ಸಂಸ್ಕಾರವು ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ:ಡಾ.ಗುರುಮೂರ್ತಿ ಶಿವಾಚಾರ್ಯರು
ಸಂಸ್ಕಾರವು ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ:ಡಾ.ಗುರುಮೂರ್ತಿ ಶಿವಾಚಾರ್ಯರು
ಕಲಬುರಗಿ: ಸಂಸ್ಕಾರವಂತ ಮನುಷ್ಯನು ತನ್ನ ಬದುಕಿನುದ್ದಕ್ಕೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಾನೆ.ಸಮಾಜದಲ್ಲಿ ಅವನನ್ನು ನೋಡುವ ದೃಷ್ಟಿ ಬೆರೆ ಆಗಿರುತ್ತದೆ.ಸಂಸ್ಕಾರವು ಮನುಷ್ಯನ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ಪಾಳಾ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಗುರುಮೂರ್ತಿ ಶಿವಾಚಾರ್ಯರು ತಿಳಿಸಿದರು.
ಜಯನಗರ ಶಿವಮಂದಿರಲ್ಲಿ ಸೋಮವಾರ ಸಂಜೆ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ 11 ದಿನಗಳ ಶಿಬಿರದ ಸಮಾರೋಪ ಸಮಾರಂಭ ಹಾಗೂ 50 ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಬಾಲ್ಯದಿಂದಲೇ ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಟ್ಟರೆ ಕೆಟ್ಟ ದಾರಿ ತುಳಿಯುದಿಲ್ಲ.ತಾನು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಶಕ್ತನಾಗುತ್ತಾನೆ ಎಂದು ನುಡಿದ ಅವರು ಶಿವಮಂದಿರದಲ್ಲಿ ಜರುಗುವ ನಿರಂತರ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಸಮಾಜಕ್ಕೆ ಪ್ರೇರಣೆಯಾಗಿವೆ.ಧರ್ಮ ಕಾರ್ಯಗಳಿಗೆ ತಾವು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ಮಾತನಾಡಿ ನಮ್ಮ ದೇಶದ ಇತಿಹಾಸದಲ್ಲಿ ಕಂಡುಬರುವ ಸಾಧನೆಗೈದ ಮಹಾ ಪುರುಷರು ಸಂಸ್ಕಾರ ಪಡೆದವರೇ ಆಗಿದ್ದಾರೆ.ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹಕ್ಕೆ ಬಲಿಯಾಗದೆ ಮನುಷ್ಯತ್ವ ಹೇಳಿಕೊಡುವ ಸನಾತನ ಸಂಸ್ಕೃತಿ ಕಲಿಯಬೇಕು.ಆಂಗ್ಲ ಭಾಷೆಯ ಶಾಲೆಗಳಲ್ಲಿ ತಂದೆ ತಾಯಿ,ಗುರು ಹಿರಿಯರೆಂಬ ಗೌರವ ಪೂರ್ವಕ ಪಾಠ ಹೇಳಿಕೊಡುವುದಿಲ್ಲ,ಅಂಥ ಶಾಲೆಗಳು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ರಾಷ್ಟೋತ್ಥಾನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕೃಷ್ಣಾ ಜೋಶಿ ಮಾತನಾಡಿ ಮನೆಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಮನೆಗಳಲ್ಲಿ ಮಕ್ಕಳಿಗೆ ಸಕಾರಾತ್ಮಕ ಯೋಚನೆಗಳು ಮೂಡುವಂತಿರಬೇಕು.ಸಂಸ್ಕಾರ ವ್ಯಕ್ತಿಯ ನಡುವಳಿಕೆ ತಿಳಿಸಿಕೊಟ್ಟರೆ, ಸಂಸ್ಕ್ರತಿಯೂ ಜೀವನ ಶೈಲಿ,ಉಡುಗೆ ತೊಡುಗೆ ಮತ್ತು ಆಚರಣೆಗಳು ಆಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಮೌಲ್ಯಗಳು ಮತ್ತು ಕುಟುಂಬಗಳು ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಹಿರಿಯ ಸದಸ್ಯರಾದ ಎಂ.ಡಿ.ಮಠಪತಿ,ವೇದ ಮೂರ್ತಿ ಶಿವರುದ್ರಯ್ಯ ಮಠಪತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಶಿಬಿರದಲ್ಲಿ ಪಾಲ್ಗೊಂಡ ವಿಧ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.ಸಾಹಿತಿ ಜಿ.ಜಿ.ವಣಿಕ್ಯಾಳ ನಿರೂಪಿಸಿದರು.
ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ,ಕೋಶಾಧ್ಯಕ್ಷ ಬಸವರಾಜ ಮಾಗಿ,ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ, ಗುರುಪಾದಪ್ಪ ಕಾಂತಾ,ಮನೋಹರ ಬಡಶೇಷಿ, ಮಲ್ಲಯ್ಯ ಸ್ವಾಮಿ ಗಂಗಾಧರಮಠ ,ಬಸವರಾಜ ಪುರ್ಮಾ, ವೀರಪ್ಪ ಹುಡುಗಿ,ಎಸ್.ಡಿ.ಸೇಡಂಕರ, ನೇಮಿನಾಥ ಜೈನ್, ಮಲ್ಲಯ್ಯ ಸ್ವಾಮಿ ಬೀದಿಮನಿ, ಶಿವಕುಮಾರ ಪಾಟೀಲ,ಭೀಭಶೆಟ್ಟಿ ಮುಕ್ಕಾ, ಗಿರೀಶಗೌಡ ಇನಾಂದಾರ್, ವೀರಣ್ಣ ಇಂಡಿ, ಪ್ರಭು ಪಾಟೀಲ, ಶಶಿಕಾಂತ ಪಾಟೀಲ,ಮಹಿಳಾ ಕಾರ್ಯದರ್ಶಿಗಳಾದ ಅನುರಾಧಾ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ, ವಿಜಯಾ ಚವ್ಹಾಣ್,ಟ್ರಸ್ಟ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಉಪಾಧ್ಯಕ್ಷೆ ಅನಿತಾ ನವಣಿ, ಸುಷ್ಮಾ ಮಾಗಿ, ಸುರೇಖಾ ಬಾಲಕೊಂದೆ, ಗೀತಾ ಸಿರಗಾಪೂರ, ಗೀತಾ ಹುಡುಗಿ, ಶೈಲಜಾ ಬೊಮ್ಮಣ, ಗಂಗಾ ಅನ್ವರಕರ ಸೇರಿದಂತೆ ವಿವಿಧ ಬಡಾವಣೆಗಳ ಅನೇಕ ಮಹಿಳೆಯರು, ಹಿರಿಯರು ಭಾಗವಹಿಸಿದ್ದರು.
