ಪ್ರತಿಯೊಬ್ಬರಿಗೂ ಕಣ್ಣಿನ ಸಂರಕ್ಷಣೆ ಅತ್ಯಗತ್ಯ - ಕುಮಾರ ಬಣಗಾರ

ಪ್ರತಿಯೊಬ್ಬರಿಗೂ ಕಣ್ಣಿನ ಸಂರಕ್ಷಣೆ ಅತ್ಯಗತ್ಯ - ಕುಮಾರ ಬಣಗಾರ

ಪ್ರತಿಯೊಬ್ಬರಿಗೂ ಕಣ್ಣಿನ ಸಂರಕ್ಷಣೆ ಅತ್ಯಗತ್ಯ - ಕುಮಾರ ಬಣಗಾರ 

ಶಹಪುರ : ಇಂದಿನ ಪ್ರಸ್ತುತ ಒತ್ತಡದ ಜೀವನದಲ್ಲಿ ಆಹಾರ ಸೇವನೆಯಿಂದ ನಿತ್ಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ ತೊಂದರೆ ಅನುಭವಿಸುವಂತಾಗಿದೆ,ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ರಕ್ಷಣೆಯ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅವಶ್ಯಕತೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ.ಟ್ರಸ್ಟ ಯೋಜನಾಧಿಕಾರಿಗಳಾದ ಕುಮಾರ ಬಣಗಾರ ಹೇಳಿದರು.

ನಗರದ ಗಾಂಧಿ ಚೌಕ ಹತ್ತಿರದ ಕಾಳಿಕಾದೇವಿಯ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿ.ಸಿ.ಟ್ರಸ್ಟ್ ಹಾಗೂ ಜ್ಞಾನಗಂಗೋತ್ರಿ ಜ್ಞಾನ ವಿಕಾಸ ಕೇಂದ್ರ ಮತ್ತು ಯಾದಗಿರಿಯ ವೇದ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ,ಅವರು ಜನರು ಇಂತಹ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವೇದ ಕಣ್ಣಿನ ಆಸ್ಪತ್ರೆಯ ಶಿಬಿರದ ಕೋ ಆರ್ಡಿನೇಟರ್ ಸಿದ್ದರಾಜ ಮಾತನಾಡಿ ಮನುಷ್ಯನ ಅತಿ ಸೂಕ್ಷ್ಮವಾದ ಅಂಗ ಎಂದರೆ ಕಣ್ಣು, ಇದನ್ನು ಅತಿ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು,ಆದ್ದರಿಂದ ಇಂಥಹ ಉಚಿತ ಆರೋಗ್ಯ ನೇತ್ರ ತಪಾಸಣಾ ಶಿಬಿರಗಳು ಸಾರ್ವಜನಿಕರಿಗೆ ಅನುಕೂಲವಾಗಲಿವೆ ಎಂದು ನುಡಿದರು.

ಈ ಸಂದರ್ಭದಲ್ಲಿ ವೇದ ಕಣ್ಣಿನ ಆಸ್ಪತ್ರೆಯ ವೈದ್ಯರ ತಂಡ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿ ಔಷಧಿ ಉಪಚಾರ ನೀಡಿದರು, ಒಟ್ಟು 182 ಜನರು ನೇತೃ ತಪಾಸಣೆಗೆ ಒಳಗಾದರೆ,38 ಜನರು 50% ರಿಯಾಯಿತಿ ದರದಲ್ಲಿ ಕನ್ನಡಕ ಪಡೆದುರು,17 ಜನರ ಅಗತ್ಯ ಉಳ್ಳವರಿಗೆ ಕಣ್ಣಿನ ಪೊರೆ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು .

ಈ ಸಮಾರಂಭದ ವೇದಿಕೆಯ ಮೇಲೆ ಸೈಯದ್ ಹರ್ಷದ್ ಪಟೇಲ್,ವಿಜಯ್ ಸಿಂಗ್ ಠಾಕೂರ,ಪತ್ರಕರ್ತ ಬಸವರಾಜ ಶಿಣ್ಣೂರ,ತಿಪ್ಪಣ್ಣ ಕ್ಯಾತನಾಳ ತಾಲೂಕಿನ ಸಮನ್ವಯ ಅಧಿಕಾರಿ ಶೋಭಾ ಹೋಳಿ,ವಲಯದ ಮೇಲ್ವಿಚಾರಕರಾದ ದೇವೇಂದ್ರಪ್ಪ ಸೇರಿದಂತೆ ಸೇವಾ ಪ್ರತಿನಿಧಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.