ಕೋಳಕೂರ ಗ್ರಾಮದಲ್ಲಿ ತೊಗರಿ ಬೀಜಗಳ ಮಿನಿ ಕಿಟ್ ವಿತರಣೆ
ಕೋಳಕೂರ ಗ್ರಾಮದಲ್ಲಿ ತೊಗರಿ ಬೀಜಗಳ ಮಿನಿ ಕಿಟ್ ವಿತರಣೆ
ಜೇವರ್ಗಿ,: ತಾಲೂಕಿನ ಕೋಳಕೂರ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆತ್ಮನಿರ್ಭರ ಯೋಜನೆಯಡಿ -152 ತಳಿಯ ತೊಗರಿ ಬೀಜಗಳ (ಮಿನಿ ಕಿಟ್) ವಿತರಣೆ ಮಾಡಲಾಯಿತು.
ಕೃಷಿ ಇಲಾಖೆ ಅಧಿಕಾರಿ ರಾಜು ಪವಾರ್, ಮಾತನಾಡಿ,ಈ ವರ್ಷ ಮಳೆಯ ಕೊರತೆಯಿಂದಾಗಿ ಅನೇಕ ರೈತರು ಬಿತ್ತನೆ ಕಾರ್ಯದಿಂದ ದೂರ ಉಳಿದಿದ್ದಾರೆ. ಆದರೆ ಹವಾಮಾನ ಇಲಾಖೆ ಮಳೆ ಆರಂಭವಾಗುವ ಮುನ್ಸೂಚನೆ ನೀಡಿರುವುದರಿಂದ ರೈತರು ವಿಳಂಬ ಮಾಡದೆ ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದರು.
ಸರಕಾರ ಕೃಷಿ ಇಲಾಖೆಯ ಮೂಲಕ ಒದಗಿಸುತ್ತಿರುವ ಗುಣಮಟ್ಟದ ಬೀಜ ಹಾಗೂ ವಿವಿಧ ಕೃಷಿ ಸೌಲಭ್ಯಗಳನ್ನು ರೈತರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕೃಷಿ ಅಧಿಕಾರಿ ಬಸವರಾಜ ಬಿರಾದರ್, ಬಿಟಿಎಂ ಸಿದ್ದರಾಮ ಪೂಜಾರಿ, ಕೃಷಿ ಸಂಜೀವಿನಿ ವಾಹನ ಚಾಲಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸವಂತರಾಯ ಎ. ಕೋಳಕೂರ, ಮಲ್ಲಿನಾಥ ಕುಲಕರ್ಣಿ, ಈರಣ್ಣ ಯಾದವ್, ರವಿ ಅಡಿಗಿಲ್, ಸಿದ್ದು ಕೂಡಿ, ಶಿವಲಿಂಗಪ್ಪ ಶಂಕಾ, ಈರಣ್ಣ ಉದನೂರು ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.ರೈತರು ಮಿನಿ ಕಿಟ್‌ಗಳನ್ನು ಪಡೆದುಕೊಂಡರು.
