ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹುಟ್ಟು ಹಬ್ಬ ಆಚರಣೆ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹುಟ್ಟು ಹಬ್ಬ ಆಚರಣೆ.
ಕಲಬುರಗಿ.ಹೈ.ಕ.ಶಿಕ್ಚಣ ಸಂಸ್ಥೆಯ ಬಾಲಕಿಯರ ವಿಜ್ನಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ 135 ನೇ ಜಯಂತಿಯನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ.ಮಹೇಶ ಗಂವ್ಹಾರ ಅವರು ಅಂಬೇಡ್ಕರ್ ಅವರು ಈ ದೇಶದ ದೀನ ದಲಿತರು,ಹಿಂದುಳಿದವರ ಧ್ವನಿಯಾಗಿ ಅವರಿಗೆ ಬೇಕಾದ ಹಕ್ಕುಗಳನ್ನು ಕಲ್ಪಿಸಿಕೊಟ್ಟ ಮಹನಿಯರು ಹಾಗಾಗಿ ಇಂದಿಗೂ ಅವರು ನಮಗೆ ಪ್ರಾತಃ ಸ್ಮರಣಿಯರು ಎಂದು ನುಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ವಿಜಯಲಕ್ಷ್ಮಿ ಪಾಕಿನ್,ರಾಜಶ್ರೀ ಹಾಗೂ ಸಿಬ್ಬಂದಿ ವರ್ಗದ ಅನಸುಯಾ ಗಾದಾ,ಶಿಲ್ಪಕಲಾ ಗೋಲಗೇರಿ,ಬಸವರಾಜ,ಶಾರಾದ,ಉಪಸ್ತಿತರಿದ್ದರು
