ಮಂಗಳೂರಿಗೆ ಶೀಘ್ರದಲ್ಲೇ ವಿಮಾನ ಸೇವೆ ಕೇಂದ್ರ ನಿರ್ಧಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ್ ಮಾಹೋಲ್ ಭರವಸೆ

ಮಂಗಳೂರಿಗೆ  ಶೀಘ್ರದಲ್ಲೇ ವಿಮಾನ ಸೇವೆ ಕೇಂದ್ರ ನಿರ್ಧಾರ  ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ್ ಮಾಹೋಲ್ ಭರವಸೆ

ಮಂಗಳೂರಿಗೆ ಶೀಘ್ರದಲ್ಲೇ ವಿಮಾನ ಸೇವೆ ಕೇಂದ್ರ ನಿರ್ಧಾರ

ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಮುರಳೀಧರ್ ಮಾಹೋಲ್ ಭರವಸೆ

ಕಲಬುರಗಿ : ಮಂಗಳೂರಿಗೆ ಕಲಬುರಗಿಯಿಂದ ಶೀಘ್ರದಲ್ಲೇ ವಿಮಾನ ಸೇವೆ ಪ್ರಾರಂಭದ ಕುರಿತು ಕೇಂದ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವರಾದ ಮುರಳೀಧರ್ ಮಾಹೋಲ್ ಕಲಬುರಗಿಯ ಹೋಟೆಲ್ ಅಸೋಸಿಯೇಷನ್ ನಿಯೋಗಕ್ಕೆ ಭರವಸೆ ನೀಡಿದರು. 

    ಕಲಬುರಗಿಯಲ್ಲಿ ಕೇಂದ್ರ ಸಚಿವರ ಆಪ್ತರು ಹಾಗೂ ಪುಣೆ ಮಹಾನಗರ ಪಾಲಿಕೆಯ ಹಣಕಾಸು ಸಾಯಿ ಸಮಿತಿಯ ಅಧ್ಯಕ್ಷರಾದ ಮೂಲತಃ ಯಾದಗಿರಿಯವರಾದ ಶ್ರೀನಾಥ್ ಭೀಮಾಲೆ ಅವರು ಜು.13ರಂದು ಕಲಬುರಗಿಗೆ ಆಗಮಿಸಿದ ಸಂದರ್ಭದಲ್ಲಿ ನಿಯೋಗವು ಸಲ್ಲಿಸಿದ ಮನವಿಗೆ ದೂರವಾಣಿ ಮೂಲಕ ಕೇಂದ್ರ ಸಚಿವರು ಮಾತನಾಡಿ ತಮ್ಮ ಬೇಡಿಕೆಗಳ ಮನವಿಯನ್ನು ಕೂಡಲೇ ಕಳುಹಿಸಿದರೆ ನಾಗರಿಕ ವಿಮಾನಯ ಖಾತೆಯ ಅಧಿಕಾರಿಗಳ ಜೊತೆ ಚರ್ಚಿಸುವೆ ಸಾಕಷ್ಟು ಪ್ರಯಾಣಿಕರು ಲಭ್ಯವಾದಲ್ಲಿ ವಿಮಾನ ಸೇವೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಯಾವುದೇ ಅಡ್ಡಿ ಇಲ್ಲ ಎಂದು ಸಚಿವರು ಭರವಸೆ ನೀಡಿದರು. ಸಚಿವರ ಜೊತೆ ಮಾತುಕತೆಯಲ್ಲಿ ಡಾ. ಸದಾನಂದ ಪೆರ್ಲ ಅವರು ನೇರ ಸಂಚಾರದ ಬದಲಾಗಿ ಕಲಬುರಗಿಯಿಂದ ಬೆಂಗಳೂರು ಮಾರ್ಗವಾಗಿ ಒನ್ ಸ್ಟಾಪ್ ಮಂಗಳೂರು ವಿಮಾನ ಸೇವೆ ಪ್ರಾರಂಭಿಸುವಂತೆ ನೀಡಿದ ಸಲಹೆಯನ್ನು ಸಚಿವರು ಸ್ವೀಕರಿಸಿ ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ಯನ್ನಿತ್ತರು. ಮಂಗಳೂರಿಗೆ ಸದ್ಯ ಬಸ್ ಮೂಲಕ 16 ಗಂಟೆಗಳ ಪ್ರಯಾಣದ ವೇಳೆ ತಗಲುತಿದ್ದು ವಿಮಾನಸೇವೆ ಅಗತ್ಯವಾಗಿ ಒದಗಿಸಬೇಕು ಎಂದು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಅವರು ನೀಡಿದ ಸಲಹೆಯನ್ನು ಗಮನಿಸುವುದಾಗಿ ಸಚಿವರು ತಿಳಿಸಿದರು. ಮೋದಿ ಸರ್ಕಾರವು ಜನರ ಅವಶ್ಯಕತೆಗಳಿಗೆ ತುರ್ತು ಸ್ಪಂದನೆ ನೀಡಿ ಉತ್ತಮ ಆಡಳಿತ ನೀಡುತ್ತಿದೆ ಎಂದು ಈ ಸಂದರ್ಭದಲ್ಲಿ ಸಚಿವ ಮಾಹೋಲ್ ತಿಳಿಸಿದರು. 

