24 ರಂದು ಕಲಬುರ್ಗಿಯಲ್ಲಿ ಐದು ಕೃತಿಗಳ ಲೋಕಾರ್ಪಣೆ
24 ರಂದು ಕಲಬುರ್ಗಿಯಲ್ಲಿ ಐದು ಕೃತಿಗಳ ಲೋಕಾರ್ಪಣೆ
ಕಲಬುರ್ಗಿ : ಜೈ ಸಂತೋಷಿ ಮಾತಾ ಪ್ರಕಾಶನ ಹಾಗೂ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ ಉಪಳಾಂವ ಇವರ ಸಹಯೋಗದಲ್ಲಿ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ಮೇ 24ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ ಹಿರಿಯ ಪ್ರಾಥಮಿಕ ಶಾಲೆ, ಕೆಐಡಿಬಿ 2ನೇ ಹಂತ, ಉಪಳಾಂವದಲ್ಲಿ ನಡೆಯಲಿದೆ.
ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಷ.ಬ್ರ. ಡಾ. ರಾಜಶೇಖರ ಶಿವಾಚಾರ್ಯರು ವಹಿಸಲಿದ್ದು, ಉದ್ಘಾಟನೆಯನ್ನು ಆಳಂದ ತಹಸೀಲ್ದಾರರಾದ ಅಣ್ಣಾರಾವ ಎಸ್. ಪಾಟೀಲ್ ನೆರವೇರಿಸಲಿದ್ದಾರೆ. ಐದು ಕೃತಿಗಳ ಮುಡಬಿ ಗುಂಡೇರಾವ್ ಅವರು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಮುಖ್ಯಗುರುಗಳಾದ ಜ್ಯೋತಿ ಪಿ. ಪಾಟೀಲ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಂಕ್ರೇಮ್ಮ ಡಾವಳಗಿ, ಯಾದಗಿರಿಯ ಉಪನಿರ್ದೇಶಕರಾದ ಚೆನ್ನಬಸಪ್ಪ ಮೂದೋಳ, ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜಾರಾತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ತೆಗಲತಿಪ್ಪಿ ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ರೇಣುಕಾ ಡಾಂಗೆ, ವೆಂಕಟೇಶ್ ಬಿ. ಚಿನ್ನೂರ, ಮಹಾದೇವಿ ಪಾಟೀಲ್, ಷಣ್ಮುಖಯ್ಯ ಸ್ವಾಮಿ ಹಾಗೂ ಮಾಲಾ ಹೆಚ್. ಕಣ್ಣಿ ಉಪಸ್ಥಿತರಿರಲಿದ್ದಾರೆ.
“ಎಡಚರು”, “ಸಾಹಿತ್ಯ ಸುಗಂಧ”, “ಲೇಖನ ಲೋಕದ ದೀಪಗಳು” ಕೃತಿಗಳನ್ನು ಪ್ರಭಾಕರ್ ಜೋಷಿ ಪರಿಚಯಿಸಲಿದ್ದು, “ಚಂದದ ಕನ್ನಡ ನುಡಿ”, “ಮುಂಜಾನೆಯ ಮಾತುಗಳು” ಕೃತಿಗಳನ್ನು ಪರಮಾನಂದ ಸರಸಾಂಬಿ ಪರಿಚಯಿಸಲಿದ್ದಾರೆ. “ಮಳೆ ಬಿಲ್ಲು” ಕವನ ಸಂಕಲನವನ್ನು ಎ. ಹರೀಶ್ ಡೋಂಗ್ರೆ ಪರಿಚಯಿಸಲಿದ್ದಾರೆ.
“ಎಡಚುಗೈ” ಸಾಧಕರಿಗೆ ಹಾಗೂ ಪ್ರಕಾಶಕರಾದ ಡಾ. ಅಂಬುಜಾ ಎನ್. ಮಳಖೇಡ್ಕರ್ ಮತ್ತು ಚೈತ್ರಾ ಅವರಿಗೆ ಸನ್ಮಾನ ನಡೆಯಲಿದೆ. ಜೊತೆಗೆ “ಎಡಚರು” ಕೃತಿ ಸಂಪಾದಕ ಮಂಡಳಿಯವರಿಗೂ ಗೌರವ ಸನ್ಮಾನ ಏರ್ಪಡಿಸಲಾಗಿದೆ.
“ಶ್ಯಾಲು, ಹಾರ, ಟೋಪಿ ಸನ್ಮಾನ ಬೇಡ, ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ” ಎಂಬ ವಿಶೇಷ ಮನವಿಯನ್ನು ಆಯೋಜಕರು ಮಾಡಿದ್ದಾರೆ.
ಈ ಕುರಿತು ಶಿಕ್ಷಕರು ಹಾಗೂ ಸಾಹಿತಿಗಳಾದ ಚಂದ್ರಕಲಾ ಎಮ್. ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
