ಸಚಿವ ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ : ಉಪಾಧ್ಯಕ್ಷ ಅನಿಲ ಜಮಾದಾರ ಒತ್ತಾಯ
ಸಚಿವ ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ : ಉಪಾಧ್ಯಕ್ಷ ಅನಿಲ ಜಮಾದಾರ ಒತ್ತಾಯ
ಚಿಂಚೋಳಿ : ಕಾಂಗ್ರೆಸ್ ಪಕ್ಷದ ವರಿಷ್ಟರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಮಾಜಿ ಸಚಿವ ದೇವೀಂದ್ರಪ್ಪ ಜಮಾದಾರ್ ಪುತ್ರ ಬಾಲಭವನ ಸೊಸೈಟಿ ಉಪಾಧ್ಯಕ್ಷ ಅನಿಲ ದೇವೀಂದ್ರಪ್ಪ ಜಮಾದಾರ್ ಅವರು ಒತ್ತಾಯಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ತಂದೆ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರಂತೆ ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತಗಳು ಅಳವಡಿಸಿಕೊಂಡು ಸರ್ವಜಾತಿ ಜನಾಂಗಗಳನ್ನು ಒಗ್ಗಟಿನಿಂದ ಸಮನಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯದ ಗುಣಗಳು ಹೊಂದಿದ್ದಾರೆ. ಅಲ್ಲದೇ ಖರ್ಗೆ ಉಪ ಮುಖ್ಯಮಂತ್ರಿ ಆದರೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಒತ್ತುಸಿಗುವುದಲ್ಲದೆ, ಪಕ್ಷದ ಸಂಘಟನೆಯು ಬಲಿಷ್ಠಗೊಳಲಿದೆ. ಹಾಗಾಗಿ ಉಪಮುಖ್ಯಮಂತ್ರಿ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ವರಿಷ್ಟರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪರಿಗಣನೆಗೆ ತೆಗೆದುಕೊಳಬೇಕೆಂಬುವುದು ಕಲ್ಯಾಣ ಕರ್ನಾಟಕ ಭಾಗದ ಕಾರ್ಯಕರ್ತರ ಒತ್ತಾಯವಾಗಿದೆ ಎಂದು ಅನಿಲ ಜಮಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
