಸಚಿವ ಸ್ಥಾನ ನೀಡಿ : ಬಂಜಾರ ಸಮಾಜ ಅಗ್ರಹ
ಶಹಾಬಾದ : - ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿವೃದ್ಧಿಗೆ ಶ್ರಮಿಸಿದ ಪ್ರಿಯಾಂಕ್ ಖರ್ಗೆ ಅವರು ಶಾಸಕರಾಗಿ, ಸಚಿವರಾಗಿ ಬಹಳಷ್ಟು ಕೆಲಸವನ್ನು ಮಾಡಿದ್ದಾರೆ ಇನ್ನು ಪಕ್ಷದ ಸಂಘಟನೆ ಹಾಗೂ ಹೆಚ್ಚಿನ ರಾಜ್ಯದ ಅಭಿವೃದ್ಧಿಗಾಗಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಗ್ರಾಮೀಣ ಬಂಜಾರ ಸೇವಾ ಸಮಿತಿಯ ವತಿಯಿಂದ ಕಾಂಗ್ರೆಸ್ ಪಕ್ಷದ ತಾ.ಪಂ ಮಾಜಿ ಸದಸ್ಯ ನಾಮದೇವ ರಾಠೋಡ ಮತ್ತು ಹಿರಿಯ ಮುಖಂಡ ಚಂದು ಜಾಧವ್ ಜಂಟಿಯಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.
ತಾಲ್ಲೂಕಿನ ಗ್ರಾಮೀಣ ಬಂಜಾರ ಸೇವಾ ಸಮಿತಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಂಜಾರ ಸಮಾಜದ ಏಕೈಕ ಜನ ಪ್ರತಿನಿಧಿಯಾದ ರುದ್ರಪ್ಪ ಲಂಬಾಣಿ ಅವರಿಗೆ ಕ್ಯಾಬಿನೆಟ್ ಸಚಿವರಾಗಿ ನೇಮಕ ಮಾಡಬೇಕು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಂಜಾರ ಸಮಾಜಕ್ಕೆ ಇಲ್ಲಿವರೆಗೂ ಯಾವುದೆ ತಾರಾತಮ್ಯ ಮಾಡದೆ ಸ್ಥಾನಮಾನವನ್ನು ನೀಡಿದೆ ಈಗಲೂ ಕೂಡ ನಮ್ಮ ಸಮಾಜದ ಜನಪ್ರತಿನಿಧಿಗೆ ಅವಕಾಶ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜು ಚವ್ಹಾಣ, ರಾಜು ರಾಠೋಡ, ಹೀರಾಸಿಂಗ್ ರಾಠೋಡ, ಗಣಪತಿ ಪವಾರ, ರಾಜು ಪವಾರ ಹಾಗೂ ಇತರರ ಉಪಸ್ಥಿತರಿದ್ದರು.
