ಅಂಬೇಡ್ಕರ್ ಅರಿವು ಅವಶ್ಯ: ಡಾ.ಜಯದೇವಿ ಗಾಯಕವಾಡ
ಚಕೋರದಲ್ಲಿ ವಿಶೇಷ ಉಪನ್ಯಾಸ
ಅಂಬೇಡ್ಕರ್ ಅರಿವು ಅವಶ್ಯ: ಡಾ.ಜಯದೇವಿ ಗಾಯಕವಾಡ
ಚಿಂಚೋಳಿ: ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶಿಕ್ಷಣದಿಂದ ಮಾತ್ರ ನಾವು ಸುಧಾರಣೆಯಾಗಬೇಕೆಂದು ಅನೇಕ ವಿಚಾರ ನಮ್ಮೆದುರಿಗೆ ಇಟ್ಟ ಅಂಬೇಡ್ಕರ್ ಅವರ ಅರಿವು ವಿದ್ಯಾರ್ಥಿಗಳು ತಿಳಿದುಕೊಳ್ಳವುದು ಅವಶ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಕರೆ ನೀಡಿದರು.
ಪಟ್ಟದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಟಅಕಾಡೆಮಿ ಮತ್ತು ಚಕೋರ ವೇದಿಕೆ, ಕನ್ನಡ ವಿಭಾಗದ ಸಂಯೋಗದೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸದಲ್ಲಿ ಆಶಯ ನುಡಿ ಆಡಿದರು. ಮಹಿಳೆಯರಿಗೆ ಈ ದೇಶದ ಪ್ರತಿಯೊಬ್ಬರಿಗೂ ಶ್ರಮಿಸಿದವರು. ಭಾರತದೇಶದ ಒಬ್ಬ ಶ್ರೇಷ್ಠ ತಜ್ಜರೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಯೋಜಕ ಅಶೋಕ ಹೂವಿನಬಾವಿ ಉಪನ್ಯಾಸ ನೀಡಿ
ನಮ್ನ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿ ಮಹಿಳೆಯರಿಗೆ, ಕಾರ್ಮಿಕರಿಗೆ,ದೀನ ದಲಿತ,ಬಡವರ ಪರವಾದ ಕೆಲಸ ಮಾಡಿದ ಮಹಾನ್ ಶ್ರೇಷ್ಠ ಜ್ಞಾನಿ ಅಂಬೇಡ್ಕರ್ ಎಂದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಬಸವರಾಜ ಎಂ. ಕೊನೇರಿ ವಹಿಸಿ ಡಾ.ಅಂಬೇಡ್ಕರ್ ತತ್ವಗಳನ್ನು ಹೇಳುವು ದಕ್ಕಿಂತ ಆಚರಣೆಗೆ ತರಬೇಕೆಂದರು.ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಪಾಲಾಮೂರ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಬಸವರಾಜ ಐನೋಳಿ, ಹಿರಿಯ ಕವಿ ರೇವಣಸಿದ್ಧಪ್ಪ ದುಕಾನ,ಡಾ.ಸಿದ್ಧಪ್ಪ ಹೊಸಮನಿ, ಡಾ.ಶೀಲಾದೇವಿ ಬಿರಾದಾರ,ಇಂಗ್ಲೀಷ ವಿಭಾಗದ ಡಾ.ಸತೀಶಕುಮಾರ ದೊಡ್ಡಮನಿ, ಉಪಸ್ಥಿತಿ ಇದ್ದರು. ಕುಮಾರಿ ಕಲ್ಪನಾ ಅಂಬೇಡ್ಕರ್ ಗೀತೆ ಹಾಡಿದರು, ಚಕೋರ ವೇದಿಕೆ ಜಿಲ್ಲಾ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ- ಪ್ರಾಸ್ತಾವಿಕ ನುಡಿ ಆಡುತ್ತಾ ಸಾಹಿತ್ಯ ಅಕಾಡೆಮಿ ಯೋಜನೆ,ಪ್ರಶಸ್ತ,ಪ್ರಕಟಣೆ ಹೇಳಿ, ಅಂಬೇಡ್ಕರ ಕೇವಲ ದಲಿತರಿಗೆ ಮಾತ್ರ ಸೀಮಿತರಾಗವುವದು ಬೇಡ ಅವರೊಬ್ಬ ದೇಶದ ಎಲ್ಲರ ಅಂಬೇಡ್ಕರ ಅವರ ಚಿಂತನೆ, ವಿಚಾರ ಇಂದಿಗೂ ಪ್ರಸ್ತುತವೆಂದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ
ಡಾ.ಬಸವರಾಜೇಶ್ವರಿ ಹಾಲು ನಿರೂಪಿಸಿದರು,ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಿರಾಜಪಾಶಾ ವಂದಿಸಿದರು.ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
