ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಸಂಘದ ೧೧ನೇ ವಾರ್ಷಿಕೋತ್ಸವ ನಿಮಿತ್ತ ವಿದ್ಯಾರ್ಥಿ ರತ್ನ ಹಾಗೂ ಸಾಧಕ ರತ್ನ ಪ್ರಶಸ್ತಿ ಪ್ರಧಾನ

ಕಲಬುರಗಿ : ನಗರದ ಡಾ. ಎಸ್.ಎಂ. ಪಂಡಿತ ರಂಗಮAದಿರದಲ್ಲಿ ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಹಾಗೂ ಸಾಂಸ್ಕೃತಿಕ ನೃತ್ಯ ಸಂಘ ವತಿಯಿಂದ ೧೧ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿ ರತ್ನ ಹಾಗೂ ಸಾಧಕ ರತ್ನ ೨೦೨೬ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.

 ಈ ಸಂದರ್ಭದಲ್ಲಿ ಡಾ. ಸುರೇಶ ಶರ್ಮಾ, ಡಾ. ಅಮರೇಶ್ವರಿ ಬಾಬುರಾವ ಚಿಂಚನಸೂರ, ನೀಲಕಂಠರಾವ ಮೂಲಗೆ, ನಟಿ ಕಾವ್ಯ, ಸಂಘದ ಸಂಸ್ಥಾಪಕ ಅಧ್ಯಕ್ಷ ಗುರು ಬಂಡಿ, ಉದ್ಯಮಿದಾರ ಅಭಿಷೇಕ ಬಾಲಾಜಿ, ಡಾ. ಸಿದ್ದು ಪಾಟೀಲ್, ಡಾ. ಸಂಪತ ಹಿರೇಮಠ, ಶ್ಯಾಮ್ ಕಂದೇವಾಲ, ಡಾ. ಸುನೀಲ್ ರಾರೋಡ, ಶೃತಿ ಹತ್ತಿ, ನಾಗೇಶ ಪಾಟೀಲ್ ಅಷ್ಟೂರ, ಸುರೇಂದ್ರ ನರೋಣಾಕರ್, ವಿಜಯಕುಮಾರ ಎಸ್. ಕಟ್ಟಿಮನಿ, ಜಯಶ್ರೀ ಬಿರದಾರ, ಎಂ.ಎ. ಸಿದ್ದಿಕಿ, ಸುಪ್ರಿಯಾ ಎ, ಅಲ್ಲಮಪ್ರಭು ಮಠಪತಿ, ಹಾಗೂ ಭೀಮರಾವ್ ಎಸ್. ಹಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಕಲಾ ತಂಡಗಳು ನೃತ್ಯ ಹಾಗೂ ಸಂಗೀತ ಪ್ರದರ್ಶನ ನೀಡಿದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸಾಧಕ ರತ್ನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಸಂಘದ ಪದಾಧಿಕಾರಿಗಳು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.