ಜಮ್ಮೀರ ಅಹ್ಮದ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ
ಜಮ್ಮೀರ ಅಹ್ಮದ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ
ಕಲಬುರಗಿ: ರಾಜ್ಯ ಕಾಂಗ್ರೆಸ್ ಪಕ್ಷ ನೀಡಿದ ಸಚಿವ ಸ್ಥಾನ ವಸತಿ ಇಲಾಖೆಯಿಂದ ಹಿಂದುಳಿದ ವರ್ಗದ ಜನತೆ ಹಾಗೂ ಬಡವರು ಕಾರ್ಮಿಕರು ವರ್ಗದವರಿಗೆ ಅತಿ ಕಡಿಮೆ ಬೆಲೆಯಲ್ಲಿ ಸರ್ಕಾರದಿಂದ ಹಂಚಿಕೆ ಮಾಡುವುದರಲ್ಲಿ ಪ್ರಾಮುಖ್ಯತೆ ಹೊಂದಿರುವ ನಮ್ಮ ಜಮೀರ ಅಹ್ಮದ ಅವರನ್ನು ಸರ್ಕಾರ ರಚನೆ ಆದ ತಕ್ಷಣ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅಭಿಮಾನಿ ಬಳಗದ ಶರಣಕುಮಾರ ಎಂ.ಬಡಿಗೇರ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಎಲ್ಲಾ ಸಮಾಜದ ಜನತೆಗೆ ಸಮಾನ ರೀತಿಯಲ್ಲಿ ನೋಡುವ ಏಕೈಕ ರಾಜಕಾರಣಿ ಮತ್ತು ಕರುನಾಡ ಜನರಿಗೆ ಸರ್ಕಾರದಿಂದ ಬಡವರಿಗೆ ಸರಿಯಾದ ಸಮಯದಲ್ಲಿ ಪರಿಹಾರ ವಂಚಿತರಾದ ಬಡವರಿಗೆ ತಮ್ಮ ಸ್ವಂತ ಕೈಯಿಂದ ಬಂದಿರುವ ಬಡವರಿಗೆ ಸಹಾಯ ಹಸ್ತ ನೀಡಿರುವ ಹೃದಯವಂತ ನಮ್ಮ ಜಮೀರ ಅಹ್ಮದ ಸಾಹೇಬರನ್ನು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡರು.
