ಸಮಯೋಚಿತ ಚಿಕಿತ್ಸೆ ನೀಡಿ ಹಾವು ಕಡಿದ ವ್ಯಕ್ತಿಯ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಸಮಯೋಚಿತ ಚಿಕಿತ್ಸೆ ನೀಡಿ ಹಾವು ಕಡಿದ ವ್ಯಕ್ತಿಯ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಸಮಯೋಚಿತ ಚಿಕಿತ್ಸೆ ನೀಡಿ ಹಾವು ಕಡಿದ ವ್ಯಕ್ತಿಯ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಕಲಬುರ್ಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಜನರಲ್ ಮೇಡಿಸಿನ್ ವಿಭಾಗದ ವೈದ್ಯರು ಹಾವು ಕಡಿಸಿಕೊಂಡು ಜೀವನ್ಮರಣದಲ್ಲಿ ಹೋರಾಡುತ್ತಿದ್ದ ವ್ಯಕ್ತಿಗೆ ಸಮಯೋಚಿತ ಚಿಕಿತ್ಸೆ ನೀಡಿ ಜೀವ ಉಳಿಸಿದ ಕೀರ್ತಿಗೆ ಪಾತ್ರರಾಗಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಲಬುರ್ಗಿ ಜಿಲ್ಲೆಯ ಗಂಜಲಖೇಡ್ ಗ್ರಾಮದ 34 ವರ್ಷದ ಲಕ್ಷ್ಮೀಕಾಂತ ಎಂಬ ವ್ಯಕ್ತಿಗೆ ವಿಷಕಾರಿ ಹಾವು ಕಚ್ಚಿತ್ತು ಅವನ ಮೈಯಲ್ಲಿ ವಿಷವೇರಿ ಆ ವ್ಯಕ್ತಿಯು ಜೀವನ್ಮರಣ ಮಧ್ಯೆ ಹೋರಾಡುತ್ತಿದ್ದನು ಅವನನ್ನು ಅವನ ಸಂಬಂಧಿಕರು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದರು ತಕ್ಷಣ ಆಸ್ಪತ್ರೆಯ ವೈದ್ಯರು ಅಪಾಯದಲ್ಲಿದ್ದ ವ್ಯಕ್ತಿಗೆ ತುರ್ತು ಚಿಕಿತ್ಸೆಗೆ ಮುಂದಾದರು ಅವನ ಬಲಪಾದದ ಮೇಲೆ ವಿಷಕಾರಿ ಹಾವು ಕಚ್ಚಿತ್ತು ಕೂಡಲೆ ಎಚ್ಚೆತ್ತುಕೊಂಡ ವೈದ್ಯ ಸಿಬ್ಬಂದಿ ರೋಗಿಯನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಿ ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿಸಿದರು. ಈಗಾಗಲೆ ಹಾವಿನ ವಿಷ ಮೈ ತುಂಬಾ ಹೋರಾಡುತ್ತಿರುವದನ್ನು ಅರಿತ ನುರಿತ ವೈದ್ಯ ಸಿಬ್ಬಂದಿ ಎ ಎಸ್ ವಿ (ಯ್ಯಾಂಟಿ ಸ್ನೇಕ್ ವೇನಮ್) ಇಂಜೆಕ್ಷನ್ ಕೊಡುಲು ಪ್ರಾರಂಭಿಸಿ ರೋಗಿಯ ಮೇಲೆ ತೀವ್ರ ನಿಗಾ ವಹಿಸಿದರು. ಅತ್ಯಂತ ದುಬಾರಿಯಾಗಿರುವ ಈ ಇಂಜೆಕ್ಷನ್ ಒಂದು ಡೋಸ್ ನೀಡಲಾಗುತ್ತದೆ ಆದರೆ ಕೆಲವು ಸಂದರ್ಭಗಳಲ್ಲಿ ಅತ್ಯಂತ ವಿಷಕಾರಿ ಹಾವು ಕಚ್ಚಿದಾಗ ಸುಮಾರು 10 ರಿಂದ 20 ಡೋಸ್ ವರೆಗೂ ನೀಡುವ ಸಾಧ್ಯತೆಗಳಿವೆ. ಅದೇ ರೀತಿ ಬಸವೇಶ್ವರ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ವ್ಯಕ್ತಿಗೂ ಅಪಾಯಕಾರಿ ಹಾವು ಕಚ್ಚಿ ರುವುದರಿಂದ ಸುಮಾರು 38 ಡೋಸ್ ಗಳನ್ನು ಕೊಡಬೇಕಾಯಿತು ಹೆಚ್ಚಿನ ಡೋಸ್ ಗಳನ್ನು ನೀಡಿದಾಗ ಬಹು ಅಂಗಾಂಗ ಗಳಿಗೆ ಹಾನಿಯಾಗುವ ಸಾಧ್ಯತೆ ಗಳಿರುತ್ತವೆ ಇದನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಚಿಕಿತ್ಸೆ ಮುಂದುವರಿಸಿದರು ಸುಮಾರು 3 ದಿನಗಳ ಕಾಲ ನಿರಂತರ ರಕ್ತ ಪರೀಕ್ಷೆ ಮಾಡಿದಾಗ 4 ನೇ ದಿನದಲ್ಲಿ ಅವನ ರಕ್ತದಲ್ಲಿದ್ದ ವಿಷವು ಕಡಿಮೆಯಾಗಿದ್ದು ಕಂಡು ಬಂದಾಗ ವೈದ್ಯರು ನಿಟ್ಟುಸಿರು ಬಿಟ್ಟರು ಆಗ ಅವನನ್ನು ಐಸಿಯುನಿಂದ ಹೊರಗೆ ಸ್ಥಳಾಂತಿರಸಲಾಯಿತು.ಸಮಯೋಚಿತ ಹಾಗೂ ಯಶಸ್ವಿ ವೈಧ್ಯಕಿಯ ಚಿಕಿತ್ಸೆಯಿಂದಾಗಿ ಅವನಿಗ ಜೀವದ ಅಪಾಯದಿಂದ ಪಾರಾಗಿದ್ದು ಅವನನ್ನು ಬಿಡುಗಡೆಗೊಳಿಸಲಾಗಿದೆ, ಆಯುಷ್ಮಾನ ಭಾರತದ ಯೋಜನೆ ಅಡಿಯಲ್ಲಿ ಔಷದೋಪಚಾರ ನೀಡಲಾಗಿದೆ. ಇನ್ನು ಅವನಿಗೆ ನಿರಂತರವಾಗಿ ಸುಮಾರು ಒಂದು ತಿಂಗಳು ಮೇಲ್ವೀಚಾರಣೆ ನಡೆಸಲಾಗುತ್ತದೆ.

ಈ ಯಶಸ್ವಿ ಚಿಕಿತ್ಸೆ ನೇರವೇರಿಸಿದ ತಂಡದಲ್ಲಿ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ ಸುರೇಶ್ ಹರಸೂರು, ಡಾ ಜಿ ಚನ್ನಮ್ಮ, ಡಾ ಅಭೀಷೇಕ್ ಮಾಲಿಪಾಟೀಲ, ಡಾ ಅಕ್ಷಯ್ ಮರಗೋಳ್, ಡಾ ಶರತ್ ಬಿರಾದಾರ, ಡಾ ಆದಿತ್ಯ ದೇಶಮುಖ್ ತುರ್ತು ನಿಗಾ ಘಟಕ ಹಾಗೂ ಔಷಧ ನಿರ್ಣಯ ಆರೈಕೆ ತಂಡದ ಡಾ ಉದಯ್ , ಡಾ ಸೋಹೈಲ್ ಇದ್ದ,ರು ಆಸ್ಪತ್ರೆಯ ವೈಧ್ಯಕಿಯ ಅಧೀಕ್ಷಕರಾದ ಡಾ ಮಲ್ಲಿಕಾರ್ಜುನ ತೇಗನೂರ ಸಲಹೆ ನೀಡಿದರು

ಈ ಯಶಸ್ವಿ ಚಿಕಿತ್ಸೆ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳ್ಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್, ಆಸ್ಪತ್ರೆಯ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ ಕಿರಣ ದೇಶಮುಖ, ಡಾ ಶರಣಬಸಪ್ಪ ಹರವಾಳ ಹಾಗೂ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಅಭಿನಂದಿಸಿದ್ದಾರೆ