ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿನಿಯರಿಗೆ ಚೇತನ್ ಯೂತ್ ಫಾರಂನಿಂದ ಅದ್ದೂರಿ ಸನ್ಮಾನ

ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿನಿಯರಿಗೆ ಚೇತನ್ ಯೂತ್ ಫಾರಂನಿಂದ ಅದ್ದೂರಿ ಸನ್ಮಾನ

ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿನಿಯರಿಗೆ ಚೇತನ್ ಯೂತ್ ಫಾರಂನಿಂದ ಅದ್ದೂರಿ ಸನ್ಮಾನ

ಕಲಬುರ್ಗಿ, 10 ಮೇ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಪೂರ್ವ ಸಾಧನೆಗೈದು ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಕೀರ್ತಿ ತಂದ ವಿದ್ಯಾರ್ಥಿನಿಯರಿಗೆ ಚೇತನ್ ಯೂತ್ ಫಾರಂ ವತಿಯಿಂದ ಆತ್ಮೀಯ ಅಭಿನಂದನಾ ಹಾಗೂ ಸನ್ಮಾನ ಸಮಾರಂಭವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.

  ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಸೃಷ್ಟಿ ಮಲ್ಲಿನಾಥ್, ಹಾಗೂ ಕಲಬುರ್ಗಿ ಜಿಲ್ಲೆಗೆ ಆರನೇ ಸ್ಥಾನ ಪಡೆದ ಕುಮಾರಿ ಪ್ರೀತಿ ಬಸವರಾಜ್, ಅವರನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿನಿಯರ ಸಾಧನೆಯನ್ನು ಗುರುತಿಸಿ, ಚೇತನ್ ಪ್ರೌಢಶಾಲೆಯ 1999ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಸಂಪಾದಕೀಯ ರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಶರಣರರಾಜ್ ಚಪ್ಪರಬಂದಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ,ವಿದ್ಯಾರ್ಥಿನಿಯರ ಪರಿಶ್ರಮ, ಶಿಸ್ತು ಹಾಗೂ ಗುರಿನಿಷ್ಠೆಯೇ ಈ ಮಹತ್ವದ ಸಾಧನೆಗೆ ಕಾರಣವಾಗಿದ್ದು, ಇವರು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ಶ್ಲಾಘಿಸಿದರು. 

ಇವರ ಸಾಧನೆಯು ಕಲಬುರ್ಗಿ ಜಿಲ್ಲೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀಮತಿ ಕವಿತಾ ಶೀಲವಂತ್ ಅವರು ಸಮಾರಂಭವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸತೀಶ್ ಹಿರೇಮಠ ಅವರು ವಂದನಾರ್ಪಣೆ ಸಲ್ಲಿಸಿದರು.

ಚೇತನ್ ಪ್ರೌಢಶಾಲೆಯ 1999ನೇ ಸಾಲಿನ ಹಳೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಾಧಕ ವಿದ್ಯಾರ್ಥಿನಿಯರ ಯಶಸ್ಸನ್ನು ಸಂಭ್ರಮದಿಂದ ಆಚರಿಸಿದರು. ಈ ಸನ್ಮಾನ ಸಮಾರಂಭವು ವಿದ್ಯಾರ್ಥಿನಿಯರ ಸಾಧನೆಗೆ ಗೌರವ ಸೂಚಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕ ಕ್ಷಣವಾಗಿ ಮೂಡಿಬಂದಿತು.