ಸಮಾಜ ಜಾಗೃತಿ, ಸಮಾನತೆ
ಆಳಂದ: ಕೆರೂರ ಗ್ರಾಮದಲ್ಲಿ ಭೀಮ ತರುಣ ಸಂಘದ ಆಶ್ರಯದಲ್ಲಿ ಸಮಾಜ ಜಾಗೃತಿ, ಸಮಾನತೆ ಹಾಗೂ ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿ ಎರಡು ದಿನಗಳ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಲಿವೆ.
ಥೈಲ್ಯಾಂಡ್ ದೇಶದಿಂದ ತರಿಸಲಾದ ತಥಾಗತ ಗೌತಮ ಬುದ್ಧರ ಐದು ಅಡಿ ಎತ್ತರದ ಕಂಚಿನ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ನೂತನವಾಗಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಉದ್ಘಾಟನೆ ಕಾರ್ಯಕ್ರಮವು ಇದೇ ಏಪ್ರಿಲ್ 29 ಮತ್ತು 30 ರಂದು ಜರುಗಲಿದೆ. ಬುದ್ಧ–2568, ಬಸವ–893 ಹಾಗೂ ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ಈ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ದೊರೆತಿದೆ.
ಏಪ್ರಿಲ್ 29ರಂದು ಬೆಳಿಗ್ಗೆ ತೊಟ್ಟಿಲು ಕಾರ್ಯಕ್ರಮದ ಪೂಜೆಯನ್ನು ಬೀರಣ್ಣ ಕಡಗಂಚಿ ನೆರವೇರಿಸಲಿದ್ದು, ಬಳಿಕ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಹಾಗೂ ಮಾಲಾರ್ಪಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಪಾಟೀಲ, ಗುಂಡಪ್ಪ ಉದ್ದನಶೆಟ್ಟಿ, ಕಲ್ಯಾಣಿ ಬ್ಯಾಗೆಳ್ಳಿ, ಸದಾಶಿವ ಮೂಲಗೆ ಭಾಗವಹಿಸಲಿದ್ದಾರೆ. ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅಕ್ಕನ ಬಳಗದಿಂದ ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತಿದ್ದು, ನಂತರ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಏಪ್ರಿಲ್ 30ರಂದು ಮುಂಜಾನೆ 8:30ಕ್ಕೆ ನೀಲಿ ಮತ್ತು ಪಂಚಶೀಲ ಧ್ವಜಾರೋಹಣ ಜರುಗಲಿದ್ದು, ಜೈಭೀಮ ತರುಣ ಸಂಘದ ಪ್ರಮುಖರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 5:30ಕ್ಕೆ ಆಳಂದ ಶಾಸಕ ಹಾಗೂ ಕರ್ನಾಟಕ ಸರಕಾರದ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರ ಅಮೃತ ಹಸ್ತದಿಂದ ಡಾ. ಅಂಬೇಡ್ಕರ್ ಭವನ ಉದ್ಘಾಟನೆ ನಡೆಯಲಿದೆ. ಇದೇ ವೇಳೆ ಬಂತೇ ಧಮ್ಮನಾಗ (ಬುದ್ಧವಿಹಾರ, ಹತ್ಯಾಳ – ಬಸವಕಲ್ಯಾಣ) ಅವರಿಂದ ಗೌತಮ ಬುದ್ಧರ ಕಂಚಿನ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ.
ಅದಾದ ನಂತರ ಗೌತಮ ಬುದ್ಧರ ಪ್ರತಿಮೆ ಹಾಗೂ ಅಂಬೇಡ್ಕರ್ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯನ್ನು ಮಹಾಂತೇಶ ಪಾಟೀಲ (ಪಿ.ಎಸ್.ಐ., ಮಾದನಹಿಪ್ಪರಗಾ) ಉದ್ಘಾಟಿಸಲಿದ್ದಾರೆ.
