ಜಾನಪದ ಸಂಗೀತ ವೈಭವ ಕಾರ್ಯಕ್ರಮ ಮೇ 30ರಂದು
ಜಾನಪದ ಸಂಗೀತ ವೈಭವ ಕಾರ್ಯಕ್ರಮ ಮೇ 30ರಂದು
ಕಲಬುರಗಿ: ಶಿವ ಬಸವ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಜಾನಪದ ಸಂಗೀತ ವೈಭವ” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೇ 30, 2026 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಪ್ರಶಾಂತನಗರದಲ್ಲಿರುವ ಅಮರಪ್ರಿಯಾ ಸಂಗೀತ ನೃತ್ಯ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಟ್ಟೂರೇಶ್ವರ ಶಿವಯೋಗಿಗಳು ವಹಿಸಲಿದ್ದು, ಉದ್ಘಾಟನೆಯನ್ನು ಡಾ. ರಾಜೇಂದ್ರ ಯರನಾಳೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರಪ್ರಿಯಾ ಹಿರೇಮಠ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಸವರಾಜ ಹೂಗಾರ, ಜಗದೀಶ್ವರಿ ಅ. ನಾಶಿ, ಬಸವರಾಜ ಮಾಲಿಪಾಟೀಲ, ಬಾಬುರಾವ ಕೋಬಾಳ ಹಾಗೂ ಕುಶಾಲ ಧರ್ಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ವಿಶ್ವನಾಥ ತೊಟ್ನಳ್ಳಿ ನಡೆಸಲಿದ್ದು, ಸ್ವಾಗತವನ್ನು ಮಲ್ಲಿನಾಥ ಹೂಗಾರ ಮಾಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕು. ವೈಷ್ಣವಿ ಹಿರೇಮಠ ಹಾಗೂ ಮೇಘನಾ ಹಿರೇಮಠ ಅವರಿಂದ ಪ್ರಾರ್ಥನಾ ಗೀತೆ, ಬಸಯ್ಯ ಬಿ. ಗುತ್ತೇದಾರ ಮತ್ತು ತಂಡದಿಂದ ಸುಗಮ ಸಂಗೀತ, ಸೈದಪ್ಪ ಸಪ್ಪನಗೋಳ ಮತ್ತು ತಂಡದಿಂದ ಜಾನಪದ ಗಾಯನ, ಶ್ರೀಶೈಲ ಕೊಂಡೆದ ಮತ್ತು ತಂಡದಿಂದ ವಚನ ಗಾಯನ, ದತ್ತರಾಜ ಕಲಶೆಟ್ಟಿ ಮತ್ತು ತಂಡದಿಂದ ತತ್ವಪದ ಗಾಯನ, ಕು. ಪ್ರೇಮಾ ಡಿಗ್ಗಿ ಹಾಗೂ ಅಂಬಿಕಾ ತಡಕಲ್ ಅವರಿಂದ ದಾಸವಾಣಿ, ಸರೋಜಾ ಜಾಕರೆಡ್ಡಿ ಮತ್ತು ತಂಡದಿಂದ ಭಕ್ತಿಗೀತೆಗಳು ಹಾಗೂ ಸಂಜುಕುಮಾರ ಬರಗಾಲಿ ಮತ್ತು ತಂಡದಿಂದ ಡೊಳ್ಳು ಕುಣಿತ ಪ್ರದರ್ಶನ ನಡೆಯಲಿದೆ.
ವಾದ್ಯ ಸಹಕಾರವನ್ನು ಪ್ರಕಾಶ ಬಿ. ಪೂಜಾರಿ, ವಿನೋದ ದಸ್ತಾಪೂರ, ಸೋಮಶೇಖರ ಕಲ್ಯಾಣಿ ಹಾಗೂ ಶಿವರಾಯ ಉಳ್ಳಿ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವ ಸಾರ್ವಜನಿಕರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷೆ ಜಯಶ್ರೀ ತೊಟ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
