ಸುಲೇಪೇಟ್‌: ಬಹೆಲೂಲ್ ಶಾಹ ಸಂಭ್ರಮದ ಉರುಸ

ಸುಲೇಪೇಟ್‌: ಬಹೆಲೂಲ್ ಶಾಹ ಸಂಭ್ರಮದ ಉರುಸ

ಸುಲೇಪೇಟ್‌: ಬಹೆಲೂಲ್ ಶಾಹ ಸಂಭ್ರಮದ ಉರುಸ

ಚಿಂಚೋಳಿ : ತಾಲೂಕಿನ ಸುಲೇಪೇಟ ಗ್ರಾಮದ ಬೈಹಲೂಲ್ ಶಾಹ ದರ್ಗಾದ ಉರುಸ್ ಪ್ರಯುಕ್ತ ಗಂಧದ ಮೆರವಣಿಗೆಯನ್ನು ದರ್ಗಾದ ಭಕ್ತರು ಶ್ರದ್ಧಾ ಭಕ್ತಿಯಿಂದ ಜರುಗಿಸಿದರು.

ಉರುಸ್ ಪ್ರಯುಕ್ತ ದರ್ಗಾವನ್ನು ವಿಶೇಷವಾಗಿ ಅಲಂಕಾರಗಳೊಂದಿಗೆ ಸಿಂಗರಿಸಲಾಗಿತ್ತು. ಈ ಉರಸ್ ಪ್ರತಿ ವರ್ಷ ಬಕ್ರೀದ್ ಹಬ್ಬದ ದಿನ ರಾತ್ರಿ ನಡೆಸಲಾಗುತ್ತದೆ. ಗಂಧದ ಮೆರವಣಿಗೆಯನ್ನು ರಾತ್ರಿ 9 ಗಂಟೆಗೆ ಜಹೀರೋದ್ದಿನ್ ಜೈನೋದ್ದಿನ ಪಟೇಲ್ ಮನೆಯಿಂದ ಪ್ರಾರಂಭಿಸಲಾಯಿತು. 

ಈ ಉರಸ್ ಸುಲೇಪೇಟನ ಪ್ರಮುಖ ಬೀದಿಗಳ ಮೂಲಕ ದೇವರನಾಮ ಮೀಲಾದ ಹಾಡುವ ತಂಡ, ಹಲಗಿ, ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಗಂಧದ ಚಾದರನ್ನು ದರ್ಗಾಕ್ಕೆ ತರಲಾಯಿತು. ಬಳಿಕ ವಿಶೇಷ ಪ್ರಾರ್ಥನೆ (ದುವಾ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ಈ ವೇಳೆ ಭಕ್ತರು ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹರಕೆ ಹೊತ್ತು ಬಂದ ಭಕ್ತರು ದರ್ಗಾಗೆ ಹೂವಿನ ಚಾದರ್ ಹೊದಿಸಿ ಗಂಧ ಅರ್ಪಿಸಿದರು. 

ಅಲ್ಲಿಂದ ಮೆರವಣಿಗೆ ಮೂಲಕ ಸಂದಾಲ್ ಸಾಹೇಬ, ಮೈಬೂಬಸುಬಾನಿ ದರ್ಗಾ, ನವಾಬ ಸಾಹೇಬ ಹಾಗೂ ಶಾಹ ಹುಸ್ಸೇನ್ ದರ್ಗಾಕ್ಕೆ ತಲುಪಿ ಪ್ರಾರ್ಥನೆ ಸಲ್ಲಿಸಲಾಯಿತು. ಮತ್ತೇ ಮರಳಿ ಪುನಃ ಮೆರವಣಿಗೆ ಜಹಿರೋದ್ದಿನ ಪಟೇಲ್ ಮನೆಗೆ ತಲುಪುವ ಮೂಲಕ ಸಂಭ್ರಮದ ಉರಸ್ ಪೂರ್ಣಗೊಂಡಡಿತ್ತು.

ಈ ಸಂದರ್ಭದಲ್ಲಿ ಮಸಜೀದ್ ಕಮಿಟಿಯ ಮುಖ್ಯಸ್ಥ ಮನ್ನಾನ ಮೋಮಿನ, ಜಾಮೀಯಾ ಮಸ್ಜೀದ್ ಮೌಲಾನಾ ಹುಸ್ಸೇನ್ ಹಶ್ಮಿ, ಜಹೀರೋದ್ದಿನ್ ಪಟೇಲ್, ಶರೀಫ್ ಕೊಹಿರ್, ಚಾಂದಪಾಶಾ ಮೋಮಿನ, ಆರಿಫ ಪಟೇಲ, ಜಾಕೀರ ಪಟೇಲ, ಅಕ್ರಮ ಪಟೇಲ್, ಸಮದಾನಿ ಹಶ್ಮಿ, ಸೈಯದ ಉಸ್ಮಾನ, , ತಯ್ಯಬ ಮೋಮಿನ, ರೌಷನ ಅಲಿ ಅಹ್ಮದ ಖಾನ, ಹಾಜಿ ಬಾಬಾ,ದಸ್ತೆಗೀರ, ಗೌಸ, ತೌಸೀಫ್ ಖುರೇಷಿ, ಸೇರಿದಂತೆ ಇತರರು ಇದ್ದರು.