ಕಡಗಂಚಿ ಬಾಲಕಿಯರ ವಸತಿ ನಿಲಯ ಸ್ಥಳಾಂತರಕ್ಕೆ ವಿರೋಧ: ಗ್ರಾಮಸ್ಥರು, ಮತ್ತು ವಿದ್ಯಾರ್ಥಿನಿಯರ , ಹೋರಾಟ ತೀವ್ರಗೊಳ್ಳುವ ಎಚ್ಚರಿಕೆ
ಕಡಗಂಚಿ ಬಾಲಕಿಯರ ವಸತಿ ನಿಲಯ ಸ್ಥಳಾಂತರಕ್ಕೆ ವಿರೋಧ: ಗ್ರಾಮಸ್ಥರು, ಮತ್ತು ವಿದ್ಯಾರ್ಥಿನಿಯರ , ಹೋರಾಟ ತೀವ್ರಗೊಳ್ಳುವ ಎಚ್ಚರಿಕೆ
ಆಳಂದ: ತಾಲೂಕಿನ ಕಡಗಂಚಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಆಳಂದ ಪಟ್ಟಣಕ್ಕೆ ಸ್ಥಳಾಂತರಿಸುವ ಕ್ರಮಕ್ಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿನಿಯರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಕಡಗಂಚಿಯಲ್ಲಿ ನಡೆದಿದೆ.
ಕ್ಷೇತ್ರದ ಶಾಸಕ ಹಾಗೂ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್. ಪಾಟೀಲ ಅವರು ೧೯ ಜನವರಿ ೨೦೨೬ ರಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ-೨ (ಪ್ರ) ಎಂ.ಬಿ. ಲಾವಣ್ಯ ಅವರಿಗೆ ಪತ್ರ ಬರೆದು, ಕಡಗಂಚಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಆಳಂದ ಪಟ್ಟಣಕ್ಕೆ ಸ್ಥಳಾಂತರಿಸಿ ಅದನ್ನು ಬಾಲಕರ ವಸತಿ ನಿಲಯವನ್ನಾಗಿ ಪರಿವರ್ತಿಸಲು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಅಧೀನ ಕಾರ್ಯದರ್ಶಿಗಳು, ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವಸತಿ ನಿಲಯ ಸ್ಥಳಾಂತರಿಸುವಂತೆ ಆದೇಶ ಹೊರಡಿಸಿರುವುದು ತಿಳಿದುಬಂದಿದೆ.
ಈ ನಿರ್ಧಾರದಿಂದ ಅಸಮಾಧಾನಗೊಂಡ ಕಡಗಂಚಿ ಗ್ರಾಮಸ್ಥರು, ಪೋಷಕರು ಮತ್ತು ವಿದ್ಯಾರ್ಥಿನಿಯರು ಒಟ್ಟಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಗ್ರಾಮದಲ್ಲೇ ಈಗಾಗಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಾಲಕಿಯರ ವಸತಿ ನಿಲಯವನ್ನು ಸ್ಥಳಾಂತರಿಸುವುದು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರತಿಭಟನಾಕಾರರು ಮಾತನಾಡಿ, “ಗ್ರಾಮದ ಬಡ ಮತ್ತು ಹಿಂದುಳಿದ ವರ್ಗಗಳ ಬಾಲಕಿಯರಿಗೆ ಈ ವಸತಿ ನಿಲಯ ಬಹಳ ಉಪಯುಕ್ತವಾಗಿದೆ. ಇದನ್ನು ಪಟ್ಟಣಕ್ಕೆ ಸ್ಥಳಾಂತರಿಸುವುದರಿಂದ ಹಲವಾರು ವಿದ್ಯಾರ್ಥಿನಿಯರು ಶಿಕ್ಷಣದಿಂದ ದೂರವಾಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ವಸತಿ ನಿಲಯವನ್ನು ಸ್ಥಳಾಂತರಿಸಬಾರದು” ಎಂದು ಆಗ್ರಹಿಸಿದರು.
ಇನ್ನೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ ಗ್ರಾಮಸ್ಥರು, ಯಥಾಸ್ಥಿತಿಯಲ್ಲೇ ಕಡಗಂಚಿ ಗ್ರಾಮದಲ್ಲಿಯೇ ವಸತಿ ನಿಲಯವನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಈ ವಿಷಯ ಇದೀಗ ಸ್ಥಳೀಯ ಮಟ್ಟದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತವೆ ಎಂಬುದರತ್ತ ಸಾರ್ವಜನಿಕರ ಗಮನ ಸೆಳೆಯಲಾಗಿದೆ
ವಿದ್ಯಾರ್ಥಿನಿ ಐಶ್ವರ್ಯ ಮಾತನಾಡಿ ನಮ್ಮ ಹಾಸ್ಟೆಲ
ವರ್ಗಾ ವಣೆ ಮಾಡಬಾರದು ನಮಗೆ ತುಂಬಾ ಸಮಸ್ಯೆಯಾಗುತ್ತದೆ ಎಂದರು.
