ವೈದ್ಯೋ ನಾರಾಯಣೋ ಹರಿ; ವೈದ್ಯ ಸೇವೆ ಮಹತ್ತರವಾದುದು : ಆರ್. ಅಶೋಕ್

ವೈದ್ಯೋ ನಾರಾಯಣೋ ಹರಿ; ವೈದ್ಯ ಸೇವೆ ಮಹತ್ತರವಾದುದು : ಆರ್. ಅಶೋಕ್

 ವೈದ್ಯೋ ನಾರಾಯಣೋ ಹರಿ; ವೈದ್ಯ ಸೇವೆ ಮಹತ್ತರವಾದುದು : ಆರ್. ಅಶೋಕ್

ಬೆಂಗಳೂರು : “ತಂದೆ-ತಾಯಿಯವರ ಕನಸನ್ನು ನನಸಾಗಿಸುವ ಕಾರ್ಯವನ್ನು ವೈದ್ಯ ವಿದ್ಯಾರ್ಥಿಗಳು ಮಾಡಿದ್ದಾರೆ. ಒಬ್ಬ ರೋಗಿಯ ಜೀವನದಲ್ಲಿ ಅನಾರೋಗ್ಯ ಬಂದಾಗ ವೈದ್ಯರು ಭಯ ನಿವಾರಣೆ ಮಾಡಿ ಆತ್ಮವಿಶ್ವಾಸ ತುಂಬಿ, ಸರಿಯಾದ ಚಿಕಿತ್ಸೆ ನೀಡಿದಾಗ ಮಾತ್ರ ಆ ಬದುಕಿಗೆ ಹೊಸ ಆಶಾಕಿರಣ ದೊರೆಯುತ್ತದೆ. ಆದ್ದರಿಂದ ವೈದ್ಯಕೀಯ ಸೇವೆ ಅತ್ಯಂತ ಪವಿತ್ರವಾದುದು” ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.

ನಗರದ ಕೆಂಗೇರಿಯ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪದವಿ ಪ್ರದಾನ (ಗ್ರಾಜುಯೇಷನ್) ಸಮಾರಂಭದಲ್ಲಿ ಅವರು ಮಾತನಾಡಿದರು.

“ನಾನು ಸಚಿವನಾಗಿದ್ದ ಸಂದರ್ಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಅನುದಾನ ಒದಗಿಸಿ, ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದೆ” ಎಂದು ಅವರು ಸ್ಮರಿಸಿದರು.

ವೈದ್ಯರು ಕೇವಲ ಉದ್ಯೋಗಕ್ಕಾಗಿ ಅಲ್ಲ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಕಾಶ ಸ್ವಾಮೀಜಿ, ಡಾ. ವೆಂಕಟರಮಣ ಹಾಗೂ ಡಾ. ಭಗವಾನ್ ರಾಜು ಸೇರಿದಂತೆ ಗಣ್ಯರು ಉಪಸ್ಥಿತರಿದ್ದು, ಪದವಿ ಪಡೆದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.

ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.