ಗುಲಬರ್ಗಾ ವಿವಿ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸಲು ಶಿವ ಅಷ್ಟಗಿ ಅಗ್ರಹ

ಗುಲಬರ್ಗಾ ವಿವಿ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸಲು ಶಿವ ಅಷ್ಟಗಿ ಅಗ್ರಹ

ಗುಲಬರ್ಗಾ ವಿವಿ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸಲು ಶಿವ ಅಷ್ಟಗಿ ಅಗ್ರಹ 

ಕಲಬುರಗಿ :ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಮತ್ತೆ ಮುಂದುವರಿಸಿ ನ್ಯಾಯ ಒದಗಿಸಬೇಕೆಂದು ಬಿಜೆಪಿ ಯುವ ಮೋರ್ಚಾ ಮುಖಂಡ ಶಿವ ಅಷ್ಟಗಿ ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗದಲ್ಲಿ ಕಳೆದ 18 ದಿನಗಳಿಂದ ನೌಕರರ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ 281 ಹೊರಗುತ್ತಿಗೆ ಸಿಬ್ಬಂದಿಯನ್ನು ಏಪ್ರಿಲ್ 30 ರಂದು ಏಕಾಏಕಿ ಸೇವೆಯಿಂದ ಬಿಡುಗಡೆ ಮಾಡಿರುವ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದರು.

ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಈ ತುಘಲಕ್ ನಿರ್ಧಾರ ಅವೈಜ್ಞಾನಿಕ ಮತ್ತು ಅಮಾನವೀಯ ನಡೆಯಾಗಿದೆ. ಆಡಳಿತ ಮಂಡಳಿ ಈ ಕ್ರಮದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ನೌಕರರ ಬೇಡಿಕೆಗಳಿಗೆ ಮಾನವೀಯತೆ ಸ್ಪಂದನೆ ಇಲ್ಲದಂತಾಗಿದೆ. 

ನೌಕರರ ತಾಳ್ಮೆ ಪರೀಕ್ಷಿಸದೆ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಇಲ್ಲವಾದರೆ 

ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಮಲ್ಲಿಕಾರ್ಜುನ್ ರಾಯಪ್ಪಗೌಡ, ನಿಜಗುಣ ಯಲಗೋಡ, ನೀಲಕಂಠ ಹಿರೇಮಠ್ ಹಾಗೂ ಹೊರಗುತ್ತಿಗೆ ನೌಕರ ಸಂಘದ ವಿಜಯ ಕುಮಾರ್ ಕೆಂಗಲ್, ಶೀಲ ಪ್ರಕಾಶ್ ದೊಡ್ಮನಿ, ಸವಿತಾ ಮಹೇಶ್ವರಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

 ನೌಕರರು ಕಳೆದ 18 ದಿನಗಳಿಂದ ಬಿಸಿಲು, ಮಳೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಈ ಪರಿಸ್ಥಿತಿಗೆ ಯಾರು ಹೊಣೆ? ಅವರ ಕುಟುಂಭ ಮತ್ತು ಮಕ್ಕಳ ಬದುಕಿನಲ್ಲಿ ವಿವಿ ಚೆಲ್ಲಾಟ ಆಡುತ್ತಿರುವುದು ಒಳ್ಳೆಯದಲ್ಲ 

ಶಿವಾ ಅಷ್ಠಗಿ 

ಬಿಜೆಪಿ ಯುವ ಮೋರ್ಚಾ ಮುಖಂಡ, ಕಲಬುರಗಿ