ಸಂಜೆ 6:00ಕ್ಕೆ ನಡೆಯುವ ಭಾರಿ ಬಹಿರಂಗ ಸಭೆಯಲ್ಲಿ ಸಿ.ಎಸ್. ಮಲ್ಲಿಕಾರ್ಜುನ ಶಾಸ್ತ್ರಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಬಸಣ್ಣ ಸಿಂಗೆ ಸಭೆಯನ್ನು ಉದ್ಘಾಟಿಸಲಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಸ್.ಪಿ. ಸುಳ್ಳದ್ ಅಧ್ಯಕ್ಷತೆ ವಹಿಸಲಿದ್ದು, ಪ್ರೊ. ಹೆಚ್.ಟಿ. ಪೋತೆ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಆರ್.ಕೆ. ಪಾಟೀಲ, ಡಾ. ಡಿ.ಜಿ. ಸಾಗರ, ಸುರೇಶ ಶರ್ಮಾ, ಅಣ್ಣಾರಾವ ಪಾಟೀಲ, ಮಾನಪ್ಪ ಕಟ್ಟಿಮನಿ, ಸಂಗಮೇಶ ಚಿರಾದಾರ, ಗೌತಮ ಕಾಂಬಳೆ, ಬಿ.ಆರ್. ಬುದ್ದಾ, ಶರಣಬಸಪ್ಪ ಕೋಡ್ಲಾ, ಜಗದೀಶ ಕೆ.ಜಿ., ಜಗನ್ನಾಥ ಶೇಗಜಿ ಧಂಗಾಪೂರ, ರಾಜಶೇಖರ ಯಂಕಂಚಿ, ಮಲ್ಲಿನಾಥ ಪಾಟೀಲ, ಸಿದ್ದರಾಮ ಪ್ಯಾಟಿ, ಶೆಳ್ಳಗಿ ದೇವೇಂದ್ರ, ಅಶೋಕ ಅಂಬಲಗಿ, ದಯಾನಂದ ಶೇರಿಕಾರ, ಶಿವಲಿಂಗಪ್ಪ ಯಳಮೇಲಿ, ಎ.ಬಿ. ಹೊಸಮನಿ, ಪ್ರೊ. ಜೀವಣಗಿ ಅಂಬಣ್ಣ, ಯಶ್ವಂತ ಶಿಂಧೆ, ಲಕ್ಷ್ಮಿಕಾಂತ ಹುಬಳಿ, ಪ್ರಕಾಶ ಮೂಲಭಾರತಿ, ಬಸಲಿಂಗಪ್ಪ ಗಾಯಕವಾಡ, ದತ್ತಾತ್ರೇಯ ಇಕ್ಕಳಕಿ, ಆನಂದ ಗಾಯಕವಾಡ, ರವಿ ಮದನಕರ್, ಸಿದ್ಧಾರ್ಥ ಅನಸಿರೆ, ದತ್ತಾತ್ರೇಯ ಕುಡಕಿ, ಸುರೇಶ ಹಾದಿಮನಿ, ಮಹಾದೇವ ಮೋಘಾ, ಅಣ್ಣಪ್ಪ ಹಾದಿಮನಿ, ಶೇಖಪ್ಪ ಶಂಕು, ಅಣ್ಣಾ ಸಾಹೇಬ್ ಅಂಜುಟಗಿ, ಗುರುನಾಥ ಸೊನ್ನದ್, ಅರ್ಜುನ ಭದ್ರೆ, ಬಿ.ಸಿ. ವಾಲಿ, ಹೆಚ್. ಶಂಕರ, ದತ್ತಾ ಕಟ್ಟಿಮನಿ, ರಾಜಕುಮಾರ ಸಿಂಗೆ ಹಾಗೂ ಶಾಂತಮಲ್ಲಪ್ಪ ಶಿವಯೋಗೆಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಭೀಮ ತರುಣ ಸಂಘದ ವತಿಯಿಂದ ಮನವಿ ಮಾಡಲಾಗಿದೆ.
ವರದಿ ಡಾ. ಅವಿನಾಶ ಎಸ್. ದೇವನೂರ
