ಅಂಡಗಿ ಮುಡಿಗೆ “ಗುರುಸೇವಾ ರತ್ನ” ಪ್ರಶಸ್ತಿ
ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ನಿಮಿತ್ತ ರಾಷ್ಟ್ರೀಯ “ಗುರುಸೇವಾ ರತ್ನ” ಪ್ರಶಸ್ತಿ ಪ್ರಧಾನ
ಕಲಬುರಗಿ : ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಅಂಗವಾಗಿ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾದ ರಾಷ್ಟ್ರೀಯ “ಗುರುಸೇವಾ ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಮಾಜಸೇವಕ ಹಾಗೂ ವಿದ್ಯಾನಗರ ವೇಲ್ಫೇರ್ ಸೋಸಾಯಿಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಅವರಿಗೆ ರಾಷ್ಟ್ರೀಯ “ಗುರುಸೇವಾ ರತ್ನ” ಪ್ರಶಸ್ತಿ ಪ್ರದಾನಿಸಲಾಯಿತು.
ಅಂಡಗಿ ಪ್ರತಿಷ್ಠಾನದ ವತಿಯಿಂದ ಅನೇಕ ವರ್ಷಗಳಿಂದ ವಚನಾಧಾರಿತ ವಿಶೇಷ ಭಜನಾ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು, ವಿವಿಧ ದೇವಾಸ್ಥಾನಗಳ ಅಧ್ಯಕ್ಷರು, ಭಜನಾ ಮಂಡಳಿ ಪದಾಧಿಕಾರಿಗಳು ಹಾಗೂ ಜಾತ್ರಾ ಸಂದರ್ಭಗಳಲ್ಲಿ ಧಾರ್ಮಿಕ ಸೇವೆ ಸಲ್ಲಿಸಿದ ಸೇವಕರನ್ನು “ಸೇವಾಶ್ರೀ” ಪ್ರಶಸ್ತಿಯ ಮೂಲಕ ಗೌರವಿಸುವಂತಹ ಸಮಾಜಮುಖಿ ಕಾರ್ಯಗಳನ್ನು ಶಿವರಾಜ ಅಂಡಗಿ ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ದೇವಾಸ್ಥಾನಗಳ ಹುಂಡಿಯಲ್ಲಿ ಭಕ್ತರು ಸಲ್ಲಿಸುವ ಕಾಣಿಕೆ ಹಣವನ್ನು ದೇವಾಸ್ಥಾನಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಬೇಕು ಎಂಬ ಕುರಿತು ಸರ್ಕಾರಕ್ಕೆ ಸಲಹೆ ನೀಡಿರುವುದು ಸೇರಿದಂತೆ ಅವರು ಸಲ್ಲಿಸಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುಟ್ಟರಾಜ ಗವಾಯಿ ಸಮಗ್ರ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದರೂಢ ಅವರಳ್ಳಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಲ್ಲಿನಾಥ ದೇಶಮುಖ,ಸತೀಶಚಂದ್ರ ಸುಲೇಪೇಠ, ಅಮೃತರಾವ ಅಣೂರ ಕವಿಗಳು, ಬಸವಂತರಾವ ಕೋಳಕೂರ, ಬಸವರಾಜ ಚೇಗಂಟಿ, ಹೆಚ್.ಎಸ್. ಬರಗಾಲಿ, ಪತ್ರಕರ್ತರಾದ ಬಾಬುರಾವ ಕೋಬಾಳ, ಸಿದ್ರಾಮ ರಾಜಮಾನೆ, ರೋಹಿತ ವಾಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
