ಅಸ್ಪರ್ಶತಾ ನಿವಾರಣೆ ಕುರಿತು ವಿಚಾರಗೋಷ್ಠಿ, ಕಾರ್ಯಗಾರ ಮತ್ತು ಬೀದಿ ನಾಟಕ|
|ಅಸ್ಪರ್ಶತಾ ನಿವಾರಣೆ ಕುರಿತು ವಿಚಾರಗೋಷ್ಠಿ, ಕಾರ್ಯಗಾರ ಮತ್ತು ಬೀದಿ ನಾಟಕ|
ದಲಿತರು ಶಿಕ್ಷಿತರಾದಾಗ ಮಾತ್ರ ಅಸ್ಪಶ್ಯತೆ ಆಚರಣೆ ತಡೆಯಲು ಸಾಧ್ಯ
ಶಹಾಬಾದ : - ದಲಿತರು ಶಿಕ್ಷಣವಂತರಾದಾಗ ಮಾತ್ರ ಈ ಅಸ್ಪಶ್ಯತೆ ಆಚರಣೆ ತಡೆಯಲು ಸಾಧ್ಯ ಎಂದು ಪ್ರತಿಷ್ಠಾಪನ ಸಂಸ್ಥೆಯ ನಿರ್ದೇಶಕರಾದ ವಿಠಲ್ ಚಿಕಣಿ ಯವರು ಹೇಳಿದರು.
ಅವರು ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಯಾ ವೇಲ್ಫೆರ್ ಸೂಸೈಟಿ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಅಸ್ಪರ್ಶತಾ ನಿವಾರಣೆ ಕುರಿತು ಕಾರ್ಯಗಾರ ಮತ್ತು ಬೀದಿ ನಾಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟದಿಂದ ದಲಿತ, ಹಿಂದುಳಿದ ಜನಾಂಗದವರಿಗೆ ನ್ಯಾಯ ಒದಗಿಸಿಕೊಟ್ಟಂತಹ ಸಂಘಟನೆಯಾಗಿದೆ, ಶಿಕ್ಷಣ ಕೇವಲ ನೌಕ್ರಿಗಾಗಿ ಬೇಡ, ಪ್ರಜ್ಞಾವಂತರಾಗಲು ದಲಿತರು ಶಿಕ್ಷಣ ಪಡೆಯಬೇಕು ಹಾಗೆ ಅಸ್ಪೃಶ್ಯತೆ ಆಚರಣೆ ಕುರಿತು ದಲಿತರಿಂದ ದಲಿತರಿಗೆ ಹೇಳುವಂತಾಗಬಾರದು, ಎಲ್ಲಾ ಜಾತಿ ಧರ್ಮದವರನ್ನ ಸೇರಿಸಿ ಅರಿವು ಮೂಡಿಸುವ ಕೆಲಸವಾಗಬೇಕು ಆಗ ಮಾತ್ರ ಸಮಾನತೆ, ಸಹೋದರತೆ ತರಲು ಸಾಧ್ಯ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ದೈಹಿಕ ಅಸ್ಪೃಶ್ಯತೆ ಆಚರಣೆ ಇಲ್ಲದಿದ್ದರೂ ಕೂಡ, ಮಾನಸಿಕ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದೆ, ನಮ್ಮ ಮಕ್ಕಳನ್ನ ಆಧುನಿಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನ ತಿಳಿಸಬೇಕಾಗಿದೆ, ಸಾಹು, ಫುಲೆ, ನಾರಾಯಣ ಗುರು, ಪೇರಿಯಾರ್ ಅಂತಹವರ ವಿಚಾರಗಳನ್ನ ತಿಳಿ ಹೇಳಬೇಕಾಗಿದೆ, ಈಗಿನ ಮನುವಾದಿಗಳು ಸಂವಿಧಾನದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಇದರ ವಿರುದ್ಧ ನಾವುಗಳೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ, ನಮ್ಮ ಜನಾಂಗದ ನವ ಯುವಕರು ಮೊಬೈಲ್, ಟಿವಿಗಳನ್ನ ನೋಡಬೇಡಿ ಪುಸ್ತಕಗಳನ್ನ ಮಾತ್ರ ನೋಡಿರಿ, ದಲಿತ ಜನಾಂಗದ ಯುವಕರು ಹಸಿರು ಇಂಕಿನ ಪೆನ್ನಿನ ಮೂಲಕ ಸಹಿ ಮಾಡುವಂತರಾಗ ಬೇಕು ಎಂದು ಡಾ. ಅಂಬೇಡ್ಕರ್ ಅವರು ಕನಸು ಕಂಡಿದ್ದರು ಎಂದು ಹೇಳಿದರು.
ವೇದಿಕೆ ಮೇಲೆ ರವಿಕುಮಾರ ಮುತ್ತಗಿ, ಎಂಎನ್ ಸುಗಂಧಿ, ಕೃಷ್ಣಪ್ಪ ಕರಣಿಕ, ಭರತ ಧನ್ನಾ, ಮಹಾದೇವ ತರನಳ್ಳಿ ವೀರಣ್ಣ ಬೆಣ್ಣೆಸಿರೂರ, ಶಂಕರ ಜಾನ ಇದ್ದರು.
ಅಸ್ಪರ್ಶತೆ ಕುರಿತು ಪ್ರಭುಲಿಂಗ ರವರ ಲೋಹಿಯಾ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಸತೀಶ ಕೋಬಾಳಕರ, ಸುಭಾಷ ಸಾಕ್ರೆ, ಭೀಮಾಶಂಕರ ಕಾಂಬಳೆ, ಪರಶುರಾಮ ಸಂಕನೂರ, ರಾಕೇಶ ಜಾಯಿ, ನರಸಿಂಹಲು ರಾಯಚೂರಕರ ಮತ್ತು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಅನೇಕ ಜನ ಉಪಸ್ಥಿತರಿದರು.
ತಿಪ್ಪಣ್ಣ ಧನೇಕರ ಸ್ವಾಗತಿಸಿ ನಿರೂಪಿಸಿದರು, ವೀರಣ್ಣ ಬೆಣ್ಣೆಸಿರೂರ ವಂದಿಸಿದರು.
