ರಾಜ್ಯದ ಒಳ ಮೀಸಲಾತಿಯ ಐತಿಹಾಸಿಕ ನಿರ್ಧಾರಕ್ಕೆ ಅಭಿನಂದನೆ: ಲಿಂಗರಾಜ ತಾರಫೈಲ್

ರಾಜ್ಯದ ಒಳ ಮೀಸಲಾತಿಯ  ಐತಿಹಾಸಿಕ ನಿರ್ಧಾರಕ್ಕೆ ಅಭಿನಂದನೆ: ಲಿಂಗರಾಜ ತಾರಫೈಲ್

ರಾಜ್ಯದ ಒಳ ಮೀಸಲಾತಿಯ ಐತಿಹಾಸಿಕ ನಿರ್ಧಾರಕ್ಕೆ ಅಭಿನಂದನೆ: ಲಿಂಗರಾಜ ತಾರಫೈಲ್ 

35 ವರ್ಷದ ಹೋರಾಟಕ್ಕೆ ಫಲ 

ಕಲಬುರ್ಗಿ ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಂಡ ಮಹತ್ವದ ನಿರ್ಧಾರಕ್ಕೆ ಕಲ್ಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ . ಈ ಕುರಿತು ಸಮಿತಿ ಅಧ್ಯಕ್ಷರಾದ ಲಿಂಗರಾಜ ತಾರಪೈಲ್ ಅವರು ಪತ್ರಿಕಾ ಪ್ರಕಟಣೆ ನೀಡಿದರು.

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಎಲ್ಲಾ ಸಚಿವರುಗಳಿಗೆ, ಜೊತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಜನಪ್ರತಿನಿಧಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. ರಾಜ್ಯದ ಸರ್ವಜಾತಿಯ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಶೇಕಡಾ 15ರ ಮೀಸಲಾತಿಯಲ್ಲಿ ಎಡಗೈಗೆ ಶೇಕಡಾ 5.25, ಬಲಗೈಗೆ ಶೇಕಡಾ 5.25 ಮತ್ತು ಇತರರಿಗೆ ಶೇಕಡಾ 4.5 ಮೀಸಲು ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಈ ನಿರ್ಧಾರವು ಸಮಾಜದ ಹಲವಾರು ಹೋರಾಟಗಾರರ ದೀರ್ಘಕಾಲದ ಹೋರಾಟದ ಫಲವಾಗಿದೆ. ಸುಮಾರು 35 ವರ್ಷಗಳ ಶ್ರಮಕ್ಕೆ ನ್ಯಾಯ ದೊರಕಿದಂತಾಗಿದೆ ಎಂದು ಲಿಂಗರಾಜ ತಾರಪೈಲ್ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ಈ ಕ್ರಮವು ವಿದ್ಯಾರ್ಥಿಗಳ ಭವಿಷ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಸಹಾಯಕವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.