ಡಾ. ಬಿ. ಆರ್. ಅಂಬೇಡ್ಕರ್ ಮೂರ್ತಿ ಅನಾವರಣ : 26 ರಂದು ಕೊರವಿ ನೇತೃತ್ವದಲ್ಲಿ ಸಭೆ

ಡಾ. ಬಿ. ಆರ್. ಅಂಬೇಡ್ಕರ್ ಮೂರ್ತಿ ಅನಾವರಣ : 26 ರಂದು ಕೊರವಿ ನೇತೃತ್ವದಲ್ಲಿ ಸಭೆ

ಡಾ. ಬಿ. ಆರ್. ಅಂಬೇಡ್ಕರ್ ಮೂರ್ತಿ ಅನಾವರಣ : 26 ರಂದು ಕೊರವಿ ನೇತೃತ್ವದಲ್ಲಿ ಸಭೆ 

ಚಿಂಚೋಳಿ : ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 135ನೇ ಜಯಂತ್ಯೋತ್ಸವ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮದ ಕುರಿತು ಚರ್ಚಿಸಲು ಆರ್.ಟಿ. ಓ ಮಂಜುನಾಥ ಕೊರವಿ ಅವರ ನೇತೃತ್ವದಲ್ಲಿ ಏಪ್ರಿಲ್ 26 ರವಿವಾರ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕಿನ ಎಡ ಮತ್ತು ಬಲ ಸಮುದಾಯದ ಹಿರಿಯ ಮುಖಂಡರ ಸಮ್ಮುಖದಲ್ಲಿ ಸಭೆ ಕರೆಯಲಾಗಿದೆ.

ಸಭೆಯಲ್ಲಿ ಸಮಾಜದ ಹಿರಿಯರಾದ ರಮೇಶ ಯಾಕಾಪೂರ್, ಭೀಮರಾವ್ ಟಿ.ಟಿ, ಗೋಪಾಲರಾವ ಕಟ್ಟಿಮನಿ, ಧೂಳಪ್ಪ ಹೊಡೆಬೀರನಳ್ಳಿ, ಮಾಣಿಕರಾವ ಗುಲಗುಂಜಿ, ಜಗನ್ನಾಥ ಕಟ್ಟಿ, ನರಸಪ್ಪ ಕಿವಣೋರಕರ್, ಶರಣಪ್ಪ ಮಾಳಗಿ, ಸುರೇಶ ಸೇರಿಕಾರ್, ವಿಜಯಕುಮಾರ್ ಘಾಟಗೆ, ಅಶೋಕ್ ಸುತ್ತಾರ ಅವರು ಭಾಗವಹಿಸಲಿದ್ದು, ತಾಲೂಕಿನ ಎಡ ಮತ್ತು ಬಲ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಸಲಹೆ ನೀಡಬೇಕೆಂದು ಪ್ರಕಟಣೆ ಮೂಲಕ ಅವರು ಕೋರಿದ್ದಾರೆ.