ಗ್ರಾಮಸ್ಥರಾದ ಲಾಲಬಿ ಮುಲ್ಲಾ ಮಾತನಾಡಿ ಯಾವುದೇ ಕಾರಣಕ್ಕೆ ಹಾಸ್ಟೆಲ ವರ್ಗಾವಣೆ ಮಾಡಲು ನಾವು ಬಿಡುವುದಿಲ್ಲ ವಿದ್ಯಾರ್ಥಿನಿಯರು ಆಳಂದದಿಂದ ಕಡಗಂಚಿಗೆ ಬರುವುದು ಬಹಳ ಕಷ್ಟವಾಗುತ್ತದೆ. ರಾಯಚೂರು ವಿಜಯನಗರ. ಕೊಪ್ಪಳ ಯಾದಗಿರ - ಹೊಸಪೇಟೆ. ವಿಜಯಪುರ . ಆಲಮೇಲ. ಹಾವೇರಿ ಮುಂತಾದ ಜಿಲ್ಲೆ ಮತ್ತು ಆಳಂದ ತಾಲೂಕಿನ ಯಳಸಂಗಿ ಮಾಡಿಯಾಳ ಧುತ್ತರಗಾವ ಮುಂತಾದ ಊರಿನಿಂದ ವಿದ್ಯಾರ್ಥಿನಿಯರು ಕೇಂದ್ರಿಯ ವಿಶ್ವವಿದ್ಯಾಲಯ
ವಿ.ವಿ.ಸಂಯುಕ್ತ ಪದವಿ ಪೂರ್ವ ಕಾಲೇಜು. ಸಿದ್ದೇಶ್ವರ ಬಿ.ಇಡಿ. ಕಾಲೇಜು ಸಾಯಿಪ್ರತಾಪ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಆದ್ದರಿಂದ ಹಾಸ್ಟೆಲ ಕಡಗಂಚಿಯಿಂದ ವರ್ಗಾವಣೆ ಮಾಡಬಾರದು ಎಂದರು. ವಿದ್ಯಾರ್ಥಿನಿಯರು ಮುಂಜಾನೆ ಉಪಹಾರ ಸೇವಿಸಿ 8ಗಂಟೆಯಿಂದ 3ಗಂಟೆಯವರೆಗೆ
ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದರು ವಿಷಯತಿಳಿದು ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನೆ ವಾಪಸ್ ಪಡೆದುಕೊಳ್ಳಲು ಮನವಿ ಮಾಡಿದರು ವಿದ್ಯಾರ್ಥಿನಿಯರು ನಾವು ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಬಂದು ಹಾಸ್ಟೆಲ ವರ್ಗಾವಣೆ ಮಾಡುವುದಿಲ್ಲ ಎಂಬ ಭರವಸೆ ನೀಡಿದಾಗ ನಾವು ಪ್ರತಿಭಟನೆ ವಾಪಸ್ ಪಡೆಯುತ್ತೇವೆ ಊಟ ಮಾಡುತ್ತೇವೆ ಎಂದು ಪಟ್ಟು ಹಿಡಿದರು ನಾಳೆ ಅಧಿಕಾರಿಗಳಿಗೆ
ನಿಮ್ಮ ಮನವಿ ಪತ್ರ ಸಲ್ಲಿಸುತ್ತೇವೆ ಮತ್ತು ನಾಳೆ ಮೇಲಾಧಿಕಾರಿಗಳು ಹಾಸ್ಟೇಲ ಗೆ ಭೇಟಿ ನೀಡುತ್ತಾರೆ ಎಂದು ಆಶ್ವಾಸನೆ ನೀಡಿದರು ಆಗ ವಿದ್ಯಾರ್ಥಿನಿಯರು ಪ್ರತಿಭಟನೆ ವಾಪಸ್ ಪಡೆದು 3:30ಕ್ಕೆ ಊಟ ಮಾಡಿದರು. ಈ ಸಂಧರ್ಭದಲ್ಲಿ ರಾಮಜಿ ಯುವಕ ಸಂಘದ ಅಧ್ಯಕ್ಷ ದತ್ತಾ ಬಮ್ಮನಳ್ಳಿ. ಲಾಲ್ ಬಿ ಮುಲ್ಲಾ. ಪ್ರಮೋದ ಡೋಣಿ.
ಸಂಜಕುಮಾರ ಘತ್ತರಗಿ ಶರಣು ವಗ್ಗಿ. ನಾಗರಾಜ ಜವಳಿ ಮುಂತಾದವರು ಉಪಸ್ಥಿತರಿದ್ದರು.
ಡಾಕ್ಟರ. ಅವಿನಾಶ ಎಸ್. ದೇವನೂರ ಸಾರಥ್ಯದಲ್ಲಿ ಜನಘರ್ಜನೆ ಕನ್ನಡ ನ್ಯೂಸ್
