ಭೀಮಣ್ಣ ಸಾಲಿ ಅವರಿಗೆ ಎಂಎಲ್‌ಸಿ ಮಾಡಿ ಕೋಲಿ ಸಮಾಜ ಮನವಿ.
ಭೀಮಣ್ಣ ಸಾಲಿ ಅವರಿಗೆ ಎಂಎಲ್‌ಸಿ ಮಾಡಿ ಕೋಲಿ ಸಮಾಜ ಮನವಿ.
ನಾಗರಾಜ್ ದಂಡಾವತಿ ವರದಿ ಶಹಾಬಾದ್: ಭೀಮಣ್ಣ ಸಾಲಿ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಜನಪ್ರಿಯ ನಾಯಕರಾಗಿದ್ದಾರೆ, 45 ವರ್ಷ ಸತತವಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ, ಹಾಗಾಗಿ ಅವರನ್ನು ಎಂಎಲ್‌ಸಿ ಆಗಿ ಆಯ್ಕೆ ಮಾಡುವ ಮೂಲಕ ಕೂಲಿ ಸಮಾಜಕ್ಕೆ ಸ್ನಾನಮಾನವನ್ನು ನೀಡಿದಂತಾಗುತ್ತದೆ ಎಂದು ಶಹಾಬಾದ್ ತಾಲ್ಲೂಕ ಅಖಿಲ ಭಾರತ ಕೂಲಿ ಸಮಾಜದ ಮಾಜಿ ಅಧ್ಯಕ್ಷ ಗುರುನಾಥ ಗುದ್ಗಲ ಹಾಗೂ ಆಂಜನೇಯ ಜೀವಣಗಿ ಮನವಿ ಮಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭೀಮಣ್ಣ ಸಾಲಿ ಅವರು ಯಾವುದೆ ಅಧಿಕಾರಕ್ಕೆ ಆಸೆ ಪಡದೆ ಸತತವಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿ ಪಕ್ಷವು ಅವರಿಗೆ ಹಲವು ಹುದ್ದೆಗಳನ್ನು ನೀಡಿದೆ. ಯಾವುದೆ ತಾರಾತಮ್ಯ ಭೇದ ಭಾವ ಮಾಡದೆ ಎಲ್ಲರಿಗೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷನಿಷ್ಠೆಯನ್ನು ಮರಿಯದೆ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಅವರು ಕೂಲಿ ಸಮಾಜದವರು ಆಗದಿದ್ದರೂ ಕೂಡ ಎಲ್ಲಾ ಸಮಾಜ ಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದುವ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ, ಅವರಿಗೆ ಎಂಎಲ್‌ಸಿ ಆಗಿ ಆಯ್ಕೆ ಮಾಡುವುದು ಎಲ್ಲಾ ಸಮಾಜ ಬಾಂಧವರು ಅವರ ಅಭಿಮಾನಿಗಳು ಒಮ್ಮತ್ತಿನಿಂದ ಬೆಂಬಲಿಸಿದ್ದಾರೆ ಹಾಗಾಗಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರು ಅವರನ್ನು ಎಂಎಲ್‌ಸಿ ಆಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆಂಜನೇಯ ಜೀವಣಗಿ, ದೇವೀಂದ್ರ ಕಾರೋಳ್ಳಿ, ವಿಜಯಕುಮಾರ ತನ್ನೇಕಾರ, ಮಲ್ಲಿನಾಥ ವಾಲಿಕರ, ಜಗದೇವಪ್ಪ ಬೊಕ್ಕೆ, ಮಲ್ಲಿಕಾರ್ಜುನ ನಾಯ್ಕೋಡಿ, ಮಲ್ಲಿಕಾರ್ಜುನ ಬೋರೆ, ಚೆನ್ನಪ್ಪ ಕೋಬಾಳ, ಶರಣಬಸಪ್ಪ ಶ್ರೀಪತಿ, ದೇವಿಂದ್ರಪ್ಪ ಗುಡ್ಡಾಪುರ, ಸತೀಶ ಗೊರೆಕಲ್, ಶರಣಬಸಪ್ಪ ಮರಗೋಳ ಹಾಗೂ ಇತರರು ಉಪಸ್ಥಿತರಿದ್ದರು