  ಕಲಬುರಗಿಯಿಂದ ಖಾಸಗಿ ಏರ್ ಲೈನ್ಸ್ ಗಳಿಗೆ ಸಂಚಾರ ಅನುಮತಿ ಹಾಗೂ ಉಡಾನ್ ಯೋಜನೆ ಪುನಃ ಆರಂಭಗೊಳಿಸಿದರೆ ಪ್ರಯಾಣಿಕರಿಗೆ ಅನುಕೂಲ. ಬೀದರ್ ಶಹಾಪುರ ಯಾದಗಿರಿ ಮುಂತಾದಡೆಗಳಿಂದ ಏಳು ಬಸ್ಸುಗಳು ನಿತ್ಯ ಮಂಗಳೂರಿಗೆ ಸಂಚರಿಸುತ್ತಿದ್ದು ವಿಮಾನ ಸಂಚಾರಕ್ಕೆ ಪ್ರಯಾಣಿಕರ ಕೊರತೆಯಾಗುವುದಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸುನಿಲ್ ಶೆಟ್ಟಿ ಸಲಹೆ ನೀಡಿದರು. ಮನವಿಯನ್ನು ಸಚಿವರ ಪರವಾಗಿ ಸ್ವೀಕರಿಸಿದ ಶ್ರೀನಾಥ್ ಭೀಮಾಲೆ ಮಾತನಾಡಿ ಬೇಡಿಕೆಗಳನ್ನು ಸಚಿವರಿಗೆ ಖುದ್ದಾಗಿ ನೀಡಿ ಸಂಚಾರ ಆರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವರಿಗೆ ಒತ್ತಡ ಹೇರುವುದಾಗಿ ಜಿಲ್ಲಾ ಹೋಟೆಲ್ ಆಸೋಸಿಯೇಷನ್ ಪದಾಧಿಕಾರಿಗಳ ನಿಯೋಗಕ್ಕೆ ಭರವಸೆ ನೀಡಿದರು. 

 ನಿಯೋಗದಲ್ಲಿ ಅಧ್ಯಕ್ಷ ನರಸಿಂಹ ಮೆಂಡನ್ ಕಾರ್ಯದರ್ಶಿ ಸುನಿಲ್ ಶೆಟ್ಟಿ, ಡಾ. ಸದಾನಂದ ಪೆರ್ಲ ವೆಂಕಟೇಶ ಎಂ ಕಡೇಚೂರ್, ಸುರೇಶ್ ಗುತ್ತೇದಾರ್ ಮಟ್ಟೂರ , ಪುಣೆಯ ಸಂತೋಷ್ ಭಂಡಾರಿ ಹಾಗೂ ಮಹೇಶ್ ಎಂ ಕಡೇಚೂರ್ ಇದ್ದರು.