ರಾಜ್ಯಮಟ್ಟದ ಪೌರಾಣಿಕ ಏಕಪಾತ್ರಾಭಿನಯ ಸ್ಪರ್ಧೆ: ಫಲಿತಾಂಶ ಪ್ರಕಟ

ರಾಜ್ಯಮಟ್ಟದ ಪೌರಾಣಿಕ ಏಕಪಾತ್ರಾಭಿನಯ ಸ್ಪರ್ಧೆ: ಫಲಿತಾಂಶ ಪ್ರಕಟ

ರಾಜ್ಯಮಟ್ಟದ ಪೌರಾಣಿಕ ಏಕಪಾತ್ರಾಭಿನಯ ಸ್ಪರ್ಧೆ: ಫಲಿತಾಂಶ ಪ್ರಕಟ

ದಾವಣಗೆರೆ : ರಾಷ್ಟ್ರೀಯ ವೃತ್ತಿ ರಂಗೋತ್ಸವ–2026 ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣವು ಮಾರ್ಚ್ 27 ರಂದು ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಏಕಪಾತ್ರಾಭಿನಯ ಸ್ಪರ್ಧೆಯನ್ನು ಆಯೋಜಿಸಿತ್ತು.

ಈ ಸ್ಪರ್ಧೆಯಲ್ಲಿ ಕೇರಳದ ಕಾಸರಗೋಡು ಸೇರಿದಂತೆ ಕರ್ನಾಟಕದ ಸುಮಾರು 20 ಜಿಲ್ಲೆಗಳಿಂದ ಕಲಾವಿದರು ಭಾಗವಹಿಸಿದ್ದರು. ಪ್ರತಿ ಸ್ಪರ್ಧಿಗೆ 10 ನಿಮಿಷಗಳ ಅವಧಿಯಲ್ಲಿ ಪೌರಾಣಿಕ ಪಾತ್ರಗಳನ್ನು ಅಭಿನಯಿಸುವ ಅವಕಾಶ ನೀಡಲಾಗಿತ್ತು.

 ತೀರ್ಪುಗಾರರ ತೀರ್ಪಿನ ಮೇರೆಗೆ  ಉತ್ತಮ ಅಭಿನಯ ಪ್ರದರ್ಶಿಸಿದ ಕಲಾವಿದರು ಬಹುಮಾನಗಳಿಗೆ ಆಯ್ಕೆಯಾಗಿದ್ದು, 

ಪ್ರಥಮ ಬಹುಮಾನ ರೂ. 25,000/-ಮಹಾದೇವ ಬಾಗಲಕೋಟ,

ದ್ವಿತೀಯ ಬಹುಮಾನ 15,000/- ಕು. ಗೋಪಿಕಾ ಗೋವಿಂದಸ್ವಾಮಿ ಬೆಂಗಳೂರು,

ತೃತೀಯ ಬಹುಮಾನ ರೂ. 10,000/- ಶ್ರೀಮತಿ ಸಿ. ಕಾಶಿಬಾಯಿ, ದಾವಣಗೆರೆ,

ಸಮಾಧಾನಕರ ಬಹುಮಾನ ರೂ. 5,000/- ಶಿವಕುಮಾರ್ ಎಸ್ ಬೆಂಗಳೂರು ಉತ್ತರ, .

ಪಡೆದಿದ್ದಾರೆ ಎಂದು ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ -ತಿಳಿಸಿದ್ದಾರೆ.

ಕಾರ್ಯಕ್ರಮವು ರಂಗಭೂಮಿ ಕಲಾವಿದರ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲ್ಪಟ್ಟಿದ್ದು, ಭಾಗವಹಿಸಿದ ಕಲಾವಿದರ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.