ಮಳೆ,ಗಾಳಿ ಆರ್ಭಟಕ್ಕೆ ಮುರಿದು ಬಿದ್ದ ಸಗರ ತರಕಾರಿ ಮಾರುಕಟ್ಟೆ ಶೇಡ್
ಮಳೆ,ಗಾಳಿ ಆರ್ಭಟಕ್ಕೆ ಮುರಿದು ಬಿದ್ದ ಸಗರ ತರಕಾರಿ ಮಾರುಕಟ್ಟೆ ಶೇಡ್
ಶಹಾಪುರ : ಕಳೆದೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಸಗರದ ಹಳೆ ತರಕಾರಿ ಮಾರುಕಟ್ಟೆ ಮೇಲ್ಚಾವಣಿ ಸಂಪೂರ್ಣ ಸೀಟ್ ಮತ್ತು ಕಂಬಗಳು ಮುರಿದು ಬಿದ್ದಿವೆ.
ಈ ಘಟನೆ ಜನನಿಬಿಡ ಪ್ರದೇಶ ಅಂದರೆ ಸಗರದ ಬಜಾರ್ ನಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಜರುಗಿದ್ದು,ಇದನ್ನು ತೆರವುಗೊಳಿಸದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೇಜವಾಬ್ದಾರಿ ವಹಿಸಿದ್ದಾರೆ ಎಂದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಿವಶರಣ ಕೂಡ್ಲೂರು ಆರೋಪಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಈ ಸೆಡ್ ಕೂಡಲೇ ತೆರವುಗೊಳಿಸಬೇಕೆಂದು ಈ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
